ವಿಶ್ವಕಪ್ 2023 ಆಯೋಜನೆ ಬಿಸಿಸಿಐಗೆ ದುಬಾರಿ: ಭಾರತ ಸರ್ಕಾರಕ್ಕೆ ಪಾವತಿಸಬೇಕಿದೆ 963 ಕೋಟಿ ರೂ. ತೆರಿಗೆ!

ಐಸಿಸಿ ಏಕದಿನ ವಿಶ್ವಕಪ್ 2023 ಅನ್ನು ಭಾರತದಲ್ಲಿ ಆಯೋಜಿಸಲಾಗುತ್ತಿದೆ. ಇದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿದೆ.
ವಿಶ್ವಕಪ್ ಟ್ರೋಫಿ
ವಿಶ್ವಕಪ್ ಟ್ರೋಫಿ
Updated on

ಐಸಿಸಿ ಏಕದಿನ ವಿಶ್ವಕಪ್ 2023 ಅನ್ನು ಭಾರತದಲ್ಲಿ ಆಯೋಜಿಸಲಾಗುತ್ತಿದೆ. ಇದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(BCCI) ಈಗಾಗಲೇ ಸಿದ್ಧತೆಗಳನ್ನು ಪ್ರಾರಂಭಿಸಿದೆ. ಈ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ವಿಶ್ವಕಪ್‌ನಂತಹ ಕಾರ್ಯಕ್ರಮಗಳ ವೇಳಾಪಟ್ಟಿಯನ್ನು ಒಂದು ವರ್ಷ ಮುಂಚಿತವಾಗಿ ಬಿಡುಗಡೆ ಮಾಡಿತ್ತು. ಆದರೆ ಈ ಬಾರಿ ಅದು ಇನ್ನೂ ನಡೆದಿಲ್ಲ. ಇದೀಗ ಹೊರಬರುತ್ತಿರುವ ವರದಿಗಳ ಪ್ರಕಾರ ಬಿಸಿಸಿಐ ಭಾರತ ಸರ್ಕಾರಕ್ಕೆ ಐಸಿಸಿ ಪರವಾಗಿ 936 ಕೋಟಿ ರೂಪಾಯಿ ತೆರಿಗೆ ಪಾವತಿಸಲಿದೆ.

ಈ ಪ್ರಕ್ರಿಯೆ ಪೂರ್ಣಗೊಂಡ ಬಳಿಕವಷ್ಟೇ 2023ರ ಏಕದಿನ ವಿಶ್ವಕಪ್‌ನ ವೇಳಾಪಟ್ಟಿ ಕೂಡ ಬಿಡುಗಡೆಯಾಗಲಿದೆ. ಐಸಿಸಿ ಏಕದಿನ ವಿಶ್ವಕಪ್‌ನ ಪ್ರಸಾರದಿಂದ ಸುಮಾರು 4,500 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಇದೆ. ಅದೇ ಸಮಯದಲ್ಲಿ, ಐಸಿಸಿ ಒಪ್ಪಂದದ ಪ್ರಕಾರ, ದೊಡ್ಡ ಈವೆಂಟ್‌ನಲ್ಲಿ ಆತಿಥೇಯ ದೇಶದಿಂದ ತೆರಿಗೆ ವಿನಾಯಿತಿಗೆ ಅವಕಾಶವಿದೆ. ಆದರೆ 2016ರ ಟಿ20 ವಿಶ್ವಕಪ್‌ನಲ್ಲಿ ಇದು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಬಿಸಿಸಿಐ ಮತ್ತು ICC ನಡುವೆ ವಿವಾದ ಶುರುವಾಗಿತ್ತು.

ಈ ವಿವಾದದ ನಂತರ, ಬಿಸಿಸಿಐ ಕೇಂದ್ರೀಯ ಪೂಲ್‌ನಿಂದ ಐಸಿಸಿ ಪಡೆದ ಮೊತ್ತದಲ್ಲಿ ಸುಮಾರು 200 ಕೋಟಿ ರೂಪಾಯಿಗಳ ಕಡಿತವನ್ನು ಎದುರಿಸಬೇಕಾಯಿತು. ಅದೇ ಸಮಯದಲ್ಲಿ, ಕ್ರಿಕ್‌ಇನ್‌ಫೋ ವರದಿಯ ಪ್ರಕಾರ, 2016 ರಿಂದ 2023 ರವರೆಗೆ, ಬಿಸಿಸಿಐ ಐಸಿಸಿಯ ಸೆಂಟ್ರಲ್ ಪೂಲ್‌ನಿಂದ ಸುಮಾರು 3400 ಕೋಟಿಗಳನ್ನು ಪಡೆಯಬೇಕಾಗಿದ್ದು, ಅದರಲ್ಲಿ ಈ ತೆರಿಗೆಯನ್ನು ಈ ಆದಾಯದಿಂದ ಕಡಿತಗೊಳಿಸಲಾಗುತ್ತದೆ.

ಈ ತೆರಿಗೆ ವಿವಾದ ಶೀಘ್ರದಲ್ಲಿಯೇ ಇತ್ಯರ್ಥವಾಗಲಿದೆ ಎಂದು ಬಿಸಿಸಿಐ ಭರವಸೆ ವ್ಯಕ್ತಪಡಿಸಿದೆ. ಮತ್ತೊಂದೆಡೆ, ಕ್ರಿಕ್ಇನ್ಫೋ ವರದಿಯ ಪ್ರಕಾರ, ODI ವಿಶ್ವಕಪ್ 2023 ಅಕ್ಟೋಬರ್ 5ರಿಂದ ಪ್ರಾರಂಭವಾಗಬಹುದು. ಇದರಲ್ಲಿ ಒಟ್ಟು 10 ತಂಡಗಳು ಈ ಬಾರಿ ಭಾಗವಹಿಸಲಿವೆ. ಈ ಮೆಗಾ ಕಾರ್ಯಕ್ರಮವನ್ನು ಆಯೋಜಿಸಲು ಸುಮಾರು 12 ಮೈದಾನಗಳನ್ನು ಬಿಸಿಸಿಐ ಶಾರ್ಟ್‌ಲಿಸ್ಟ್ ಮಾಡಿದೆ, ಇದರಲ್ಲಿ ಅಂತಿಮ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಆಯೋಜಿಸಬಹುದು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com