WPL-2023: ಯುಪಿ ವಾರಿಯರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಗೆ 72 ರನ್ ಭರ್ಜರಿ ಜಯ, ಫೈನಲ್ ಗೆ ಲಗ್ಗೆ
ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಂದು ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಮಹಿಳಾ ತಂಡ 72 ರನ್ ಗಳ ಭರ್ಜರಿ ಜಯ ಸಾಧಿಸಿದ್ದು, ಫೈನಲ್ ಗೆ ಲಗ್ಗೆ ಇಟ್ಟಿದೆ.
Published: 24th March 2023 11:27 PM | Last Updated: 25th March 2023 03:31 PM | A+A A-

ಮುಂಬೈ ಇಂಡಿಯನ್ಸ್ ಗೆ ಜಯ
ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಇಂದು ನಡೆದ ಎಲಿಮಿನೇಟರ್ ಪಂದ್ಯದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಮಹಿಳಾ ತಂಡ 72 ರನ್ ಗಳ ಭರ್ಜರಿ ಜಯ ಸಾಧಿಸಿದ್ದು, ಫೈನಲ್ ಗೆ ಲಗ್ಗೆ ಇಟ್ಟಿದೆ.
ಮುಂಬೈ ಇಂಡಿಯನ್ಸ್ ನೀಡಿದ್ದ 183 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಯುಪಿ ವಾರಿಯರ್ಸ್ ಮಹಿಳಾ ತಂಡ 17.4 ಓವರ್ ನಲ್ಲಿ ಕೇವಲ 110 ರನ್ ಗಳಿಗೆ ಆಲೌಟ್ ಆಗಿ 72 ರನ್ ಗಳ ಅಂತರದಲ್ಲಿ ಸೋಲುಕಂಡಿತು.
WWW - FIRST EVER HAT-TRICK IN THE #WPL! #OneFamily #MumbaiIndians #AaliRe #WPL2023 #MIvUPWpic.twitter.com/JxJ0kecQ6S
— Mumbai Indians (@mipaltan) March 24, 2023
ಯುಪಿ ವಾರಿಯರ್ಸ್ ಪರ ಕಿರಣ್ ನವಗಿರೆ 43 ರನ್ ಗಳಿಸಿ ಆಸರೆಯಾದರೂ ಅವರಿಗೆ ತಂಡದ ಇತರೆ ಆಟಗಾರ್ತಿಯರಿಂದ ಉತ್ತಮ ಸಾಥ್ ನೀಡಲಿಲ್ಲ. ಗ್ರೇಸ್ ಹ್ಯಾರಿಸ್ 14 ರನ್ ಗಳಿಸಿದರೆ, ದೀಪ್ತಿ ಶರ್ಮಾ 16ರನ್ ಗಳಿಸಿ ಔಟಾದರು. ಅಂತಿಮವಾಗಿ ಯುಪಿ ವಾರಿಯರ್ಸ್ ತಂಡ 17.4 ಓವರ್ ನಲ್ಲಿ ಕೇವಲ 110 ರನ್ ಗಳಿಗೆ ಆಲೌಟ್ ಆಗಿ 72 ರನ್ ಗಳ ಅಂತರದಲ್ಲಿ ಸೋಲುಕಂಡಿತು.
ಇದನ್ನೂ ಓದಿ: ವಿಶ್ವಕಪ್ 2023 ಆಯೋಜನೆ ಬಿಸಿಸಿಐಗೆ ದುಬಾರಿ: ಭಾರತ ಸರ್ಕಾರಕ್ಕೆ ಪಾವತಿಸಬೇಕಿದೆ 963 ಕೋಟಿ ರೂ. ತೆರಿಗೆ!
ಈ ಗೆಲುವಿನ ಮೂಲಕ ಮುಂಬೈ ಇಂಡಿಯನ್ಸ್ ತಂಡ ಹಾಲಿ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಫೈನಲ್ ಪ್ರವೇಶ ಮಾಡಿದ್ದು, ಇದೇ ಮಾರ್ಚ್ 26 ಭಾನುವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಪ್ರಶಸ್ತಿಗಾಗಿ ಎದುರಿಸಲಿದೆ.
Wow, @natsciver and @wongi95 really knocked it out with an incredible performance
— Jhulan Goswami (@JhulanG10) March 24, 2023
We are into the finals! @mipaltan @delhiCapitals! see you on Sunday :)#MumbaiIndians #AaliRe #IntoTheFinals #WPL2023 #MIvUPW pic.twitter.com/eQya0452bi
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ ತಂಡ ನ್ಯಾಟ್ ಸ್ಕಿವರ್-ಬ್ರಂಟ್ (72 ರನ್), ಮೆಲಿ ಕೆರ್ (29 ರನ್) ಮತ್ತು ಹೇಲಿ ಮ್ಯಾಥ್ಯೂಸ್ (26 ರನ್) ಉತ್ತಮ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು.