
ಆರ್ ಸಿಬಿ ತಂಡ
ಬೆಂಗಳೂರು: ಐಪಿಎಲ್ 2023ರ 16ನೇ ಆವೃತ್ತಿಯಲ್ಲಿ ಆರ್ ಸಿಬಿ ಮತ್ತು ಲಖನೌ ತಂಡದ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು ಪಂದ್ಯವನ್ನು ಸ್ಥಗಿತಗೊಳಿಸಲಾಗಿದೆ.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಿಧಾನಗತಿಯಲ್ಲಿ ಬ್ಯಾಟಿಂಗ್ ಆರಂಭಿಸಿತ್ತು. ಆರಂಭಿಕರಾಗಿ ಕಣಕ್ಕೀಳಿದ ವಿರಾಟ್ ಕೊಹ್ಲಿ 31 ರನ್ ಗಳಿಸಿ ಔಟಾದರೆ, ಫಾಫ್ ಡುಪ್ಲೇಸಿಸ್ ಅಜೇಯ 40 ರನ್ ಗಳಿಸಿ ಆಡುತ್ತಿದ್ದಾರೆ.
ಇದನ್ನೂ ಓದಿ: M****c**d: ಅದ್ಭುತ ಕ್ಯಾಚ್‌ನಿಂದ ಔಟಾದ ನಂತರ ಸೂರ್ಯಕುಮಾರ್ ನಿಂದನೀಯ ಪದ ಬಳಕೆ, ವೀಡಿಯೊ ವೈರಲ್!
ಇನ್ನುಳಿದಂತೆ ಅನುಜ್ ರಾವತ್ 9, ಗ್ಲೇನ್ ಮ್ಯಾಕ್ಸ್ ವೆಲ್ 4, ಸುಯಶ್ ಪ್ರಭುದೇಸಾಯಿ 6 ರನ್ ಗಳಿಸಿ ಔಟಾಗಿದ್ದಾರೆ. ಇನ್ನು ದಿನೇಶ್ ಕಾರ್ತಿಕ್ ಅಜೇಯ 1 ರನ್ ಗಳಿಸಿದ್ದಾರೆ. ಆರ್ ಸಿಬಿ 15.2 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 93 ರನ್ ಪೇರಿಸಿದೆ.
ಲಖನೌ ಪರ ರವಿ ಬಿಷ್ಣೋಯ್ 2, ಅಮಿತ್ ಮಿಶ್ರಾ ಹಾಗೂ ಗೌತಮ್ ತಲಾ 1 ವಿಕೆಟ್ ಪಡೆದಿದ್ದಾರೆ.