"ಉತ್ತಮ ಪ್ರದರ್ಶನ ನೀಡಲು ರೋಹಿತ್ ಶರ್ಮಾಗೆ ಹೆಚ್ಚುವರಿ ಪ್ರೇರಣೆ ಅಗತ್ಯವಿಲ್ಲ": ರವಿಶಾಸ್ತ್ರಿ
ಐಪಿಎಲ್ ಟೂರ್ನಿ ನಿರ್ಣಾಯಕ ಹಂತ ತಲುಪಿರುವಂತೆಯೇ ಪ್ಲೇ ಆಫ್ ಹಂತಕ್ಕೇರಲು ಹರಸಾಹಸ ಪಡುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾಗೆ ಉತ್ತಮ ಪ್ರದರ್ಶನ ನೀಡಲು ಹೆಚ್ಚುವರಿ ಪ್ರೇರಣೆ ಅಗತ್ಯವಿಲ್ಲ ಎಂದು ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
Published: 21st May 2023 03:19 PM | Last Updated: 13th September 2023 05:51 PM | A+A A-

ರೋಹಿತ್ ಶರ್ಮಾ
ಮುಂಬೈ: ಐಪಿಎಲ್ ಟೂರ್ನಿ ನಿರ್ಣಾಯಕ ಹಂತ ತಲುಪಿರುವಂತೆಯೇ ಪ್ಲೇ ಆಫ್ ಹಂತಕ್ಕೇರಲು ಹರಸಾಹಸ ಪಡುತ್ತಿರುವ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾಗೆ ಉತ್ತಮ ಪ್ರದರ್ಶನ ನೀಡಲು ಹೆಚ್ಚುವರಿ ಪ್ರೇರಣೆ ಅಗತ್ಯವಿಲ್ಲ ಎಂದು ಟೀಂ ಇಂಡಿಯಾ ಮಾಜಿ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ.
ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಗೆಲ್ಲಲೇಬೇಕಾದ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಜಿಯನ್ಸ್ ತಂಡ ಸಜ್ಜಾಗಿದ್ದು, ಭಾರತದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ರೋಹಿತ್ ಶರ್ಮಾ ಅವರನ್ನು ಬೆಂಬಲಿಸಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಸ್ಟುಡಿಯೋದಲ್ಲಿ ಮಾತನಾಡಿದ ರವಿಶಾಸ್ತ್ರಿ, "ರೋಹಿತ್‌ಗೆ ಯಾವುದೇ ಪ್ರೇರಣೆ ಅಗತ್ಯವಿಲ್ಲ. ರೋಹಿತ್ ಅವರ ದುರಾದೃಷ್ಟ ಅವರ ಬ್ಯಾಟ್‌ನಿಂದ ರನ್ ಹೊರಬರುತ್ತಿಲ್ಲ.. ಅವರು ಎರಡು ಅಥವಾ ಮೂರು ಎಸೆತಗಳನ್ನು ಆಡಿದ ನಂತರ ಅವರು ಔಟ್ ಆಗುತ್ತಿದ್ದಾರೆ. ಆದರೆ ಒಮ್ಮೆ ರನ್ ಹರಿದುಬರಲು ಪ್ರಾರಂಭವಾದರೆ ಅವರ ನೈಜ ಆಟ ಹೊರಬರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಕ್ಕೆ ಮಳೆ ಭೀತಿ; ಪಂದ್ಯ ರದ್ದಾದರೆ ಲಾಭ ಯಾರಿಗೆ?
ಒಮ್ಮೆ ರೋಹಿತ್ ಬ್ಯಾಟ್ ಅಬ್ಬರಿಸಲು ಆರಂಭಿಸಿದರೆ ಆತನನ್ನು ಕಟ್ಟಿಹಾಕುವುದು ಕಷ್ಟ. ಅವರ ಬ್ಯಾಟಿಂಗ್ ನೈಜತೆ ಈಗಾಗಲೇ ಸಾಕಷ್ಟು ಪಂದ್ಯಗಳಲ್ಲಿ ಪ್ರದರ್ಶಿಸಿದ್ದಾರೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಹಾಲಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ನಾಯಕನಿಂದ ಅಷ್ಟೇನೂ ಉತ್ತಮ ಪ್ರದರ್ಶನ ಮೂಡಿ ಬಂದಿಲ್ಲ.. ಇದುವರೆಗೆ ಆಡಿರುವ 13 ಪಂದ್ಯಗಳಲ್ಲಿ 19.77 ಸರಾಸರಿಯೊಂದಿಗೆ ಕೇವಲ 257 ರನ್ ಗಳಿಸಿದ್ದಾರೆ. ಇದುವರೆಗಿನ ಋತುವಿನಲ್ಲಿ ಅವರು ಕೇವಲ ಒಂದು ಅರ್ಧಶತಕವನ್ನು ಗಳಿಸಲು ಸಮರ್ಥರಾಗಿದ್ದಾರೆ.