ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು; ಆರ್‌ಸಿಬಿ ಪ್ಲೇಆಫ್ ಕನಸು ಭಗ್ನ, ಹತಾಶೆಯಿಂದ ಕಿಂಗ್ ಕೊಹ್ಲಿ ಮಾಡಿದ್ದೇನು?
ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ಆರು ವಿಕೆಟ್‌ಗಳ ಸೋಲು ಕಂಡ ಆರ್‌ಸಿಬಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರಿಂದ ಹೊರಬಿದ್ದಿದ್ದಿದೆ.
Published: 22nd May 2023 10:33 AM | Last Updated: 22nd May 2023 10:33 AM | A+A A-

ವಿರಾಟ್ ಕೊಹ್ಲಿ
ಬೆಂಗಳೂರು: ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ ಆರು ವಿಕೆಟ್‌ಗಳ ಸೋಲು ಕಂಡ ಆರ್‌ಸಿಬಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023 ರಿಂದ ಹೊರಬಿದ್ದಿದ್ದಿದೆ.
ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದ ಆರ್‌ಸಿಬಿ ಜಿಟಿ ಎದುರಿಗೆ ಮುಗ್ಗರಿಸಿದ್ದು, ಐದು ಬಾರಿ ಐಪಿಎಲ್ ಕಪ್ ಗೆದ್ದಿರುವ ಮುಂಬೈ ಇಂಡಿಯನ್ಸ್ ಪ್ಲೇಆಫ್‌ಗೆ ಲಗ್ಗೆ ಇಡಲು ಅವಕಾಶ ಮಾಡಿಕೊಟ್ಟಿತು. ಒಂದು ವೇಳೆ ಆರ್‌ಸಿಬಿ ಗೆದ್ದಿದ್ದರೆ ಉತ್ತಮ ರನ್ ರೇಟ್ ಹೊಂದಿದ್ದ ಕಾರಣ ಪ್ಲೇಆಫ್‌ಗೆ ಹೋಗುವ ಅವಕಾಶ ಸಿಗುತ್ತಿತ್ತು.
ಆರ್‌ಸಿಬಿಯ ಸೋಲಿನ ನಂತರ ತಂಡದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ, ತೀವ್ರ ನಿರಾಶೆಯಲ್ಲಿ ಮುಳುಗಿದ್ದಾರೆ. ಜಿಟಿ ಬ್ಯಾಟರ್ ವಿಜಯ್ ಶಂಕರ್ ಅವರ ಬಾಲನ್ನು ಕ್ಯಾಚ್ ಹಿಡಿಯುವ ವೇಳೆ ಗಾಯಗೊಂಡು ಡಗೌಟ್‌ನಲ್ಲಿ ಕುಳಿತಿದ್ದರು. ಆರ್‌ಸಿಬಿ 6 ವಿಕೆಟ್ ಸೋಲು ಕಂಡ ಬಳಿಕ ಹತಾಶೆ ಮತ್ತು ನಿರಾಶೆಯಲ್ಲಿ ಮುಳುಗಿದ ಕೊಹ್ಲಿ, ಪೆವಿಲಿಯನ್‌ನಲ್ಲಿ ನೀರಿನ ಬಾಟಲಿಯನ್ನು ಎಸೆಯುವ ಮೂಲಕ ತಮ್ಮ ಭಾವನೆಗಳನ್ನು ಹೊರಹಾಕಿದರು.
Deepest gratitude to our incredible fans for standing by us through every cheer and challenge this season.
— Royal Challengers Bangalore (@RCBTweets) May 22, 2023
No matter the ground, the weather or the result, your unwavering support has been our greatest strength.
We carry your passion and love within our hearts. Thank you for… pic.twitter.com/40i6m1pgdz
ಈಮಧ್ಯೆ, ಮೊದಲ ಇನಿಂಗ್ಸ್‌ನಲ್ಲಿ ಕೊಹ್ಲಿ ಅಬ್ಬರದ ಆಟವಾಡಿದರು. ಸತತ ಎರಡನೇ ಬಾರಿಗೆ ಶತಕ ಗಳಿಸುವ ಮೂಲಕ ಆರ್‌ಸಿಬಿಗೆ ನೆರವಾದರು. ಆರ್‌ಸಿಬಿ 20 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 197 ರನ್ ಕಲೆಹಾಕಿತು. ಕಿಂಗ್ ಕೊಹ್ಲಿ ಕೇವಲ 61 ಎಸೆತಗಳಲ್ಲಿ 101 ರನ್‌ಗಳನ್ನು ಪೇರಿಸಿ ಅಜೇಯರಾಗಿ ಉಳಿದರು. ಅವರ ಬ್ಯಾಟಿನಿಂದ 13 ಬೌಂಡರಿಗಳು ಮತ್ತು ಒಂದು ಸಿಕ್ಸರ್ ಸಿಡಿಯಿತು.
ಇದನ್ನೂ ಓದಿ: ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಆರ್‌ಸಿಬಿ, ಪ್ಲೇಆಪ್ಗೆ ಲಗ್ಗೆಯಿಟ್ಟ ಮುಂಬೈ
ಕೊಹ್ಲಿ ಅವರ ಈ ಶತಕವು ಈ ಐಪಿಎಲ್ ಆವೃತ್ತಿಯಲ್ಲಿ ದಾಖಲೆ ಬರೆದಿದ್ದು, ಅವರ ಮಾಜಿ ಸಹ ಆಟಗಾರ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮೀರಿಸಿದೆ. ಈ ಸಾಧನೆಯೊಂದಿಗೆ ಕೊಹ್ಲಿ ಇದೀಗ ಟೂರ್ನಿಯ ಇತಿಹಾಸದಲ್ಲಿ ಅತಿ ಹೆಚ್ಚು ಶತಕ (7) ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆದಾಗ್ಯೂ, ಕೊಹ್ಲಿಯ ವಿರೋಚಿತ ಪ್ರಯತ್ನದ ಹೊರತಾಗಿಯೂ, ಅಂತಿಮವಾಗಿ ಕೇವಲ 52 ಎಸೆತಗಳಲ್ಲಿ ಶುಭಮನ್ ಗಿಲ್ ಅವರ ಶತಕ ಗಮನ ಸೆಳೆಯಿತು. ಗಮನಾರ್ಹವಾಗಿ, ಇದು ಪಂದ್ಯಾವಳಿಯಲ್ಲಿ ಗಿಲ್ ಅವರ ಸತತ ಎರಡನೇ ಶತಕವಾಗಿದ್ದು, ಅವರ ಸಾಧನೆ ಶ್ಲಾಘನೆಗೆ ಕಾರಣವಾಯಿತು. ಓಪನರ್‌ನ ಅದ್ಭುತ ಇನಿಂಗ್ಸ್ ಜಿಟಿಯನ್ನು ಸಮಗ್ರ ಗೆಲುವಿನತ್ತ ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಕೊಹ್ಲಿಯ ಶತಕವನ್ನು ಮರೆಮಾಚಿತು ಮತ್ತು ಆರ್‌ಸಿಬಿಯನ್ನು ಐಪಿಎಲ್ ಟೂರ್ನಿಯಿದ ಹೊರಹಾಕಲು ಕಾರಣವಾಯಿತು.