ಕೂಕಬುರಾ ಅಲ್ಲ.. ಡ್ಯೂಕ್ ಚೆಂಡಿನಲ್ಲೇ ಭಾರತ-ಆಸ್ಟ್ರೇಲಿಯಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್: ಬಿಸಿಸಿಐ ಸ್ಪಷ್ಟನೆ
ಭಾರತ-ಆಸ್ಚ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಪಂದ್ಯದಲ್ಲಿ ಬಳಸಲಾಗುವ ಚೆಂಡಿನ ವಿವಾದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ನಿರ್ಣಯ ಕೈಗೊಂಡಿದೆ.
Published: 23rd May 2023 01:57 PM | Last Updated: 23rd May 2023 02:31 PM | A+A A-

ನವದೆಹಲಿ: ಭಾರತ-ಆಸ್ಚ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಪಂದ್ಯದಲ್ಲಿ ಬಳಸಲಾಗುವ ಚೆಂಡಿನ ವಿವಾದಕ್ಕೆ ಸಂಬಂಧಿಸಿದಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮಹತ್ವದ ನಿರ್ಣಯ ಕೈಗೊಂಡಿದೆ.
ಈ ಹಿಂದೆ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಕೂಕಬುರಾ ಚೆಂಡು ಬಳಕೆ ಕುರಿತಂತೆ ಭಾರಿ ಚರ್ಚೆ ಆರಂಭವಾಗಿತ್ತು. ಆಸ್ಚ್ರೇಲಿಯಾದ ಮಾಜಿ ಆಟಗಾರರು ಕೂಕಬುರಾ ಬಾಲ್ನಲ್ಲೇ ಪಂದ್ಯವನ್ನಾಡುವ ಮಾತುಗಳನ್ನಾಡಿದ್ದರು. ಇದಕ್ಕೆ ಬೆಂಬಲ ನೀಡಿದ್ದ ಮಾಜಿ ಆಸಿಸ್ ಕ್ರಿಕೆಟ್ ಆಟಗಾರ ರಿಕ್ಕಿ ಪಾಂಟಿಂಗ್ ಕೂಕಬುರಾ ಚೆಂಡಿನಲ್ಲೇ ಫೈನಲ್ ಪಂದ್ಯನಡೆಯಲಿದ್ದು, ಕೂಕಬುರಾ ಬಾಲ್ನಲ್ಲೇ ಕಣಕ್ಕಿಳಿಯುತ್ತೇವೆ ಎಂದಿದ್ದರು.
”ಆಸ್ಟ್ರೇಲಿಯದ ವೇಗದ ಬ್ಯಾಟಿಂಗ್ ಮತ್ತು ಭಾರತದ ಅಗ್ರ ಕ್ರಮಾಂಕ ಈ ಪಂದ್ಯದ ಪ್ರಮುಖ ಹೈಲೇಟ್ ಆಗಿದೆ. ಭಾರತೀಯ ಸ್ಪಿನ್ನರ್‌ಗಳು ಮತ್ತು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್‌ಗಳ ಕಾದಾಟ ರೋಚಕತೆಯಿಂದ ಕೂಡಿರುತ್ತದೆ. ಓವಲ್‌ನಲ್ಲಿ ಮೈದಾನದಲ್ಲಿ ಹೀಗೆ ನಡೆಯುವುದು ಖಚಿತ. ಓವಲ್ ಪಿಚ್ ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ಗಳಿಗೆ ಉತ್ತಮವಾಗಿರುತ್ತದೆ ಮತ್ತು ಸ್ವಲ್ಪ ಪ್ರಮಾಣದಲ್ಲಿ ಸ್ಪಿನ್ನರ್ಗಳಿಗೆ ಸಹ ಬೆಂಬಲಿಸುತ್ತದೆ. ಡ್ಯೂಕ್ ಅಷ್ಟೊಂದು ಪರಿಣಾಮಕಾರಿ ಇಲ್ಲ. ಹೀಗಾಗಿ ಕೂಕಬುರಾ ಚೆಂಡು ಬಳಕೆ ಆಗಲಿ,” ಎಂದು ಪಾಂಟಿಂಗ್ ಹೇಳಿದ್ದರು.
ಇದನ್ನೂ ಓದಿ: IPLನಲ್ಲಿ ಅತಿ ಹೆಚ್ಚು ಶತಕ ಸಿಡಿಸಿ ವಿಶ್ವದಾಖಲೆ ಬರೆದ ವಿರಾಟ್! ಗೇಯ್ಲ್ ದಾಖಲೆ ಪುಡಿಪುಡಿ
ಇದಕ್ಕೆ ತಿರುಗೇಟು ನೀಡಿರುವ ಬಿಸಿಸಿಐ, ರಿಕಿ ಪಾಂಟಿಂಗ್ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಭಾರತ vs ಆಸ್ಟ್ರೇಲಿಯಾ WT ಫೈನಲ್ ಪಂದ್ಯವನ್ನು ಡ್ಯೂಕ್ಸ್ ಬಾಲ್ ನಲ್ಲೇ ಆಡಲಾಗುತ್ತದೆ ಮತ್ತು ಕೂಕಬುರಾ ಚೆಂಡಿನಲ್ಲಿ ಅಲ್ಲ ಎಂದು ಹೇಳಿದೆ. ಮುಂಬರುವ ಜೂನ್ 7 ರಂದು ಓವಲ್‌ನಲ್ಲಿ ನಡೆಯಲಿರುವ ಪಂದ್ಯಕ್ಕಾಗಿ ಭಾರತ ಕ್ರಿಕೆಟ್ ತಂಡವು ಡ್ಯೂಕ್ಸ್ ಬಾಲ್ ನಲ್ಲಿ ಆಡಲಿದೆ ಎಂದು ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಖಚಿತಪಡಿಸಿದ್ದಾರೆ.
ನಮ್ಮ ಆಟಗಾರರು ಈಗಾಗಲೇ ಡ್ಯೂಕ್ಸ್‌ನೊಂದಿಗೆ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ. ಐಪಿಎಲ್‌ನಲ್ಲಿ ಫೈನಲ್‌ಗೆ ತಯಾರಾಗಲು ವೇಗಿಗಳಿಗೆ ಡ್ಯೂಕ್ಸ್ ಬಾಲ್ ಕೂಡ ನೀಡಲಾಗಿದೆ. ಚೆಂಡಿನ ಬದಲಾವಣೆಯ ಬಗ್ಗೆ ನಾವು ಏನನ್ನೂ ಕೇಳಿಲ್ಲ. ಪಾಂಟಿಂಗ್ ಈ ಬಗ್ಗೆ ಎಲ್ಲಿ ಮಾತನಾಡಿದರೊ ನಮಗೆ ಗೊತ್ತಿಲ್ಲ,” ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಗುಜರಾತ್ ಟೈಟಾನ್ಸ್ ವಿರುದ್ಧ ಸೋಲು; ಆರ್‌ಸಿಬಿ ಪ್ಲೇಆಫ್ ಕನಸು ಭಗ್ನ, ಹತಾಶೆಯಿಂದ ಕಿಂಗ್ ಕೊಹ್ಲಿ ಮಾಡಿದ್ದೇನು?
ಹಾಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಮುಕ್ತಾಯದ ಬೆನ್ನಲ್ಲೇ ಈ ಭಾರತ ಹಾಗೂ ಆಸ್ಟ್ರೇಲಿಯಾ ತಂಡದ ಆಟಗಾರರು ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ಗಾಗಿ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿದ್ದಾರೆ. ಐಸಿಸಿ ಡಬ್ಲ್ಯೂಟಿಸಿ ಫೈನಲ್ ಜೂನ್ 7 ರಿಂದ 11ರ ವರೆಗೆ ನಡೆಯಲಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನ ಈ ಐತಿಹಾಸಿಕ ಕಾದಾಟಕ್ಕೆ ಸಾಕ್ಷಿಯಾಗಲಿದೆ.