ಐಪಿಎಲ್ ಇತಿಹಾಸದಲ್ಲೇ ಅಪರೂಪದ 3 ದಾಖಲೆ ಬರೆದ ಗುಜರಾತ್ ಟೈಟನ್ಸ್ ನ ಸಾಯಿ ಸುದರ್ಶನ್!

ಐಪಿಎಲ್ 2023ರ ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ಗುಜರಾತ್ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ ಸಾಯಿ ಸುದರ್ಶನ್ ಐಪಿಎಲ್ ಇತಿಹಾಸದ 3 ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ.
ಸಾಯಿ ಸುದರ್ಶನ್ ಬ್ಯಾಟಿಂಗ್
ಸಾಯಿ ಸುದರ್ಶನ್ ಬ್ಯಾಟಿಂಗ್

ಅಹ್ಮದಾಬಾದ್: ಐಪಿಎಲ್ 2023ರ ಫೈನಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಮೂಲಕ ಗುಜರಾತ್ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದ ಸಾಯಿ ಸುದರ್ಶನ್ ಐಪಿಎಲ್ ಇತಿಹಾಸದ 3 ಅಪರೂಪದ ದಾಖಲೆಗಳನ್ನು ನಿರ್ಮಿಸಿದ್ದಾರೆ.

ಅಹ್ಮದಾಬಾದ್ ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಪರ ಕೇವಲ 47 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 96 ರನ್ ಕಲೆಹಾಕಿ ಅಬ್ಬರಿಸಿ ಶತಕ ವಂಚಿತರಾದರು. ಆದರೆ ಶತಕ ವಂಚಿತರಾದರೂ ಸಾಯಿ ಸುದರ್ಶನ್ ಈ ಪಂದ್ಯದ ಮೂಲಕ ಮೂರು ಅಪರೂಪದ ದಾಖಲೆ ನಿರ್ಮಿಸಿದ್ದಾರೆ.

ಐಪಿಎಲ್ ಫೈನಲ್ ನಲ್ಲಿ  3ನೇ ಗರಿಷ್ಠ ವೈಯುಕ್ತಿಕ ರನ್ ದಾಖಲೆ
ಈ ಪಂದ್ಯದಲ್ಲಿ 96 ರನ್ ಗಳಿಸಿದ ಸಾಯಿ ಸುದರ್ಶನ್ ಆ ಮೂಲಕ ಐಪಿಎಲ್ ಫೈನಲ್ ನಲ್ಲಿ 3ನೇ ಗರಿಷ್ಠ ವೈಯುಕ್ತಿಕ ರನ್ ಗಳಿಸಿದ ಆಟಗಾರ ಎಂಬ ಕೀರ್ತಿಗೆ ಭಾಜನರಾದರು. ಈ ಪಟ್ಟಿಯಲ್ಲಿ 2018ರಲ್ಲಿ ಮುಂಬೈ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಶೇನ್ ವಾಟ್ಸನ್ ಅಜೇಯ 117ರನ್ ಸಿಡಿಸಿದ್ದರು. ಇದು ಐಪಿಎಲ್ ಇತಿಹಾಸದ ಫೈನಲ್ ಪಂದ್ಯದ ಆಟಗಾರನೊಬ್ಬನ ವೈಯುಕ್ತಿಕ ಗರಿಷ್ಠ ರನ್ ದಾಖಲೆಯಾಗಿದೆ.

Highest individual scores in IPL finals
117* - Shane Watson (CSK) vs SRH, Mumbai WS, 2018
115* - Wriddhiman Saha (PBKS) vs KKR, Bengaluru, 2014
96 - Sai Sudharsan (GT) vs CSK, Ahmedabad, 2023
95 - Murali Vijay (CSK) vs RCB, Chennai, 2011
94 - Manish Pandey (KKR) vs PBKS, Bengaluru, 2014

ಅನ್ ಕ್ಯಾಪ್ಡ್ ಆಟಗಾರನ 2ನೇ ಗರಿಷ್ಠ ರನ್
ಇನ್ನು 2022ರಲ್ಲಿ ಐಪಿಎಲ್ ಗೆ ಪದಾರ್ಪಣೆ ಮಾಡಿದ್ದ ಸಾಯಿ ಸುದರ್ಶನ್ ಹಾಲಿ ಟೂರ್ನಿಯಲ್ಲಿ ಅನ್ ಕ್ಯಾಪ್ಡ್ ಆಟಗಾರರಾಗಿದ್ದರು. ಆದರೆ ಇಂದು ಫೈನಲ್ ಪಂದ್ಯದಲ್ಲಿ ಗುಜರಾತ್ ಪರ ಕಣಕ್ಕಿಳಿದು ಕೇವಲ 47 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 96 ರನ್ ಸಿಡಿಸಿದ್ದಾರೆ. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ 2ನೇ ಗರಿಷ್ಟ ವೈಯುಕ್ತಿಕ ರನ್ ದಾಖಲಿಸಿದ ಅನ್ ಕ್ಯಾಪ್ಡ್ ಆಟಗಾರ ಎಂಬ ಕೀರ್ತಿಗೆ ಸಾಯಿ ಸುದರ್ಶನ್ ಪಾತ್ರರಾಗಿದ್ದಾರೆ. ಈ ಪಟ್ಟಿಯಲ್ಲಿ 2022ರ ಎಲಿಮಿನೇಟರ್ ಹಂತದ ಪಂದ್ಯದಲ್ಲಿ ಆರ್ ಸಿಬಿಯ ರಜತ್ ಪಾಟಿದಾರ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಅಜೇಯ 112ರನ್ ಸಿಡಿಸಿದ್ದರು. ಈ ಮೂಲಕ ರಜತ್ ಪಾಟಿದಾರ್ ಐಪಿಎಲ್ ಇತಿಹಾಸದ ಗರಿಷ್ಟ ವೈಯುಕ್ತಿಕ ರನ್ ದಾಖಲಿಸಿದ ಅನ್ ಕ್ಯಾಪ್ಡ್ ಆಟಗಾರರಾಗಿದ್ದಾರೆ.

Highest scores by uncapped players in IPL playoffs
112* - Rajat Patidar (RCB) vs LSG, Kolkata, 2022 Eliminator
96 - Sai Sudharsan (GT) vs CSK, Ahmedabad, 2023 Final
94 - Manish Pandey (KKR) vs PBKS, Bengaluru, 2014 Final
89 - Manvinder Bisla (KKR) vs CSK, Chennai, 2012 Final

ಐಪಿಎಲ್ ಫೈನಲ್ ನಲ್ಲಿ 50+ ರನ್ ಗಳಿಸಿದ ಕಿರಿಯ ಆಟಗಾರ
ಅಂತೆಯೇ ಇದೇ ಪಂದ್ಯದ ಅದ್ಭುತ ಬ್ಯಾಟಿಂಗ್ ಮೂಲಕ ಸಾಯಿ ಸುದರ್ಶನ್ ಮೂರನೇ ದಾಖಲೆ ನಿರ್ಮಿಸಿದ್ದು, ಐಪಿಎಲ್ ಫೈನಲ್ ನಲ್ಲಿ 50ಕ್ಕೂ ಅಧಿಕ ರನ್ ಗಳಿಸಿದ 2ನೇ ಕಿರಿಯ ಆಟಗಾರ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. ಇಂದಿನ ಬ್ಯಾಟಿಂಗ್ ಹೊತ್ತಿಗೆ ಸಾಯಿ ಸುದರ್ಶನ್ ಅವರ ವಯಸ್ಸು 21 ವರ್ಷ 226 ದಿನಗಳಾಗಿವೆ. ಈ ಪಟ್ಟಿಯಲ್ಲಿ ಪಂಜಾಬ್ ತಂಡದ ಮನನ್ ವೋಹ್ರಾ ಇದ್ದು ಅವರು (20 ವರ್ಷ 318 ದಿನ) 2014ರಲ್ಲಿ ಕೆಕೆಆರ್ ವಿರುದ್ಧದ ಫೈನಲ್ ಪಂದ್ಯದಲ್ಲಿ 50ಕ್ಕೂ ಹೆಚ್ಚು ರನ್ ಗಳಿಸಿದ್ದರು.

Youngest batters with a 50-plus score in IPL final
20y, 318 days - Manan Vohra (PBKS) vs KKR, Bengaluru, 2014
21y, 226 days - Sai Sudharsan (GT) vs CSK, Ahmedabad, 2023
22y, 37 days - Shubman Gill (KKR) vs CSK, Dubai, 2021
23y, 37 days - Rishabh Pant (DC) vs MI, Dubai, 2020

 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com