ಐಪಿಎಲ್ 2023 ಫೈನಲ್: ಗುಜರಾತ್ ಗೆ ಚೆನ್ನೈ ತಿರುಗೇಟು; ರುತುರಾಜ್-ಕಾನ್ವೆ ದಾಖಲೆಯ ಜೊತೆಯಾಟ

ಗುಜರಾತ್ ನೀಡಿರುವ ಬೃಹತ್ ಮೊತ್ತವನ್ನು ಬೆನ್ನು ಹತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ರುತುರಾಜ್-ಕಾನ್ವೆ ದಾಖಲೆಯ ಜೊತೆಯಾಟ ಆಡಿದ್ದಾರೆ.
ರುತುರಾಜ್-ಕಾನ್ವೆ ದಾಖಲೆಯ ಜೊತೆಯಾಟ
ರುತುರಾಜ್-ಕಾನ್ವೆ ದಾಖಲೆಯ ಜೊತೆಯಾಟ

ಅಹ್ಮದಾಬಾದ್: ಗುಜರಾತ್ ನೀಡಿರುವ ಬೃಹತ್ ಮೊತ್ತವನ್ನು ಬೆನ್ನು ಹತ್ತಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ರುತುರಾಜ್-ಕಾನ್ವೆ ದಾಖಲೆಯ ಜೊತೆಯಾಟ ಆಡಿದ್ದಾರೆ.

ಮಳೆಯಿಂದಾಗಿ ಕೇವಲ 15 ಓವರ್ ಗಳಿಗೆ ಪಂದ್ಯ ಸೀಮಿತವಾಗಿದ್ದು ಚೆನ್ನೈಗೆ ಗೆಲ್ಲಲು 171 ರನ್ ಗಳ ಪರಿಷ್ಕೃತ ಗುರಿ ನೀಡಲಾಗಿದೆ. ಈ ಬೃಹತ್ ಗುರಿಯನ್ನು ಬೆನ್ನು ಹತ್ತಿರುವ ಚೆನ್ನೈ ತಂಡಕ್ಕೆ ಆರಂಭಿಕರಾದ ರುತುರಾಜ್ ಗಾಯಕ್ವಾಡ್ ಮತ್ತು ಡೆವಾನ್ ಕಾನ್ವೆ ದಾಖಲೆಯ ಜೊತೆಯಾಟ ನೀಡಿದರು. 

ಮೊದಲ ವಿಕೆಟ್ ಗೆ ಈ ಜೋಡಿ 74 ರನ್ ಗಳನ್ನು ಸಿಡಿಸಿದ್ದು ಆ ಮೂಲಕ ಟೂರ್ನಿಯಲ್ಲಿ ತಮ್ಮ ಜೊತೆಯಾಟದ ರನ್ ಗಳಿಕೆಯನ್ನು 849 ರನ್ ಗಳಿಗೆ ಏರಿಕೆ ಮಾಡಿಕೊಂಡಿತು. ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಟೂರ್ನಿಯೊಂದರಲ್ಲಿ ಜೊತೆಯಾಟದಲ್ಲಿ 3ನೇ ಗರಿಷ್ಠ ರನ್ ಗಳ ಪಾರ್ಟ್ನರ್ ಶಿಪ್ ಆಗಿದೆ. ಇದಕ್ಕೂ ಮೊದರು 2016ರಲ್ಲಿ ಆರ್ ಸಿಬಿ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಜೋಡಿ 939 ರನ್ ಗಳ ಕಲೆಹಾಕಿತ್ತು. ಇದು ಐಪಿಎಲ್ ಇತಿಹಾಸದ ಟೂರ್ನಿಯೊಂದರಲ್ಲಿ ದಾಖಲಾದ ಗರಿಷ್ಠ ಜೊತೆಯಾಟವಾಗಿದೆ.

2ನೇ ಸ್ಥಾನದಲ್ಲಿ ಮತ್ತದೇ ಆರ್ ಸಿಬಿಯ ಕೊಹ್ಲಿ ಮತ್ತು ಡುಪ್ಲೆಸಿಸ್ ರ ಹಾಲಿ ಟೂರ್ನಿಯ 939ರನ್ ಗಳ ಜೊತೆಯಾಟವಿದೆ.

Most partnership runs in a season
939 - Virat Kohli, AB de Villiers (RCB, 2016)
939 - Virat Kohli, Faf du Plessis (RCB, 2023)
849 - Ruturaj Gaikwad, Devon Conway (CSK, 2023)
791 - David Warner, Jonny Bairstow (SRH, 2019)
756 - Faf du Plessis, Ruturaj Gaikwad (CSK, 2021)

ಟೂರ್ನಿಯಲ್ಲಿ ಸಿಎಸ್ ಕೆ ಪರ 2ನೇ ಗರಿಷ್ಠ ರನ್ 
ಇನ್ನು ಇಂದಿನ ಇನ್ನಿಂಗ್ಸ್ ನ ಮೂಲಕ ಡೆವಾನ್ ಕಾನ್ವೆ ಹಾಲಿ ಟೂರ್ನಿಯಲ್ಲಿ ತಮ್ಮ ರನ್ ಗಳಿಕೆಯನ್ನು 672ಕ್ಕೆ ಏರಿಕೆ ಮಾಡಿಕೊಂಡಿದ್ದು ಆ ಮೂಲಕ ಐಪಿಎಲ್ ಇತಿಹಾಸದಲ್ಲಿ ಸಿಎಸ್ ಕೆ ಪರ ಗಳಿಸಿದ ಟೂರ್ನಿಯ 2ನೇ ಗರಿಷ್ಛ ವೈಯುಕ್ತಿಕ ರನ್ ಗಳಿಕೆಯಾಗಿದೆ. 2013ರಲ್ಲಿ ಮೈಕ್ ಹಸ್ಸಿ 733 ರನ್ ಗಳಿಸಿದ್ದು ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

Most runs in a season for CSK
733 - Michael Hussey, 2013
672 - Devon Conway, 2023
635 - Ruturaj Gaikwad, 2021
633 - Faf du Plessis, 2021

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com