
ಚೆನ್ನೈ: ಭಾನುವಾರ ನಡೆದ ಆಸೀಸ್ ವಿರುದ್ಧದ ವಿಶ್ವಕಪ್ನ(icc world cup 2023) ಲೀಗ್ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ವಿರಾಟ್ ಕೊಹ್ಲಿ(virat kohli) ಅವರು ಸಚಿನ್ ತೆಂಡೂಲ್ಕರ್(sachin tendulkar) ಅವರ ಹಲವು ದಾಖಲೆಗಳನ್ನು ಮುರಿದಿದ್ದಾರೆ.
ಹೌದು.. ನಿನ್ನೆ ನಡೆದ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಭಾರತ ತಂಡ ತೀವ್ರ ಸಂಕಷ್ಟದಲ್ಲಿದ್ದ ಸಮಯದಲ್ಲಿ ಕೆಎಲ್ ರಾಹುಲ್ ಜೊತೆ ಕ್ರೀಸ್ ಹಂಚಿಕೊಂಡ ವಿರಾಟ್ ಕೊಹ್ಲಿ ಸಮಯೋಚಿತ ಆಟದ ಮೂಲಕ ನಿಧಾನವಾಗಿ ಭರ್ಜರಿ ಬ್ಯಾಟಿಂಗ್ ಮಾಡಿದರು. ಕೇವಲ 116 ಎಸೆತಗಳಲ್ಲಿ 6 ಬೌಂಡರಿಗಳ ನೆರವಿನಿಂದ ಅಮೋಘ 85 ರನ್ ಗಳಿಸಿ ತಂಡವನ್ನು ಅಪಾಯದಿಂದ ರಕ್ಷಿಸಿದರು. ಮಾತ್ರವಲ್ಲದೇ ಈ ಅದ್ಭುತ ಇನ್ನಿಂಗ್ಸ್ ಮೂಲಕ ಕೊಹ್ಲಿ ಭಾರತ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಹಲವು ದಾಖಲೆಗಳನ್ನು ಮುರಿದಿದ್ದಾರೆ.
ಐಸಿಸಿ ನಿಗಧಿತ ಓವರ್ ಗಳ ಪಂದ್ಯಗಳಲ್ಲಿ ಭಾರತದ ಪರ ಗರಿಷ್ಠ ರನ್
ಇನ್ನು ಐಸಿಸಿ ನಡೆಸುವ ನಿಗಧಿತ ಓವರ್ ಗಳ ಪಂದ್ಯಾವಳಿಗಳಲ್ಲಿ ಭಾರತದ ಪರ ಗರಿಷ್ಠ ರನ್ ಪೇರಿಸಿದ ಭಾರತದ ಬ್ಯಾಟರ್ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾಗಿದ್ದಾರೆ. ಕೊಹ್ಲಿ ಒಟ್ಟು 64 ಇನ್ನಿಂಗ್ಸ್ ಗಳಲ್ಲಿ 2785 ರನ್ ಗಳನ್ನು ದಾಖಲಿಸಿದ್ದು ಆ ಮೂಲಕ ಈ ಪಟ್ಟಿಯಲ್ಲಿ ಸಚಿನ್ ತೆಂಡೂಲ್ಕರ್ ರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ. 2ನೇ ಸ್ಥಾನಕ್ಕೆ ತಳ್ಳಲ್ಪಟ್ಟಿರುವ ಸಚಿನ್ ತೆಂಡೂಲ್ಕರ್ 58 ಇನ್ನಿಂಗ್ಸ್ ಗಳಲ್ಲಿ 2719 ರನ್ ಗಳಿಸಿದ್ದಾರೆ. 3ನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ 64 ಇನ್ನಿಂಗ್ಸ್ ಗಳಲ್ಲಿ 2422 ರನ್ ಪೇರಿಸಿದ್ದಾರೆ.
Most runs for India in ICC limited-over tournaments
2785 - Virat Kohli (64 Inns)*
2719 - Sachin Tendulkar (58)
2422 - Rohit Sharma (64)
1707 - Yuvraj Singh (62)
1671 - Sourav Ganguly (32)
ಚೇಸಿಂಗ್ನಲ್ಲಿ ಸಚಿನ್ ದಾಖಲೆ ಪತನ
ಕೊಹ್ಲಿ ಅವರು ಚೇಸಿಂಗ್ ವೇಳೆ ಅತಿ ಕಡಿಮೆ ಇನಿಂಗ್ಸ್ನಲ್ಲಿ ಅತ್ಯಧಿಕ ರನ್ ಗಳಿಸಿದ ಸಚಿನ್ ಅವರ ದಾಖಲೆಯನ್ನು ಮುರಿದಿದ್ದಾರೆ. ಸಚಿನ್ ಅವರು ಚೇಸಿಂಗ್ ವೇಳೆ 124 ಇನಿಂಗ್ಸ್ನಲ್ಲಿ 5,490 ರನ್ ಗಳಿಸಿದ್ದರು. ಇದೀಗ ಕೊಹ್ಲಿ 92 ಇನಿಂಗ್ಸ್ನಲ್ಲಿ 5,517 ರನ್ ಬಾರಿಸಿ ಈ ದಾಖಲೆಯನ್ನು ಮೀರಿ ನಿಂತಿದ್ದಾರೆ.
ಏಕದಿನ ವಿಶ್ವಕಪ್ನಲ್ಲಿ ಅತಿ ಹೆಚ್ಚು ರನ್
ವಿರಾಟ್ ಕೊಹ್ಲಿ 85 ರನ್ ಪೂರೈಸಿ ವಿಶ್ವಕಪ್ ಟೂರ್ನಿ ಇತಿಹಾಸದಲ್ಲಿ ಭಾರತ ಪರ ನೂತನ ದಾಖಲೆ ಬರೆದಿದ್ದಾರೆ. ಅತಿ ಹೆಚ್ಚು ರನ್ ಗಳಿಸಿದ 2ನೇ ಭಾರತೀಯ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ. 2278 ರನ್ ಕಲೆಹಾಕಿರುವ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಸದ್ಯ 1050* ರನ್ ಗಳಿಸಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಉತ್ತಮ ರನ್ ಕಲೆಹಾಕಿದರೆ ಸಚಿನ್ ಅವರ ಈ ದಾಖಲೆಯನ್ನು ಮುರಿಯುವ ಅವಕಾಶವಿದೆ.
ಏಕದಿನ ವಿಶ್ವಕಪ್ ನಲ್ಲಿ ಅತೀ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್
ಏಕದಿನ ವಿಶ್ವಕಪ್ ನಲ್ಲಿ ಅತೀ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಜಂಟಿ 2ನೇ ಸ್ಥಾನಕ್ಕೇರಿದ್ದು, ಈ ಪಟ್ಟಿಯಲ್ಲಿ 21 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ಮತ್ತು ರೋಹಿತ್ ಶರ್ಮಾ ತಲಾ 9 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿ ಜಂಟಿ 2ನೇ ಸ್ಥಾನದಲ್ಲಿದ್ದಾರೆ. ಮಹಮದ್ ಅಜರುದ್ದೀನ್, ರಾಹುಲ್ ದ್ರಾವಿಡ್ ಮತ್ತು ಯುವರಾಜ್ ಸಿಂಗ್ 8 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿ ನಂತರದ ಸ್ಥಾನದಲ್ಲಿದ್ದಾರೆ.
Most 50+ scores for India in ODI World Cup
21 - Sachin Tendulkar
9 - Rohit Sharma
9 - Virat Kohli
8 - M Azharuddin
8 - Rahul Dravid
8 - Yuvraj Singh
ಮೂರನೇ ಕ್ರಮಾಂಕದಲ್ಲಿ ದಾಖಲೆ
3ನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಕೊಹ್ಲಿ ನೂತನ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದಿದ್ದಾರೆ. 3ನೇ ಕ್ರಮಾಂಕದಲ್ಲಿ 11 ಸಾವಿರ ರನ್ ಪೂರೈಸಿರುವ ಕೊಹ್ಲಿ, ಈ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಸಾಲಿನಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಆಸೀಸ್ನ ವಿಶ್ವಕಪ್ ವಿಜೇತ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ (12,662 ರನ್) ಅಗ್ರಸ್ಥಾನ ಪಡೆದಿದ್ದಾರೆ. ಶ್ರೀಲಂಕಾದ ಕುಮಾರ ಸಂಗಕ್ಕಾರ (9747 ರನ್) ನಂತರದ ಸಾಲಿನಲ್ಲಿದ್ದಾರೆ.
ಏಕದಿನದಲ್ಲಿ ಅತೀ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿ ಆರಂಭಿಕನಲ್ಲದ ಆಟಗಾರ
ಇದೇ ವೇಳೆ ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಅತೀ ಹೆಚ್ಚು ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿ ಆರಂಭಿಕನಲ್ಲದ ಆಟಗಾರ ಎಂಬ ಕೀರ್ತಿಗೂ ಕೊಹ್ಲಿ ಭಾಜನರಾಗಿದ್ದು, ಕೊಹ್ಲಿ ಬರೊಬ್ಬರಿ 113 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಆ ಮೂಲಕ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರನ್ನು 2ನೇ ಸ್ಥಾನಕ್ಕೆ ತಳ್ಳಿದ್ದಾರೆ. ಸಂಗಕ್ಕಾರ 112 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಈ ಪಟ್ಟಿಯಲ್ಲಿ ಆಸ್ಚ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ 109 ಬಾರಿ ಮತ್ತು ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ 102 ಬಾರಿ 50ಕ್ಕೂ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿ ನಂತರದ ಸ್ಥಾನಗಳಿಸಿದ್ದಾರೆ.
Most 50+ scores as a non-opener in ODIs
113 - Virat Kohli*
112 - Kumar Sangakkara
109 - Ricky Ponting
102 - Jacques Kallis
ಪಂದ್ಯ ಗೆದ್ದ ಭಾರತ
ಸ್ಟಾರ್ ಬ್ಯಾಟರ್ಗಳಾದ ವಿರಾಟ್ ಕೊಹ್ಲಿ (85) ಹಾಗೂ ಕೆ. ಎಲ್ ರಾಹುಲ್ (ಅಜೇಯ 97) ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಮಿಂಚಿದ ಭಾರತ ತಂಡ ವಿಶ್ವ ಕಪ್ನ ತನ್ನ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ (Ind vs Aus) ವಿರುದ್ಧ 6 ವಿಕೆಟ್ಗಳ ಸುಲಭ ಜಯ ದಾಖಲಿಸಿತು. ಈ ಮೂಲಕ ತನ್ನ ಆತಿಥ್ಯದಲ್ಲಿ ನಡೆಯುತ್ತಿರುವ ವಿಶ್ವ ಕಪ್ನಲ್ಲಿ ಶುಭಾರಂಭ ಮಾಡಿತು. ಬಲಿಷ್ಠ ತಂಡವನ್ನೇ ಮಣಿಸಿ ಪ್ರಶಸ್ತಿ ಕಡೆಗೆ ಮೊದಲ ಹೆಜ್ಜೆಯನ್ನಿಟ್ಟಿದೆ.
ವಿಶ್ವಕಪ್ ನಲ್ಲಿ ಕೊಹ್ಲಿಯ 3ನೇ ಗರಿಷ್ಠ ವೈಯುಕ್ತಿಕ ಸ್ಕೋರ್
ಆಸಿಸ್ ವಿರುದ್ಧ ಕೊಹ್ಲಿ ಗಳಿಸಿದ 85ರನ್ ಗಳು ಅವರು ವಿಶ್ವಕಪ್ ನ ಪಂದ್ಯವೊಂದರಲ್ಲಿ ಗಳಿಸಿದ 3ನೇ ಗರಿಷ್ಠ ವೈಯುಕ್ತಿಕ ರನ್ ಗಳಿಕೆಯಾಗಿದೆ. ಕೊಹ್ಲಿ ಈ ಹಿಂದೆ 2015ರಲ್ಲಿ ಅಡಿಲೇಡ್ ನಲ್ಲಿ ನಡದ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ 107ರನ್ ಗಳಿಸಿದ್ದರು. ಇದು ವಿಶ್ವಕಪ್ ನಲ್ಲಿ ಅವರ ವೈಯುಕ್ತಿಕ ಗರಿಷ್ಠ ರನ್ ಗಳಿಕೆಯಾಗಿದೆ. ಇದಕ್ಕೂ ಮೊದಲು 2011ರಲ್ಲಿ ಮೀರ್ ಪುರ್ ನಲ್ಲಿ ನಡೆದ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಅಜೇಯ 100 ರನ್ ಗಳಿಸಿದ್ದರು. ಇದು ಅವರ 2ನೇ ವೈಯುಕ್ತಿಕ ರನ್ ಗಳಿಕೆಯಾಗಿದೆ.
Highest score for Virat Kohli in ODI World Cup
107 vs PAK, Adelaide, 2015
100* vs BAN, Mirpur, 2011
85 vs AUS, Chennai, 2023*
ಜತೆಯಾಟದಲ್ಲಿಯೂ ದಾಖಲೆ
ಕೊಹ್ಲಿ ಹಾಗೂ ರಾಹುಲ್ ನಾಲ್ಕನೇ ವಿಕೆಟ್ 165 ರನ್ಗಳ ಜತೆಯಾಟ ನೀಡಿದ್ದರು. ಈ ಮೂಲಕ ಈ ಸ್ಟಾರ್ ಬ್ಯಾಟರ್ಗಳು 1996ರ ವಿಶ್ವಕಪ್ನಲ್ಲಿ ನವಜೋತ್ ಸಿಧು ಹಾಗೂ ವಿನೋದ್ ಕಾಂಬ್ಳಿ ಜೋಡಿ ಪೇರಿಸಿದ್ದ 142 ರನ್ಗಳ ದಾಖಲೆಯನ್ನು ಮೀರಿದರು. ಭಾನುವಾರ ನಡೆದ ಪಂದ್ಯದಲ್ಲಿ ಭಾರತ 3 ವಿಕೆಟ್ ನಷ್ಟಕ್ಕೆ 2 ರನ್ ಸಂಕಷ್ಟಕ್ಕೆ ಬಿತ್ತು. 200 ರನ್ಗಳ ಗುರಿಯನ್ನು ಬೆನ್ನಟ್ಟು ಹೊರಟ ಭಾರತ ಹೀನಾಯ ಪರಿಸ್ಥಿತಿ ಎದುರಿಸುವುದನ್ನು ನೋಡಿದ ಭಾರತ ತಂಡದ ಅಭಿಮಾನಿಗಳು ಬೇಸರಕ್ಕೆ ಒಳಗಾದರು. ಬಳಿಕ ಕೊಹ್ಲಿ ಮತ್ತು ರಾಹುಲ್ ಕ್ರಮವಾಗಿ 72 ಮತ್ತು 75 ಎಸೆತಗಳಲ್ಲಿ ಅರ್ಧಶತಕಗಳನ್ನು ಗಳಿಸಿ ಗೆಲುವಿನ ಭರವಸೆ ಮೂಡಿಸಿದರು. ರಾಹುಲ್ ಕೊನೇ ತನಕ ಹೋರಾಟ ನಡೆಸಿ 91 ರನ್ ಗಳಿಸಿ ಗೆಲುವು ತಂದುಕೊಟ್ಟರೆ, ವಿರಾಟ್ 85 ರನ್ ಬಾರಿಸಿ ತಮ್ಮ ಜವಾಬ್ದಾರಿಯನ್ನು ಮೆರೆದರು.
Advertisement