ಪುಣೆ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023 ಟೂರ್ನಿಯ ಇಂದಿನ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಮತ್ತು ಹಿಟ್ ಮ್ಯಾನ್ ರೋಹಿತ್ ಶರ್ಮಾ ಒಂದೇ ದಿನ ವಿಶ್ವಕಪ್ ದಾಖಲೆಗಳನ್ನು ಮುರಿಯುವ ಮೂಲಕ ಅಪರೂಪದ ದಾಖಲೆಯೊಂದಕ್ಕೆ ಪಾತ್ರರಾಗಿದ್ದಾರೆ.
ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶ ನೀಡಿದ 257ರನ್ ಗಳ ಸವಾಲಿನ ಗುರಿಯನ್ನು ಬೆನ್ನು ಹತ್ತಿರುವ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ತಮ್ಮ ಉತ್ತಮ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನತ್ತ ದಾಪುಗಾಲಿರಿಸಿದ್ದಾರೆ.
ಒಂದೆಡೆ ರೋಹಿತ್ ಶರ್ಮಾ ಕೇವಲ 2 ರನ್ ಗಳ ಅಂತರದಲ್ಲಿ ಅರ್ಧಶತಕ ತಪ್ಪಿಸಿಕೊಂಡರೂ ಈ ಪಂದ್ಯದಲ್ಲಿ ಜಾಗತಿಕ ಕ್ರಿಕೆಟ್ ನ ಕ್ರಿಕೆಟ್ ದಂತಕಥೆಗಳಾದ ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ ಮತ್ತು ಎಬಿ ಡಿವಿಲಿಯರ್ಸ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.
ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ರನ್ ದಾಖಲಿಸಿದ ಆಟಗಾರರ ಪಟ್ಟಿಯಲ್ಲಿ ರೋಹಿತ್ ಶರ್ಮಾ 5ನೇ ಸ್ಥಾನಕ್ಕೇರಿದ್ದು, ಇದೇ ಪಂದ್ಯದಲ್ಲಿ ಕೊಹ್ಲಿ ಈ ಪಟ್ಟಿಯ 4ನೇ ಸ್ಥಾನಕ್ಕೇರಿದರು. ವಿಶ್ವಕಪ್ ಪಂದ್ಯದಲ್ಲಿ ತಂಡವೊಂದರ ಇಬ್ಬರು ಆಟಗಾರರು ಒಂದೇ ಪಂದ್ಯದಲ್ಲಿ ಒಂದೇ ದಾಖಲೆಯ ಪಟ್ಟಿಯಲ್ಲಿ ಸಾಧನೆ ಮಾಡಿರುವುದು ಅಪರೂಪದ ಘಟನೆ ಎನ್ನಲಾಗಿದೆ.
ರೊಹಿತ್ ಶರ್ಮಾ ಏಕದಿನ ಕ್ರಿಕೆಟ್ ವಿಶ್ವಕಪ್ ನಲ್ಲಿ ಒಟ್ಟು 1243 ರನ್ ಗಳಿಸಿ 5ನೇ ಸ್ಥಾನಕ್ಕೇರಿದ್ದರೆ, ವಿರಾಟ್ ಕೊಹ್ಲಿ 1248 (ಅಜೇಯ) ರನ್ ಗಳಿಸಿ 4ನೇ ಸ್ಥಾನಕ್ಕೇರಿದ್ದಾರೆ. ಈ ಪಟ್ಟಿಯಲ್ಲಿ 2278 ರನ್ ಗಳಿಸಿರುವ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು, 1743 ರನ್ ಗಳಿಸಿರುವ ಆಸ್ಟ್ರೇಲಿಯಾದ ರಿಕ್ಕಿ ಪಾಂಟಿಂಗ್ 2 ಮತ್ತು 1532ರನ್ ಗಳಿಸಿರುವ ಶ್ರೀಲಂಕಾದ ಕುಮಾರ ಸಂಗಕ್ಕಾರ 3ನೇ ಸ್ಥಾನದಲ್ಲಿದ್ದಾರೆ.
4 ಮತ್ತು 5ನೇ ಸ್ಥಾನದಲ್ಲಿದ್ದ ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ (1225 ರನ್) ಮತ್ತು ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್ (1207 ರನ್) 6 ಮತ್ತು 7ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
Most runs in ODI World Cups
2278 - Sachin Tendulkar
1743 - Ricky Ponting
1532 - Kumar Sangakkara
1248* - Virat Kohli
1243 - Rohit Sharma
1225 - Brian Lara
1207 - AB de Villiers
(Both Rohit and Kohli went past Lara and de Villiers today)
Advertisement