ಏಷ್ಯಾ ಕಪ್ 2023: ಶ್ರೀಲಂಕಾದ ಜೈತ್ರಯಾತ್ರೆಗೆ ಬ್ರೇಕ್ ಹಾಕಿದ ಭಾರತ

2023ರಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಶ್ರೀಲಂಕಾ ತಂಡ ನಡೆಸುತ್ತಿದ್ದ ಜೈತ್ರ ಯಾತ್ರೆಗೆ ಕೊನೆಗೂ ಭಾರತ ತಂಡ ಬ್ರೇಕ್ ಹಾಕಿದೆ.
ಶ್ರೀಲಂಕಾ ತಂಡಕ್ಕೆ ಸೋಲು
ಶ್ರೀಲಂಕಾ ತಂಡಕ್ಕೆ ಸೋಲು

ಕೊಲಂಬೋ: 2023ರಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಶ್ರೀಲಂಕಾ ತಂಡ ನಡೆಸುತ್ತಿದ್ದ ಜೈತ್ರ ಯಾತ್ರೆಗೆ ಕೊನೆಗೂ ಭಾರತ ತಂಡ ಬ್ರೇಕ್ ಹಾಕಿದೆ.

ಹೌದು.. 2023ರಲ್ಲಿ ಶ್ರೀಲಂಕಾ ತಂಡ ತಾನು ಆಡಿದ ಕೊನೆಯ 13 ಏಕದಿನ ಪಂದ್ಯಗಳಲ್ಲಿ ಸೋಲು ಕಂಡಿರಲಿಲ್ಲ. ಆದರೆ ಈ ಲಂಕನ್ನರ ಈ ಜೈತ್ರಯಾತ್ರೆಗೆ ಇದೀಗ ಭಾರತ ತಂಡ ಬ್ರೇಕ್ ಹಾಕಿದೆ. ಏಷ್ಯಾಕಪ್ ನ ಸೂಪರ್ ಹಂತದ ಇಂದಿನ ಪಂದ್ಯದಲ್ಲಿ ಭಾರತ ತಂಡ ಶ್ರೀಲಂಕಾ ತಂಡವನ್ನು 41ರನ್ ಗಳ ಅಂತರದಲ್ಲಿ ಮಣಿಸಿ ಆ ತಂಡದ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದೆ. 

ಶ್ರೀಲಂಕಾ ತಂಡ 2023ರ ಜೂನ್ ತಿಂಗಳಿನಲ್ಲಿ ತನ್ನ ಗೆಲುವಿನ ಸರಣಿ ಆರಂಭಿಸಿತ್ತು. ಸತತ 13 ಪಂದ್ಯಗಳನ್ನು ಗೆದ್ದಿದ್ದ ಶ್ರೀಲಂಕಾ ತಂಡ ಇದೇ ಸಾಧನೆ ಮಾಡಿದ್ದ ದಕ್ಷಿಣ ಆಫ್ರಿಕಾ, ಪಾಕಿಸ್ತಾನ ತಂಡಗಳನ್ನು ಹಿಂದಿಕ್ಕಿತ್ತು. ಆದರೆ ಇಂದು ಮೊದಲ ಸೋಲಿನ ಬಳಿಕ ತನ್ನ ಜೈತ್ರಯಾತ್ರೆಯನ್ನು ಕೊನೆಗೊಳಿಸಿದೆ.

Most consecutive ODI wins
21 - Australia (Jan 2003 - May 2003)
13 - Sri Lanka (June 2023 - Sept 2023)
12 - South Africa (Feb 2005 - Oct 2005)
12 - Pakistan (Nov 2007 - Jun 2008)
12 - South Africa (Sept 2016 - Feb 2017)
- That brings an end to Sri Lanka's 13-match winning streak in ODIs.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com