ವಿಶ್ವಕಪ್‌ಗೂ ಮುನ್ನ ಭರ್ಜರಿ ಬ್ಯಾಟಿಂಗ್ ಲಯದಲ್ಲಿ ಶ್ರೇಯಸ್ ಅಯ್ಯರ್, ಶುಭ್ಮನ್ ಗಿಲ್: ಶತಕ ಸಿಡಿಸಿದ ಬ್ಯಾಟರ್‌ಗಳು!
ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದ್ದು ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ.
Published: 24th September 2023 05:00 PM | Last Updated: 24th September 2023 05:00 PM | A+A A-

ಶುಭ್ಮನ್ ಗಿಲ್-ಶ್ರೇಯಸ್ ಅಯ್ಯರ್
ಇಂದೋರ್: ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದ್ದು ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ.
ಇಂದು ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ಆಟಗಾರ ಶ್ರೇಯಸ್ ಅಯ್ಯರ್ ಇಂದು ತಮ್ಮ ಹಳೆಯ ಸ್ವರೂಪಕ್ಕೆ ಮರಳಿದ್ದಾರೆ. ಇನ್ನು ಶುಭ್ಮನ್ ಗಿಲ್ ಎಂದಿನಂತೆ ತಮ್ಮ ಅದ್ಭುತ ಆಟ ಪ್ರದರ್ಶನ ನೀಡಿದ್ದು ಆಸ್ಟ್ರೇಲಿಯಾ ಬೌಲರ್ ಗಳನ್ನು ಕಾಡಿದರು. ಶ್ರೇಯಸ್ ಅಯ್ಯರ್ 90 ಎಸೆತಗಳಲ್ಲಿ 3 ಸಿಕ್ಸ್ ಮತ್ತು 11 ಬೌಂಡರಿಗಳೊಂದಿಗೆ 105 ಬಾರಿಸಿ ಔಟಾದರೆ, ಶುಭ್ಮನ್ ಗಿಲ್ 97 ಎಸೆತದಲ್ಲಿ 4 ಸಿಕ್ಸ್ ಮತ್ತು 6 ಬೌಂಡರಿಯೊಂದಿಗೆ 104 ರನ್ ಗಳಿಸಿ ಔಟಾದರು.
ಇದನ್ನೂ ಓದಿ: ಆಸೀಸ್ ಸೋಲಿಸಿ ಅಪರೂಪದ ಸಾಧನೆ ಮಾಡಿದ ಭಾರತ, ಎಲ್ಲಾ ಮಾದರಿಯ ಕ್ರಿಕೆಟಿನಲ್ಲಿ ನಂಬರ್ 1 ಪಟ್ಟ!
ವಿಶ್ವಕಪ್‌ಗೂ ಮುನ್ನ ಶ್ರೇಯಸ್ ಅಯ್ಯರ್ ಅವರ ಅದ್ಭುತ ಆಟ ಟೀಂ ಇಂಡಿಯಾದ ಚಿಂತೆಯನ್ನು ದೂರ ಮಾಡಿದೆ. ಶ್ರೇಯಸ್ ವಿಶ್ವಕಪ್‌ನಲ್ಲಿ ನಾಲ್ಕನೇ ಸ್ಥಾನಕ್ಕಾಗಿ ಪ್ರಬಲ ಸ್ಪರ್ಧಿಯಾಗಿದ್ದು, ನಂಬರ್ ಬ್ಯಾಟ್ಸ್‌ಮನ್ ಆಗಿ ಅವರು ಇಲ್ಲಿಯವರೆಗೆ ಅದ್ಭುತ ಪ್ರದರ್ಶನ ನೀಡಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ ಅದ್ಭುತ ಪುನರಾಗಮನ ಮಾಡಿ ಶತಕ ಸಿಡಿಸಿದ್ದಾರೆ. ಗಾಯದ ನಂತರ ಪುನರಾಗಮನ ಮಾಡಿದ ಅಯ್ಯರ್ ಏಷ್ಯಾಕಪ್‌ನಲ್ಲಿ ಒಂದೇ ಒಂದು ಪಂದ್ಯವನ್ನಾಡಿದ್ದರು.
ಭಾರತ ಸದ್ಯ 35 ಓವರ್ ಗಳ ಮುಕ್ತಾಯಕ್ಕೆ 3 ವಿಕೆಟ್ ಕಳೆದುಕೊಂಡು 249 ರನ್ ಪೇರಿಸಿದೆ. ಆಸ್ಟ್ರೇಲಿಯಾ ಪರ ಹೆಜಲ್ವುಡ್, ಗ್ರೀನ್ ಮತ್ತು ಅಬ್ಬೋಟ್ ತಲಾ 1 ವಿಕೆಟ್ ಪಡೆದುಕೊಂಡಿದ್ದಾರೆ.