ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಕೆ, ಇಂಗಾಲ ಹೊರಸೂಸುವಿಕೆ ತಗ್ಗಿಸಲು ಕ್ರಮ
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯಕ್ಕೆ ವೇದಿಕೆಯಾಗಿರುವ ಮಧ್ಯಪ್ರದೇಶದ ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಇಂಗಾಲ ಹೊರಸೂಸುವಿಕೆ ತಗ್ಗಿಸಲು ಮಹತ್ವದ ಕ್ರಮಕೈಗೊಳ್ಳಲಾಗಿದ್ದು, ಸ್ಟೇಡಿಯಂ ಮೇಲ್ಛಾವಣಿಗೆ ಸೋಲಾರ್ ಪ್ಯಾನೆಲ್ ಗಳ ಅಳವಡಿಸಲಾಗಿದೆ.
Published: 24th September 2023 06:09 PM | Last Updated: 25th September 2023 08:06 PM | A+A A-

ಹೋಳ್ಕರ್ ಕ್ರೀಡಾಂಗಣದಲ್ಲಿ ಸೌರಫಲಕ ಅಳವಡಿಕೆ
ಇಂದೋರ್: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯಕ್ಕೆ ವೇದಿಕೆಯಾಗಿರುವ ಮಧ್ಯಪ್ರದೇಶದ ಇಂದೋರ್‌ನ ಹೋಳ್ಕರ್ ಸ್ಟೇಡಿಯಂನಲ್ಲಿ ಇಂಗಾಲ ಹೊರಸೂಸುವಿಕೆ ತಗ್ಗಿಸಲು ಮಹತ್ವದ ಕ್ರಮಕೈಗೊಳ್ಳಲಾಗಿದ್ದು, ಸ್ಟೇಡಿಯಂ ಮೇಲ್ಛಾವಣಿಗೆ ಸೋಲಾರ್ ಪ್ಯಾನೆಲ್ ಗಳ ಅಳವಡಿಸಲಾಗಿದೆ.
ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ (MPCA) ಭಾನುವಾರ ಇಂದೋರ್‌ನ ಹೋಲ್ಕರ್ ಕ್ರೀಡಾಂಗಣದಲ್ಲಿ 370 ಸೌರ ಫಲಕಗಳನ್ನು ಅಳವಡಿಸುವ ಮೂಲಕ ಹಸಿರು ಭಾರತದತ್ತ ಶ್ಲಾಘನೀಯ ಹೆಜ್ಜೆ ಇಟ್ಟಿದೆ. ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಈ ಉಪಕ್ರಮದಿಂದಾಗಿ ಪ್ರತಿ ವರ್ಷ 277 ಟನ್ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯಕ್ಕೂ ಮುನ್ನ ಈ ಸೌರಫಲಕಗಳನ್ನು ಉದ್ಘಾಟನೆ ಮಾಡಲಾಯಿತು.
A green initiative by the Madhya Pradesh Cricket Association they install close to 376 solar panels in Holkar Stadium, Indore. The initiative is set to be energy-saving and reduce 277 tonnes of carbon emissions every year. Present at the inauguration was Team India Captain KL… pic.twitter.com/GS4zc7GElb
— ANI (@ANI) September 24, 2023
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2ನೇ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾರತ ಹಂಗಾಮಿ ನಾಯಕ ಕೆಎಲ್ ರಾಹುಲ್ ಮತ್ತು ಇತರ ಎಂಪಿಸಿಎ ಗಣ್ಯರು ಉಪಸ್ಥಿತರಿದ್ದರು.
ಇದನ್ನೂ ಓದಿ: ವಿಶ್ವಕಪ್‌ಗೂ ಮುನ್ನ ಭರ್ಜರಿ ಬ್ಯಾಟಿಂಗ್ ಲಯದಲ್ಲಿ ಶ್ರೇಯಸ್ ಅಯ್ಯರ್, ಶುಭ್ಮನ್ ಗಿಲ್: ಶತಕ ಸಿಡಿಸಿದ ಬ್ಯಾಟರ್‌ಗಳು!
ಈ ಕುರಿತು ಕಾರ್ಯಕ್ರಮದ ಕುರಿತು ಟ್ವೀಟ್ ಮಾಡಿರುವ ಬಿಸಿಸಿಐ, "ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯು ಇಂದೋರ್‌ನ ಹೋಲ್ಕರ್ ಸ್ಟೇಡಿಯಂನಲ್ಲಿ ಸುಮಾರು 376 ಸೌರ ಫಲಕಗಳನ್ನು ಸ್ಥಾಪಿಸುವ ಮೂಲಕ ಇಂಗಾಲ ಹೊರಸೂಸುವಿಕೆ ತಗ್ಗಿಸುವ ಮಹತ್ವದ ಕ್ರಮ ಕೈಗೊಂಡಿದೆ. ಮಂಡಳಿಯ ಈ ಹಸಿರು ಉಪಕ್ರಮ ಮಾದರಿಯಾಗಿದ್ದು, ಈ ಉಪಕ್ರಮವು ಇಂಧನ ಉಳಿತಾಯ ಮತ್ತು ಪ್ರತಿ ವರ್ಷ 277 ಟನ್ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುತ್ತದೆ. ಕಾರ್ಯಕ್ರಮದಲ್ಲಿ ಟೀಂ ಇಂಡಿಯಾ ಹಂಗಾಮಿ ನಾಯಕ ಕೆಎಲ್ ರಾಹುಲ್ ಮತ್ತು ಎಂಪಿಸಿಎ ಅಧಿಕಾರಿಗಳು ಉಪಸ್ಥಿತರಿದ್ದರು ಎಂದು ಟ್ವೀಟ್ ಮಾಡಿದೆ.