IPL 2024: RCB ವೈಫಲ್ಯಕ್ಕೆ ವಿರಾಟ್ ಕೊಹ್ಲಿ ಕಾರಣ; ಮಾಜಿ ಕ್ರಿಕೆಟಿಗನ ಗಂಭೀರ ಆರೋಪ

2008ರಲ್ಲಿ ನಡೆದ ಐಪಿಎಲ್ ಆರಂಭದಿಂದಲೂ ಟ್ರೋಫಿ ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಾಧ್ಯವಾಗಿಲ್ಲ. ಈ ವೈಫಲ್ಯಕ್ಕೆ ವಿರಾಟ್ ಕೊಹ್ಲಿಯೇ ಕಾರಣ ಎಂದು ಭಾರತದ ಮಾಜಿ ಆಟಗಾರ ಆರೋಪಿಸಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on

2008ರಲ್ಲಿ ನಡೆದ ಐಪಿಎಲ್ ಆರಂಭದಿಂದಲೂ ಟ್ರೋಫಿ ಗೆಲ್ಲಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಾಧ್ಯವಾಗಿಲ್ಲ. ಈ ವೈಫಲ್ಯಕ್ಕೆ ವಿರಾಟ್ ಕೊಹ್ಲಿಯೇ ಕಾರಣ ಎಂದು ಭಾರತದ ಮಾಜಿ ಆಟಗಾರ ಆರೋಪಿಸಿದ್ದಾರೆ. ಐಪಿಎಲ್ 2024ರ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಸ್ಪಿನ್ನರ್‌ನಿಂದ ಔಟಾದ ನಂತರ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚಿನ ವರ್ಷಗಳಲ್ಲಿ ಆರ್‌ಸಿಬಿಯ ದೊಡ್ಡ ಸಮಸ್ಯೆ ಎಂದರೆ ಆಟಗಾರರಿಗೆ ಬೆಂಬಲದ ಕೊರತೆ. ಅವರು ಶೇನ್ ವ್ಯಾಟ್ಸನ್, ಯುಜ್ವೇಂದ್ರ ಚಹಾಲ್, ಮಿಚೆಲ್ ಸ್ಟಾರ್ಕ್ ಮತ್ತು ಶಿವಂ ದುಬೆ ಅವರಂತಹ ಮ್ಯಾಚ್ ವಿನ್ನರ್‌ಗಳಿಗೆ ಫ್ರಾಂಚೈಸಿಯನ್ನು ತೊರೆಯಲು ಅವಕಾಶ ಮಾಡಿಕೊಟ್ಟರು ಎಂದು ಅಂಬಟಿ ರಾಯುಡು ದೂರಿದ್ದಾರೆ.

ಕೊಹ್ಲಿ ಹಲವು ವರ್ಷಗಳ ಕಾಲ RCB ನಾಯಕರಾಗಿದ್ದರು. ಆಗ ಅವರು ತಂಡದಲ್ಲಿ ಆಟಗಾರರನ್ನು ಉಳಿಸಿಕೊಳ್ಳುವುದು ಮತ್ತು ಹರಾಜು ಪ್ರಕ್ರಿಯೆಯಲ್ಲಿ ತಮ್ಮ ಅಭಿಪ್ರಾಯ ಹೇಳುವ ಅಧಿಕಾರ ಹೊಂದಿದ್ದರು. ಆದರೆ, ಆ ತಂಡವು ಗುಣಮಟ್ಟದ ಬೌಲರ್‌ಗಳನ್ನು ಎಂದಿಗೂ ಖರೀದಿಸಲಿಲ್ಲ. ಈ ಸಮಸ್ಯೆ ವರ್ಷದಿಂದ ವರ್ಷಕ್ಕೆ ಆರ್‌ಸಿಬಿ ತಂಡದ ಮೇಲೆ ಪರಿಣಾಮ ಬೀರುತ್ತಲೇ ಸಾಗಿದೆ. ಬ್ಯಾಟಿಂಗ್ ಕ್ರಮಾಂಕದಲ್ಲಿಯೂ ಅವರು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಅಗ್ರ ಕ್ರಮಾಂಕದಲ್ಲಿ ಅತ್ಯುತ್ತಮ ಬ್ಯಾಟರ್‌ಗಳನ್ನು ಹೊಂದಿದ್ದರೂ, ಅವರು ಕೈಚೆಲ್ಲಿದರೆ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಬೇರೆ ಯಾರೊಬ್ಬರೂ ಇಲ್ಲ.

ವಿರಾಟ್ ಕೊಹ್ಲಿ
IPL 2024: ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ದಾಖಲೆ, ಈ Record ಬರೆದ ಮೊದಲ ಭಾರತೀಯ!

'ವಿರಾಟ್ ಕೊಹ್ಲಿ ಸುದೀರ್ಘ ಕಾಲ RCB ನಾಯಕರಾಗಿದ್ದರು. ತಂಡವು ಎಂದಿಗೂ ಗುಣಮಟ್ಟದ ಬೌಲರ್‌ಗಳನ್ನು ಖರೀದಿಸಿಯೇ ಇಲ್ಲ. ತಂಡದೊಂದಿಗಿದ್ದ ಅಗ್ರಮಾನ್ಯ ಆಟಗಾರರೂ ಕೂಡ ತಂಡದಿಂದ ಯಾವುದೇ ಬೆಂಬಲ ಸಿಗದೆ ತಂಡದಿಂದ ಹೊರನಡೆದರು. ಅದೇ ಆಟಗಾರರು ಇದೀಗ ಇತರ ಫ್ರಾಂಚೈಸಿಗಳನ್ನು ಸೇರಿದ ನಂತರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ವಿರಾಟ್ ಕೊಹ್ಲಿ ಅವರು ನಾಯಕನಾಗಿದ್ದು ತಮ್ಮ ಪಾತ್ರವನ್ನು ಪರಿಪೂರ್ಣವಾಗಿ ನಿರ್ವಹಿಸಲಿಲ್ಲ' ಎಂದು ದೂರಿದ್ದಾರೆ.

ವಿರಾಟ್ ಕೊಹ್ಲಿ
IPL 2024: RCBಗೆ ಮತ್ತೊಂದು ಸೋಲು, ಲಖನೌ ಗೆ 28 ರನ್ ಜಯ

ವಿರಾಟ್ ಕೊಹ್ಲಿ ಆರ್‌ಸಿಪಿ ಪರವಾಗಿ ಐಪಿಎಲ್‌ನಲ್ಲಿ 7000 ರನ್ ಗಳಿಸಿದ್ದಾರೆ. ಆದರೆ, RCB ಗಾಗಿ ಅಗ್ರ ರನ್ ಗಳಿಸಿದವರ ಪಟ್ಟಿಯಲ್ಲಿ ಬೇರೆ ಯಾವುದೇ ಬ್ಯಾಟರ್ ಇಲ್ಲ. ತಂಡಕ್ಕಾಗಿ ಅತಿಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಬೇರೆ ಯಾರೂ ಕಾಣಸಿಗುವುದಿಲ್ಲ. ಒಬ್ಬ ಆಟಗಾರನನ್ನು ನಂಬಿ ಯಾವುದೇ ತಂಡವು ಟ್ರೋಫಿಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಅಂಬಟಿ ರಾಯುಡು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com