IPL 2024: RCBಗೆ ಮತ್ತೊಂದು ಸೋಲು, ಲಖನೌ ಗೆ 28 ರನ್ ಜಯ

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತವರಿನಲ್ಲೇ ಮತ್ತೊಂದು ಮುಖಭಂಗ ಎದುರಾಗಿದ್ದು, ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ 28 ರನ್ ಗಳ ಸೋಲು ಕಂಡಿದೆ.
ಆರ್ ಸಿಬಿಗೆ ಸೋಲು
ಆರ್ ಸಿಬಿಗೆ ಸೋಲು

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತವರಿನಲ್ಲೇ ಮತ್ತೊಂದು ಮುಖಭಂಗ ಎದುರಾಗಿದ್ದು, ಲಖನೌ ಸೂಪರ್ ಜೈಂಟ್ಸ್ ತಂಡದ ವಿರುದ್ಧದ ಪಂದ್ಯದಲ್ಲಿ 28 ರನ್ ಗಳ ಸೋಲು ಕಂಡಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ತಂಡ ನೀಡಿದ 182 ರನ್ ಗಳ ಸವಾಲಿನ ಗುರಿಗೆ ಉತ್ತರವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 19.4 ಓವರ್ ನಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು153 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.

ಮೂಲಕ 28 ರನ್ ಗಳ ಅಂತರದಲ್ಲಿ ಸೋಲಿಗೆ ಶರಣಾಯಿತು. ಇದು ಆರ್​ಸಿಬಿ ಬಳಗಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿರುವ ಒಟ್ಟು ನಾಲ್ಕು ಪಂದ್ಯಗಳ ಪೈಕಿ ಮೂರನೇ ಸೋಲಾಗಿದೆ.

ಆರ್ ಸಿಬಿಗೆ ಸೋಲು
IPL 2024: ಕೆಕೆಆರ್ vs ಆರ್‌ಆರ್, ಜಿಟಿ vs ಡಿಸಿ ಪಂದ್ಯಗಳ ದಿನಾಂಕ ಬದಲು

ಆರ್ ಸಿಬಿ ಕಳಪೆ ಬ್ಯಾಟಿಂಗ್

ಇನ್ನು ಈ ಪಂದ್ಯದ ಸೋಲಿಗೆ ತಂಡದ ಕಳಪೆ ಬ್ಯಾಟಿಂಗ್ ಕಾರಣ ಎನ್ನಲಾಗುತ್ತಿದೆ. ಟಾಸ್ ಗೆದ್ದ ಬೆಂಗಳೂರು ತಂಡ ಮೊದಲು ಫೀಲ್ಡಿಂಗ್ ಅಯ್ಕೆ ಮಾಡಿಕೊಂಡಿತು. ಅಂತೆಯೆ ಮೊದಲು ಬ್ಯಾಟ್ ಮಾಡಿದ ಲಕ್ನೊ ತಂಡ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 181 ರನ್ ಬಾರಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೆಲ್ಲಬಹುದಾಗಿದ್ದ ಮೊತ್ತವನ್ನು ಬೆನ್ನಟ್ಟಿದ ಆರ್​ಸಿಬಿ 19.4 ಓವರ್​ಗಳಲ್ಲಿ 153 ರನ್​ಗೆ ಆಲ್​ಔಟ್ ಆಗಿ 28 ರನ್​ಗಳ ಹೀನಾಯ ಸೋಲು ಕಂಡಿತು. ವಿರಾಟ್ ಕೊಹ್ಲಿ 22 ರನ್​ ಬಾರಿಸಿ ಉತ್ತಮ ಆರಂಭ ನೀಡಲು ಯತ್ನಿಸಿದರೂ ಫಾಫ್​ ಡು ಪ್ಲೆಸಿಸ್ 19 ರನ್ ಬಾರಿಸಿ ಅನಗತ್ಯ ರನ್​ಔಟ್​ಗೆ ಒಳಗಾದರು.

ರಜತ್ ಪಾಟೀದಾರ್ 21 ಎಸೆತಕ್ಕೆ 29 ರನ್​ ಬಾರಿಸಿ ಪ್ರಯೋಜನಕ್ಕೆ ಇಲ್ಲದ ಇನಿಂಗ್ಸ್ ಆಡಿದರು. ಮ್ಯಾಕ್ಸ್​ವೆಲ್ ಮತ್ತೆ ಸೊನ್ನೆ ಸುತ್ತಿದರೆ, 18 ಕೋಟಿ ಮೌಲ್ಯದ ಗ್ರೀನ್​ಗೆ ಯುವ ಬೌಲರ್ ಎಸೆತಕ್ಕೆ ಬೌಲ್ಡ್ ಆಗಿದ್ದೇ ಗೊತ್ತಾಗಲಿಲ್ಲ. ಅನುಜ್​ ರಾವತ್​ ಟೆಸ್ಟ್ ಪಂದ್ಯದಂತೆ ಆಡಿ 21 ಎಸೆತಕ್ಕೆ 11 ರನ್ ಬಾರಿಸಿ ಕಳಪೆಯಾಗಿ ಔಟಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com