IPL 2024: ಮುಂಬೈ ವಿರುದ್ಧ RCB ಗೆ 7 ವಿಕೆಟ್‌ ಹೀನಾಯ ಸೋಲು

2024ರ ಐಪಿಎಲ್ ನ 25ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.
ಗೆಲುವಿನ ಸಂಭ್ರಮದಲ್ಲಿ ಮುಂಬೈ ಇಂಡಿಯನ್ಸ್
ಗೆಲುವಿನ ಸಂಭ್ರಮದಲ್ಲಿ ಮುಂಬೈ ಇಂಡಿಯನ್ಸ್

ಮುಂಬೈ: 2024ರ ಐಪಿಎಲ್ ನ 25ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮುಂಬೈ ಇಂಡಿಯನ್ಸ್ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ, ದಿನೇಶ್​ ಕಾರ್ತಿಕ್​(53*), ರಜತ್​ ಪಾಟಿದಾರ್​(50) ಮತ್ತು ನಾಯಕ ಫಾಫ್​ ಡುಪ್ಲೆಸಿಸ್(61)​ ಅವರ ಅರ್ಧಶತಕದ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 196 ರನ್​ ಗಳಿಸಿತು.

ಗೆಲುವಿಗೆ 197 ರನ್ ಗಳ ಬೃಹತ್ ಮೊತ್ತ ಬೆನ್ನತ್ತಿದ ಮುಂಬೈ, ಸೂರ್ಯಕುಮಾರ್​ ಹಾಗೂ ಇಶಾನ್ ಕಿಶನ್ ಅವರ ಪ್ರಚಂಡ ಬ್ಯಾಟಿಂಗ್​ ನೆರವಿನಿಂದ 15.3 ಓವರ್​ಗಳಲ್ಲಿ ಅಂದರೆ ಬರೋಬ್ಬರಿ 27 ಎಸೆತಗಳು ಬಾಕಿ ಇರುವಂತೆಯೇ 199 ರನ್​ ಬಾರಿಸಿ ವಿಜಯ ಪತಾಕೆ ಹಾರಿಸಿತು. ಇದರೊಂದಿಗೆ ಆರ್ ಸಿಬಿ ಐದನೇ ಬಾರಿ ಸೋಲು ಒಪ್ಪಿಕೊಂಡಿತು.

ಗೆಲುವಿನ ಸಂಭ್ರಮದಲ್ಲಿ ಮುಂಬೈ ಇಂಡಿಯನ್ಸ್
IPL 2024: ಆರ್ ಸಿಬಿ ವಿರುದ್ಧದ ಪಂದ್ಯ, ಟಾಸ್ ಗೆದ್ದ ಮುಂಬೈ, ಬೌಲಿಂಗ್ ಆಯ್ಕೆ

ಮುಂಬೈ ಪರ ಇಶಾನ್ ಕಿಶನ್ ಗರಿಷ್ಠ 69 ರನ್ ಗಳಿಸಿದರು. ಕಿಶನ್ ಅವರ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್ ಮತ್ತು 7 ಬೌಂಡರಿಗಳಿದ್ದವು. ಸೂರ್ಯಕುಮಾರ್ ಯಾದವ್ ಕೂಡ 19 ಎಸೆತಗಳಲ್ಲಿ 52 ರನ್ ಗಳಿಸಿದರು. ರೋಹಿತ್ ಶರ್ಮಾ 38 ರನ್ ಕೊಡುಗೆ ನೀಡಿದರೆ, ನಾಯಕ ಹಾರ್ದಿಕ್ ಪಾಂಡ್ಯ ಔಟಾಗದೆ 21 ಮತ್ತು ತಿಲಕ್ ವರ್ಮಾ 6 ಎಸೆತಗಳಲ್ಲಿ 16 ರನ್ ಗಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com