Tim David, Kieron Pollard fined
ಪೊಲಾರ್ಡ್, ಡೇವಿಡ್​​ಗೆ BCCI ದಂಡ

IPL 2024: ಕ್ರೀಸ್ ನಲ್ಲಿದ್ದ ಬ್ಯಾಟರ್ ಗೆ ನಿಯಮ ಬಾಹಿರ ಸೂಚನೆ; ಮುಂಬೈ ಇಂಡಿಯನ್ಸ್ ತಂಡದ ಪೊಲಾರ್ಡ್, ಡೇವಿಡ್​​ಗೆ BCCI ದಂಡ..!

ಹಾಲಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೀರನ್ ಪೊಲ್ಲಾರ್ಡ್ ಮತ್ತು ಟಿಮ್ ಡೇವಿಡ್ ಬಿಸಿಸಿಐ ದಂಡ ವಿಧಿಸಿದೆ.
Published on

ನವದೆಹಲಿ: ಹಾಲಿ ಐಪಿಎಲ್ ಟೂರ್ನಿಯಲ್ಲಿ ಮುಂಬೈ ಇಂಡಿಯನ್ಸ್ ತಂಡದ ಕೀರನ್ ಪೊಲ್ಲಾರ್ಡ್ ಮತ್ತು ಟಿಮ್ ಡೇವಿಡ್ ಬಿಸಿಸಿಐ ದಂಡ ವಿಧಿಸಿದೆ.

ಏಪ್ರಿಲ್ 18 ರಂದು ನಡೆದ ಮುಂಬೈ ಇಂಡಿಯನ್ಸ್‌ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಕೀರಾನ್ ಪೊಲಾರ್ಡ್‌ ಹಾಗೂ ತಂಡದ ಬ್ಯಾಟಿಂಗ್ ಆಲ್​ರೌಂಡರ್ ಟಿಮ್ ಡೇವಿಡ್ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಬಿಸಿಸಿಐ ದಂಡ ವಿಧಿಸಿದೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಈ ಇಬ್ಬರು ಐಪಿಎಲ್ ನಿಯಮವನ್ನು ಮುರಿದು ಸ್ಟ್ರೈಕ್​ನಲ್ಲಿದ್ದ ಸೂರ್ಯಕುಮಾರ್​ಗೆ ಡಿಆರ್​ಎಸ್ ತೆಗೆದುಕೊಳ್ಳುವಂತೆ ಸನ್ನೆ ಮಾಡಿದ್ದರು. ಅಲ್ಲದೆ ಈ ಇಬ್ಬರು ಸನ್ನೆ ನೀಡುತ್ತಿರುವುದನ್ನು ಗಮನಿಸಿದ್ದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಸ್ಯಾಮ್ ಕರನ್ ಈ ಕೃತ್ಯವನ್ನು ಫೀಲ್ಡ್ ಅಂಪೈರ್​​ನ ಗಮನಕ್ಕೆ ತಂದಿದ್ದರು. ಆದರೆ ಆ ವೇಳೆ ಫೀಲ್ಡ್ ಅಂಪೈರ್ ಕರನ್ ಮಾತನ್ನು ಫೀಲ್ಡ್ ಅಂಪೈರ್ ಗಳು ನಿರ್ಲಕ್ಷಿಸಿದ್ದರು. ಆದರ ಬಳಿಕ ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗಿತ್ತು. ಇದೀಗ ಈ ಇಬ್ಬರ ನಿಯಮ ಉಲ್ಲಂಘನೆಗೆ ಬಿಸಿಸಿಐ ದಂಡ ವಿಧಿಸಿದೆ.

Tim David, Kieron Pollard fined
IPL 2024: ಐಪಿಎಲ್ ಇತಿಹಾಸದಲ್ಲೆ ದಾಖಲೆಯ ರನ್ ಗಳಿಸಿದ ಹೈದರಾಬಾದ್ ತಂಡ!

ಈ ಇಬ್ಬರು ಪಂದ್ಯ ಶುಲ್ಕದ ಶೇಕಡಾ 20 ರಷ್ಟು ಸಂಭಾವನೆಯನ್ನು ದಂಡವಾಗಿ ಪಾವತಿಸಬೇಕಿದ್ದು, ಟಿಮ್ ಡೇವಿಡ್ ಮತ್ತು ಪೊಲಾರ್ಡ್ ಈ ವಿಷಯದಲ್ಲಿ ಮ್ಯಾಚ್ ರೆಫರಿ ಮುಂದೆ ವಿಚಾರಣೆಯ ವೇಳೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ ಮತ್ತು ಆ ಬಳಿಕವಷ್ಟೇ ಈ ಇಬ್ಬರಿಗೆ ದಂಡ ವಿಧಿಸಲಾಗಿದೆ. ಟಿಮ್ ಡೇವಿಡ್ ಮತ್ತು ಪೊಲಾರ್ಡ್ ನೀತಿ ಸಂಹಿತೆಯ ಆರ್ಟಿಕಲ್ 2.20 ರ ಅಡಿಯಲ್ಲಿ ಹಂತ 1 ಅಪರಾಧವನ್ನು ಮಾಡಿದ್ದಾರೆ. ಈ ಕಾರಣದಿಂದಾಗಿ, ಡೇವಿಡ್ ಮತ್ತು ಪೊಲಾರ್ಡ್ ಅವರ ಪಂದ್ಯದ ಶುಲ್ಕದ ಶೇಕಡಾ 20 ರಷ್ಟು ದಂಡ ವಿಧಿಸಲಾಗಿದೆ.

ಏನಿದು ಘಟನೆ?

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ 15ನೇ ಓವರ್​ ಬೌಲ್ ಮಾಡುತ್ತಿದ್ದರು. ಈ ವೇಳೆ ಸ್ಟ್ರೈಕ್​ನಲ್ಲಿದ್ದ ಸೂರ್ಯಕುಮಾರ್​ಗೆ ಈ ಇಬ್ಬರೂ ಡಗೌಟ್‌ನಿಂದ ವೈಡ್ ಬಾಲ್​ಗೆ ಡಿಆರ್‌ಎಸ್ ತೆಗೆದುಕೊಳ್ಳುವಂತೆ ಸೂಚಿಸಿದ್ದರು. ಈ ಇಬ್ಬರ ಸನ್ನೆಯ ಬಳಿಕ ಸೂರ್ಯಕುಮಾರ್ ಡಿಆರ್‌ಎಸ್ ತೆಗೆದುಕೊಂಡಿದ್ದರು.

ಆ ನಂತರ ಅಂಪೈರ್ ಅದನ್ನು ವೈಡ್ ಎಂದು ಘೋಷಿಸಬೇಕಾಯಿತು. ಈ ಬಗ್ಗೆ ಪಂಜಾಬ್ ಕಿಂಗ್ಸ್ ನಾಯಕ ಕೂಡ ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೆ ಈ ಇಬ್ಬರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವಿರೋಧ ಕೂಡ ವ್ಯಕ್ತವಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com