PBKS vs KKR: ಬೌಲರ್‌ಗಳನ್ನು ಕಾಪಾಡಿ ಎಂದ ರವಿಚಂದ್ರನ್ ಅಶ್ವಿನ್; ಕಾರಣವೇನು?

ಶುಕ್ರವಾರ ಈಡನ್ ಗಾರ್ಡನ್ಸ್ ಅಂಗಳದಲ್ಲಿ ನಡೆದ ಪಂಜಾಬ್ ಮತ್ತು ಕೆಕೆಆರ್ ನಡುವಿನ ಪಂದ್ಯದ ವೇಳೆ ವಿಶ್ವ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆಗಳು ನಿರ್ಮಾಣವಾದವು. ಈ ಹೈಸ್ಕೋರಿಂಗ್ ಪಂದ್ಯದ ನಂತರ 'ಕೆಟ್ಟ ಐಪಿಎಲ್' ಹ್ಯಾಶ್‌ಟ್ಯಾಗ್‌ ಎಕ್ಸ್‌ನಲ್ಲಿ ಟ್ರೆಂಡ್ ಆಯಿತು. ಭಾರತ ತಂಡದ ಹಿರಿಯ ಕ್ರಿಕೆಟಿಗ, ಬೌಲರ್ ರವಿಚಂದ್ರನ್ ಅಶ್ವಿನ್ ಕೂಡ ಟ್ವೀಟ್ ಮಾಡಿ, ಬೌಲರ್‌ಗಳನ್ನು ಉಳಿಸಿ ಎಂದರು.
ರವಿಚಂದ್ರನ್ ಅಶ್ವಿನ್ - ಪಂಜಾಬ್ vs ಕೋಲ್ಕತ್ತಾ ಪಂದ್ಯ
ರವಿಚಂದ್ರನ್ ಅಶ್ವಿನ್ - ಪಂಜಾಬ್ vs ಕೋಲ್ಕತ್ತಾ ಪಂದ್ಯ

ಶುಕ್ರವಾರ ಈಡನ್ ಗಾರ್ಡನ್ಸ್ ಅಂಗಳದಲ್ಲಿ ನಡೆದ ಪಂಜಾಬ್ ಮತ್ತು ಕೆಕೆಆರ್ ನಡುವಿನ ಪಂದ್ಯದ ವೇಳೆ ವಿಶ್ವ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಹೊಸ ದಾಖಲೆಗಳು ನಿರ್ಮಾಣವಾದವು. ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 262 ರನ್‌ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಹಲವು ದಾಖಲೆಗಳನ್ನು ಬರೆಯಿತು.

ಈ ಹೈಸ್ಕೋರಿಂಗ್ ಪಂದ್ಯದ ನಂತರ 'ಕೆಟ್ಟ ಐಪಿಎಲ್' ಹ್ಯಾಶ್‌ಟ್ಯಾಗ್‌ ಎಕ್ಸ್‌ನಲ್ಲಿ ಟ್ರೆಂಡ್ ಆಯಿತು. ಭಾರತ ತಂಡದ ಹಿರಿಯ ಕ್ರಿಕೆಟಿಗ, ಬೌಲರ್ ರವಿಚಂದ್ರನ್ ಅಶ್ವಿನ್ ಕೂಡ ಟ್ವೀಟ್ ಮಾಡಿ, ಬೌಲರ್‌ಗಳನ್ನು ಉಳಿಸಿ ಎಂದರು.

ಇದು 17ನೇ ಐಪಿಎಲ್ ಆವೃತ್ತಿಯಾಗಿದ್ದು, 16 ಐಪಿಎಲ್ ಆವೃತ್ತಿಗಳಲ್ಲಿ 250ಕ್ಕೂ ಹೆಚ್ಚು ರನ್ ಒಂದು ಬಾರಿ ಮಾತ್ರ ದಾಖಲಾಗಿದ್ದರೆ, ಈ ಒಂದೇ ಆವೃತ್ತಿಯಲ್ಲಿ ಇದುವರೆಗೆ 7 ಬಾರಿ ದಾಖಲಾಗಿದೆ. ಟಿ20 ಕ್ರಿಕೆಟ್ ಎಂದರೆ ಬರಿ ಬ್ಯಾಟರ್‌ಗಳ ಆಟ ಎನ್ನುವಂತಾಗಿದ್ದು, ಬೌಲರ್‌ಗಳು ಅಸಹಾಯಕರಾಗಿದ್ದಾರೆ.

ಬ್ಯಾಟರ್ ಮತ್ತು ಬೌಲರ್‌ಗಳಿಗೆ ಸಮಾನವಾದ ಅವಕಾಶ ಇದ್ದಾಗ ಮಾತ್ರ ಆಟ ರೋಚಕವಾಗಿರುತ್ತದೆ. ಆದರೆ ಬ್ಯಾಟಿಂಗ್ ಸ್ನೇಹಿ ಪಿಚ್‌ಗಳು ಮಾತ್ರ ಇರುವುದರಿಂದ ಆಟದಲ್ಲಿ ರೋಚಕತೆ ಕಡಿಮೆ ಆಗಿದೆ. ಹೀಗೆ ಮುಂದುವರೆದರೆ ಟಿ20 ಕ್ರಿಕೆಟ್ ಜನಪ್ರಿಯತೆ ಕಡಿಮೆ ಆಗುವ ಆತಂಕ ಕೂಡ ಇದೆ.

ಮುಂದಿನ ಪಂದ್ಯಗಳಲ್ಲಿ ತಂಡಗಳು 300 ರನ್‌ಗಳನ್ನು ಕಲೆಹಾಕಿದರೂ ಅಚ್ಚರಿ ಪಡಬೇಕಿಲ್ಲ. ಹೀಗೆ ಮುಂದುವರೆದರೆ ಬೌಲರ್‌ಗಳು ಯಾಕೆ, ಬೌಲಿಂಗ್ ಮೆಷಿನ್ ಇದ್ದರೆ ಸಾಕು ಎಂದು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ಇದೆಲ್ಲದರ ಜೊತೆಗೆ ಈಗಿರುವ ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಕೂಡ ರೋಹಿತ್ ಶರ್ಮಾ, ಮೊಹಮ್ಮದ್ ಸಿರಾಜ್ ಸೇರಿದಂತೆ ಹಲವು ಆಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಪಂಜಾಬ್ vs ಕೋಲ್ಕತ್ತಾ

ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಮಾಡಲು ನಿರ್ಧರಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 261 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. 262 ರನ್‌ಗಳ ಬೃಹತ್ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ಕೂಡ ಸ್ಫೋಟಕ ಆರಂಭ ಪಡೆಯಿತು.

ರವಿಚಂದ್ರನ್ ಅಶ್ವಿನ್ - ಪಂಜಾಬ್ vs ಕೋಲ್ಕತ್ತಾ ಪಂದ್ಯ
IPL 2024: KKR ವಿರುದ್ಧ ಪಂಜಾಬ್ ಗೆ 8 ವಿಕೆಟ್ ಜಯ: ರನ್ ಚೇಸಿಂಗ್ ನಲ್ಲಿ ಹೊಸ ದಾಖಲೆ!

ಪ್ರಭ್‌ಸಿಮ್ರಾನ್ ಸಿಂಗ್ 20 ಎಸೆತಗಳಲ್ಲಿ 50 ರನ್ ಗಳಿಸುವ ಮೂಲಕ ಪಂಜಾಬ್‌ಗೆ ಸ್ಫೋಟಕ ಆರಂಭ ನೀಡಿದರು. ಜಾನಿ ಬೈರ್ ಸ್ಟೋ 48 ಎಸೆತಗಳಲ್ಲಿ ಅಜೇಯ 108 ರನ್ ಗಳಿಸುವ ಮೂಲಕ ತಂಡದ ಗೆಲುವಿಗೆ ನೆರವಾದರು. ರಿಲೀ ರೊಸೋವ್ 16 ಎಸೆತಗಳಲ್ಲಿ 26 ರನ್ ಗಳಿಸಿದರೆ, ಶಶಾಂಕ್ ಸಿಂಗ್ 28 ಎಸೆತಗಳಲ್ಲಿ ಅಜೇಯ 68 ರನ್ ಗಳಿಸಿದರು. ಅಂತಿಮವಾಗಿ 18.4 ಓವರ್‌ಗಳಲ್ಲಿಯೇ 262 ರನ್ ಗಳಿಸುವ ಮೂಲಕ ಇನ್ನೂ 8 ಎಸೆತ ಬಾಕಿ ಇರುವಾಗಲೇ ಪಂಜಾಬ್ ಪಂದ್ಯವನ್ನು ಗೆದ್ದುಕೊಂಡಿತು.

ಮತ್ತೂ ದಾಖಲೆ ನಿರ್ಮಾಣ

ಟಿ20 ಪಂದ್ಯವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ್ದು ಕೂಡ ಈ ಪಂದ್ಯದಲ್ಲಿ. ಒಟ್ಟು 42 ಸಿಕ್ಸರ್‌ಗಳು ಈ ಪಂದ್ಯದಲ್ಲಿ ಮೂಡಿಬಂದವು, ಇದೇ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದಾರಾಬಾದ್ vs ಮುಂಬೈ ಇಂಡಿಯನ್ಸ್, ಆರ್‌ಸಿಬಿ vs ಎಸ್ಆರ್‌ಎಚ್ ನಡುವಿನ ಪಂದ್ಯದಲ್ಲಿ ತಲಾ 38 ಸಿಕ್ಸರ್ ಬಂದಿದ್ದು ಈವರೆಗಿನ ದಾಖಲೆಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com