ಬೆಂಗಳೂರು: ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಉದ್ಘಾಟನೆಗೆ ಸಜ್ಜು!

ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಮೂರು ವಿಶ್ವ ದರ್ಜೆಯ ಆಟದ ಮೈದಾನಗಳು, 45 ಅಭ್ಯಾಸದ ಪಿಚ್‌ಗಳು, ಒಳಾಂಗಣ ಕ್ರಿಕೆಟ್ ಪಿಚ್‌ಗಳು, ಒಲಿಂಪಿಕ್ ಗಾತ್ರದ ಈಜುಕೊಳ ಮತ್ತು ಅತ್ಯಾಧುನಿಕ ತರಬೇತಿ, ಕ್ರೀಡಾ ವಿಜ್ಞಾನ ಸೌಲಭ್ಯಗಳಿವೆ
ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ
ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ
Updated on

ಬೆಂಗಳೂರು: ಬಿಸಿಸಿಐ ಉದ್ಯಾನನಗರಿ ಬೆಂಗಳೂರಿನಲ್ಲಿ ನಿರ್ಮಾಣ ಮಾಡುತ್ತಿರುವ ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಬಹುತೇಕ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಜ್ಜಾಗಿದೆ. 45 ಅಭ್ಯಾಸದ ಪಿಚ್‌ಗಳು ಮತ್ತು ಒಲಿಂಪಿಕ್ಸ್ ಗಾತ್ರದ ಈಜುಕೊಳ ಮತ್ತಿತರ ಸೌಲಭ್ಯವಿರುವ ಅಕಾಡೆಮಿಯನ್ನು ಶೀಘ್ರದಲ್ಲಿಯೇ ಉದ್ಘಾಟಿಸಲಾಗುವುದು ಎಂದು ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಶನಿವಾರ ತಿಳಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಜಯ್ ಶಾ, ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಮೂರು ವಿಶ್ವ ದರ್ಜೆಯ ಆಟದ ಮೈದಾನಗಳು, 45 ಅಭ್ಯಾಸದ ಪಿಚ್‌ಗಳು, ಒಳಾಂಗಣ ಕ್ರಿಕೆಟ್ ಪಿಚ್‌ಗಳು, ಒಲಿಂಪಿಕ್ ಗಾತ್ರದ ಈಜುಕೊಳ ಮತ್ತು ಅತ್ಯಾಧುನಿಕ ತರಬೇತಿ, ಕ್ರೀಡಾ ವಿಜ್ಞಾನ ಸೌಲಭ್ಯಗಳಿವೆ ಎಂದು ತಿಳಿಸಿದ್ದಾರೆ.

ನೂತನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ
ಮಾಜಿ ಕ್ರಿಕೆಟಿಗ ಅಂಶುಮಾನ್ ಗಾಯಕ್ವಾಡ್ ಕ್ಯಾನ್ಸರ್ ನಿಂದ ನಿಧನ: ಪ್ರಧಾನಿ ಮೋದಿ, ಬಿಸಿಸಿಐ ಸೇರಿ ಹಲವರು ಕಂಬನಿ

ನೂತನ ರಾಷ್ಟ್ರೀಯ ಅಕಾಡೆಮಿಯಿಂದ ದೇಶದ ಪ್ರಸ್ತುತ ಮತ್ತು ಭವಿಷ್ಯದ ಕ್ರಿಕೆಟಿಗರು ಉತ್ತಮ ವಾತಾವರಣದಲ್ಲಿ ತಮ್ಮ ಕೌಶಲ್ಯಗಳನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ ಎಂದು ಅವರು ಹೇಳಿದ್ದಾರೆ. ಪ್ರಸ್ತುತ NCA ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿದ್ದು, ಜಮ್ಮು- ಕಾಶ್ಮೀರ ಹಾಗೂ ಈಶಾನ್ಯ ಭಾರತದಲ್ಲಿ ಎನ್‌ಸಿಎಗಳನ್ನು ಪ್ರಾರಂಭಿಸಲು ಬಿಸಿಸಿಐ ಪ್ರಕ್ರಿಯೆ ಆರಂಭಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com