ನೀವು ವಿದೇಶಿ ಕೋಚ್ ಅಲ್ಲ: Rohit-Kohli ಕುರಿತಂತೆ ಗೌತಮ್ ಗಂಭೀರ್ ನಿರ್ಧಾರವನ್ನು ಟೀಕಿಸಿದ ಮಾಜಿ ಬೌಲರ್

ಈ ಸರಣಿಯಲ್ಲಿ ಹೊಸ ಪ್ರತಿಭೆಗಳನ್ನು ಪ್ರಯೋಗಿಸುವ ಅವಕಾಶವನ್ನು ಗೌತಮ್ ಗಂಭೀರ್ ಕಳೆದುಕೊಂಡಿದ್ದಾರೆ ಎಂಬುದು ನೆಹ್ರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕೊಹ್ಲಿ-ರೋಹಿತ್-ಗೌತಮ್ ಗಂಭೀರ್
ಕೊಹ್ಲಿ-ರೋಹಿತ್-ಗೌತಮ್ ಗಂಭೀರ್
Updated on

ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಹಿರಿಯ ಆಟಗಾರರಾದ ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat kohli)ಯನ್ನು ಆಡಿಸಲು ನಿರ್ಧರಿಸಿದ ಮಾಜಿ ಸಹ ಆಟಗಾರ ಮತ್ತು ಟೀಂ ಇಂಡಿಯಾ ಮುಖ್ಯ ಕೋಚ್ ಗೌತಮ್ ಗಂಭೀರ್ (Gautam Gambhir) ಅವರ ನಿರ್ಧಾರವನ್ನು ಭಾರತ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಆಶಿಶ್ ನೆಹ್ರಾ (Ashish Nehra) ಟೀಕಿಸಿದ್ದಾರೆ.

IPL 2024 ಮತ್ತು T20 ವಿಶ್ವಕಪ್ ಸೇರಿದಂತೆ ದಣಿದ ಋತುವಿನ ನಂತರ ಶ್ರೀಲಂಕಾ ವಿರುದ್ಧದ ಕ್ರಿಕೆಟ್ ಸರಣಿ ನಡೆಯುತ್ತಿದೆ. ಮುಂಬರುವ ದೇಶೀಯ ಋತುವನ್ನು ಪರಿಗಣಿಸಿ, ಹಿರಿಯ ಆಟಗಾರರಿಗೆ ಈ ಪ್ರವಾಸಕ್ಕೆ ವಿಶ್ರಾಂತಿ ನೀಡುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಈ ಸರಣಿಯಲ್ಲಿ ಹೊಸ ಪ್ರತಿಭೆಗಳನ್ನು ಪ್ರಯೋಗಿಸುವ ಅವಕಾಶವನ್ನು ಗೌತಮ್ ಗಂಭೀರ್ ಕಳೆದುಕೊಂಡಿದ್ದಾರೆ ಎಂಬುದು ನೆಹ್ರಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ ಜೊತೆ ಮಾತನಾಡಿದ ನೆಹ್ರಾ, ಭಾರತದ ಮುಂದಿನ ಸರಣಿಯು 2-3 ತಿಂಗಳ ನಂತರ ನಡೆಯಲಿದೆ. ಇದು ನಮಗೆ ಸಾಕಷ್ಟು ಆಶ್ಚರ್ಯಕರವಾಗಿದೆ. ಆದ್ದರಿಂದ ರೋಹಿತ್ ಮತ್ತು ಕೊಹ್ಲಿಯಂತಹ ಆಟಗಾರರ ಬದಲಿಗೆ ಈ ಸರಣಿಯಲ್ಲಿ ಯುವ ಆಟಗಾರರಿಗೆ ಅವಕಾಶಗಳನ್ನು ನೀಡಲು ಉತ್ತಮ ಅವಕಾಶವಿತ್ತು ಎಂದು ನಾನು ಭಾವಿಸುತ್ತೇನೆ. ಗಂಭೀರ್ ಹೊಸ ತರಬೇತುದಾರ ಎಂದು ನನಗೆ ತಿಳಿದಿದೆ. ಆದರೆ ಅವರು ಅನುಭವಿ ಆಟಗಾರರೊಂದಿಗೆ ಸ್ವಲ್ಪ ಸಮಯ ಕಳೆಯಲು ಬಯಸುತ್ತಾರೆ. ಆದರೆ ಅವರಿಗೆ ಅವರಿಬ್ಬರೂ ತಿಳಿದಿಲ್ಲವೆಂದಲ್ಲ. ರೋಹಿತ್ ಮತ್ತು ಕೊಹ್ಲಿಗೆ ಪರಿಚಯವಿರುವ ಮುಖ್ಯ ಕೋಚ್ ಗಂಭೀರ್ ಅವರೊಂದಿಗೆ ಬಾಂಧವ್ಯವನ್ನು ಬೆಳೆಸಿಕೊಳ್ಳುವ ಅಗತ್ಯವಿಲ್ಲ ಎಂದು ಮಾಜಿ ಭಾರತೀಯ ವೇಗದ ಬೌಲರ್ ಒತ್ತಿ ಹೇಳಿದರು.

ಕೊಹ್ಲಿ-ರೋಹಿತ್-ಗೌತಮ್ ಗಂಭೀರ್
2 ನೇ ODI: ಭಾರತ ವಿರುದ್ಧ ಲಂಕಾಗೆ 32 ರನ್ ಗೆಲುವು

ಮಾಜಿ ಆರಂಭಿಕ ಆಟಗಾರ ಗಂಭೀರ ವಿದೇಶಿ ಕೋಚ್ ಅಲ್ಲ. ಈ ಸ್ಟಾರ್ ಜೋಡಿಗೆ (ರೋಹಿತ್ ಮತ್ತು ಕೊಹ್ಲಿ) ಗೌತಮ್ ಗಂಭೀರ ಹೊಸಬರಲ್ಲ ಎಂದು ನೆಹ್ರಾ ಭಾವಿಸುತ್ತಾರೆ. ಕೊಹ್ಲಿ ಮತ್ತು ರೋಹಿತ್ ಅವರೊಂದಿಗಿನ ಸಮೀಕರಣವನ್ನು ಸರಿಪಡಿಸಲು ಬಯಸುವ ಗಂಭೀರ್ ವಿದೇಶಿ ಕೋಚ್ ಅಲ್ಲ ಎಂದು ಅವರು ಹೇಳಿದರು. ಹಾಗಾಗಿ ಹೊಸ ಆಟಗಾರರನ್ನು ಪ್ರಯತ್ನಿಸಲು ಅವರಿಗೆ ಉತ್ತಮ ಅವಕಾಶವಾಗಿದೆ. ರೋಹಿತ್ ಮತ್ತು ಕೊಹ್ಲಿ ದೇಶೀಯ ಋತುವಿನ ಪ್ರಾರಂಭವಾದಾಗ ಆಡಬಹುದು. ಇದು ತಪ್ಪು ವಿಧಾನ ಎಂದು ನಾನು ಹೇಳುತ್ತಿಲ್ಲ, ಆದರೆ ಇದು ಈ ಸರಣಿಯ ತಂತ್ರಗಳಲ್ಲಿ ಒಂದಾಗಿರಬಹುದು ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com