
ಬಾರ್ಡರ್-ಗವಾಸ್ಕರ್ ಟ್ರೋಫಿಯ ಗಬ್ಬಾ ಟೆಸ್ಟ್‌ನಲ್ಲಿ ಸಾಕಷ್ಟು ಏಳು ಬೀಳುಗಳ ನಂತರ, ಭಾರತ ತಂಡ ಇಂದು ಫಾಲೋ-ಆನ್ ನಿಂದ ತಪ್ಪಿಸಿಕೊಂಡಿದೆ. ಇದರ ಸಂಪೂರ್ಣ ಕ್ರೆಡಿಟ್ ಭಾರತದ ಕೊನೆಯ ಬ್ಯಾಟಿಂಗ್ ಜೋಡಿ ಜಸ್ಪ್ರೀತ್ ಬುಮ್ರಾ ಮತ್ತು ಆಕಾಶ್ ದೀಪ್ ಅವರಿಗೆ ಸಲ್ಲುತ್ತದೆ. ಈ ಜೋಡಿಯ 39 ರನ್‌ಗಳ ಜೊತೆಯಾಟವು ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್ ಸ್ಕೋರ್ 445 ಗೆ ಪ್ರತ್ಯುತ್ತರವಾಗಿ ಭಾರತ 246 ರನ್‌ಗಳ ಮುನ್ನಡೆಗೆ ನೆರವಾಯಿತು.
ಆಕಾಶ್ ದೀಪ್ 74ನೇ ಓವರ್ ನ ಎರಡನೇ ಎಸೆತದಲ್ಲಿ ಬೌಂಡರಿ ಬಾರಿಸಿ ಫಾಲೋಆನ್ ಗೆ ಸಿಲುಕುವುದನ್ನು ತಪ್ಪಿಸಿದ್ದು ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಸಂತಸದ ಅಲೆ ಎದ್ದಿತು. ಕೋಚ್ ಗೌತಮ್ ಗಂಭೀರ್ ಖುಷಿ ವ್ಯಕ್ತಪಡಿಸಿದರು. ವಿರಾಟ್ ಕೊಹ್ಲಿ ಹಾಗೂ ನಾಯಕ ರೋಹಿತ್ ಶರ್ಮಾ ಕೂಡ ಸಂಭ್ರಮಿಸಿದರು. ಫಾಲೋ-ಆನ್ ತಪ್ಪಿಸಿಕೊಳ್ಳುವುದು ಭಾರತ ತಂಡಕ್ಕೆ ಅನಿವಾರ್ಯವಾಗಿತ್ತು.
ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಅರ್ಧಶತಕ ಬಾರಿಸಿ ಭಾರತವನ್ನು ಬಲಿಷ್ಠ ಸ್ಥಿತಿಗೆ ತಂದರು. ನಿತೀಶ್ ರೆಡ್ಡಿ 16 ರನ್ ಗಳಿಸಿರಬಹುದು. ಇದು ಭಾರತಕ್ಕೆ ಫಾಲೋ-ಆನ್ ತಪ್ಪಿಸಲು ನೆರವಾಯಿತು. ಫಾಲೋ-ಆನ್ ತಪ್ಪಿಸಿದ ನಂತರ, ಆಕಾಶ್ ದೀಪ್ ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಸಿಕ್ಸರ್ ಬಾರಿಸಿದಾಗ, ಕೊಹ್ಲಿ ಸಂತೋಷದಿಂದ ಕುಣಿದರು. ಸದ್ಯ ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ 252 ರನ್ ಗಳಿಗೆ 9 ವಿಕೆಟ್ ಕಳೆದುಕೊಂಡಿದೆ.
ಈಗ ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡಬೇಕಾಗಿದೆ. ಸದ್ಯ ಅವರು 193 ರನ್‌ಗಳ ಮುನ್ನಡೆಯಲ್ಲಿದ್ದಾರೆ. ಒಂದು ನಿರ್ದಿಷ್ಠ ರನ್ ದಾಖಲಿಸಿದ ನಂತರವೇ ಅವರು ಇನ್ನಿಂಗ್ಸ್ ಡಿಕ್ಲೇರ್ ಮಾಡುತ್ತಾರೆ. ಪ್ಯಾಟ್ ಕಮಿನ್ಸ್ ನೇತೃತ್ವದ ತಂಡಕ್ಕೆ ಕೆಟ್ಟ ಸುದ್ದಿ ಎಂದರೆ ಜೋಶ್ ಹ್ಯಾಜಲ್‌ವುಡ್ ಗಾಯದ ಕಾರಣದಿಂದ ಪಂದ್ಯದಿಂದ ಹೊರಗುಳಿದಿದ್ದಾರೆ. ಅವರು ಬಾರ್ಡರ್-ಗವಾಸ್ಕರ್ ಟ್ರೋಫಿಯಿಂದಲೂ ಹೊರಗುಳಿಯಬಹುದು.
Advertisement