
ನವದೆಹಲಿ: ಕ್ರಿಕೆಟ್ ಜಗತ್ತಿನ BOSS ಯಾರು..? ಈ ಪ್ರಶ್ನೆಗೆ ಸರಿಯಾದ ಉತ್ತರ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಅರ್ಥಾತ್ ಐಸಿಸಿ.. ಆದರೆ ಆಸ್ಟ್ರೇಲಿಯಾ ಕ್ರಿಕೆಟಿಗರು ಮಾತ್ರ ಐಸಿಸಿಗಿಂತ ಬಿಸಿಸಿಐ ಹೆಚ್ಚು ಪವರ್ ಫುಲ್ ಎಂದು ಹೇಳಿದ್ದಾರೆ.
ಹೌದು.. ಇತ್ತೀಚೆಗೆ ABC Sport ನಡೆಸಿದ್ದ ಸಂದರ್ಶನವೊಂದರಲ್ಲಿ ಆಸಿಸ್ ಕ್ರಿಕೆಟಿಗರಿಗೆ ಒನ್ ವರ್ಡ್ ಉತ್ತರ ಸ್ಪರ್ಧೆ ನೀಡಲಾಗಿತ್ತು. ಇಲ್ಲಿ ಕ್ರಿಕೆಟ್ ಗೆ ಸಂಬಂಧಿಸಿದ ಹೆಸರುಗಳನ್ನು ಹೇಳಿ ಅದಕ್ಕೆ ಒಂದು ಪದದ ಉತ್ತರ ಹೇಳುವಂತೆ ಕೇಳಲಾಗಿತ್ತು. ಈ ಪ್ರಶ್ನೆಗಳ ಪೈಕಿ ಐಸಿಸಿ.. ಬಿಸಿಸಿಐ ಸಂಸ್ಥೆಗಳ ಹೆಸರು ಹೇಳಿದಾಗ ಆಸಿಸ್ ಕ್ರಿಕೆಟಿಗರು ತಮ್ಮದೇ ಆದ ಉತ್ತರಗಳನ್ನು ನೀಡಿದ್ದಾರೆ. ಈ ಕುರಿತ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
BIGG ಎಂದ ಆಸಿಸ್ ನಾಯಕ
ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಐಸಿಸಿ ಮತ್ತು ಬಿಸಿಸಿಐ ಎರಡೂ ಸಂಸ್ಥೆಗಳನ್ನೂ ಬಿಗ್ ಎಂದು ಕರೆಯುವ ಮೂಲಕ ಎರಡೂ ಬೋರ್ಡ್ ಗಳಿಗೆ ಸಮಾನ ಸ್ಥಾನ ನೀಡಿದ್ದಾರೆ. ಅಂತೆಯೇ ಭಾರತೀಯ ಕ್ರಿಕೆಟ್ ಕುರಿತು ಕೇಳಿದ ಪ್ರಶ್ನೆಗೂ ಅದೇ ರೀತಿಯ ಉತ್ತರ ನೀಡಿದ್ದಾರೆ. ನಂತರ ಮಾತನಾಡಿದ ಸ್ಟಾರ್ ಬ್ಯಾಟರ್ ಟ್ರಾವಿಸ್ ಹೆಡ್, ಬಿಸಿಸಿಐಗೆ ರೂಲರ್ಸ್ (Rulers), ಐಸಿಸಿಗೆ Second ಎಂದು ಹೇಳಿ.. ಭಾರತೀಯ ಕ್ರಿಕೆಟ್ ತಂಡವನ್ನು ಸ್ಟ್ರಾಂಗ್ ಎಂದು ಬಣ್ಣಿಸಿದ್ದಾರೆ.
ಇನ್ನು ಆಸಿಸ್ ಆರಂಭಿಕ ಬ್ಯಾಟರ್ ಉಸ್ಮಾವ್ ಖವಾಜ.. ಐಸಿಸಿ ಕುರಿತು ಕೇಳಿದ ಪ್ರಶ್ನೆಗೆ Pass ಎಂದು ಹೇಳಿ ವಿವಾದದಿಂದ ನುಣಿಚಿಕೊಳ್ಳುವ ಪ್ರಯತ್ನ ಮಾಡಿದರು. ಅಂತೆಯೇ ಭಾರತೀಯ ಕ್ರಿಕೆಟ್ ಅನ್ನು ಟ್ಯಾಲೆಂಟೆಡ್ ಎಂದು ಹೊಗಳಿದರು. ಆಸಿಸ್ ಸ್ಟಾರ್ ಆಟಗಾರ ನಾಥನ್ ಲೈಯಾನ್ ಬಿಸಿಸಿಐಗೆ ಬಿಗ್ ಎಂದು ಕರೆದಿದ್ದು, ಐಸಿಸಿಗೆ ಕ್ರಿಕೆಟ್ ಬಾಸ್ ಎಂದು ಕರೆದಿದ್ದಾರೆ.
ಭಾರತೀಯ ಕ್ರಿಕೆಟ್ ಗೆ Passionate ಎಂದಿದ್ದಾರೆ. ಮ್ಯಾಕ್ಸ್ ವೆಲ್ ಮಾತನಾಡಿ ಬಿಸಿಸಿಐಗೆ ಪವರ್ ಫುಲ್ ಎಂದು ಕರೆದಿದ್ದು, ಐಸಿಸಿಗೆ ಬಾಸ್ ಎಂದಿದ್ದಾರೆ. ಭಾರತೀಯ ಕ್ರಿಕೆಟ್ ಅನ್ನು Fanatic ಎಂದು ಬಣ್ಣಿಸಿದ್ದಾರೆ.
ಸ್ಟೀವ್ ಸ್ಮಿತ್ ಮಾತ್ರ ಬಿಸಿಸಿಐಗೆ ಪವರ್ ಹೌಸ್ ಎಂದು ಕರೆದಿದ್ದು, ಐಸಿಸಿಗೆ ಬಿಸಿಸಿಐನಷ್ಟು ಪವರ್ ಫುಲ್ ಅಲ್ಲ ಎಂದು ಹೇಳಿ ಇದು ಜಸ್ಟ್ ಜೋಕ್ ಎಂದು ನಕ್ಕಿದ್ದಾರೆ. ಬಳಿಕ ಐಸಿಸಿಗೆ ಲೀಡರ್ಸ್ ಎಂದು ಹೇಳಿದ್ದಾರೆ.
Advertisement