3ನೇ ಟೆಸ್ಟ್: ಇಂಗ್ಲೆಂಡ್ ಗೆ ಗೆಲ್ಲಲು 557 ರನ್ ಗುರಿ, ಆಂಗ್ಲರಿಗೆ ಆರಂಭಿಕ ಆಘಾತ 4 ವಿಕೆಟ್ ಪತನ

ಆತಿಥೇಯ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಸುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ಗೆ ಗೆಲ್ಲಲು 557 ರನ್ ಟಾರ್ಗೆಟ್ ನೀಡಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾBCCI

ರಾಜಕೋಟ್: ಆತಿಥೇಯ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಸುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ಗೆ ಗೆಲ್ಲಲು 557 ರನ್ ಟಾರ್ಗೆಟ್ ನೀಡಿದೆ.

ರಾಜಕೋಟ್ ನಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಂದು ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ 430 ರನ್ ಪೇರಿಸಿ ಡಿಕ್ಲೇರ್ ಮಾಡಿಕೊಂಡಿತ್ತು. ನಂತರ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 42 ರನ್ ಗಳಿಗೆ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. ಇಂಗ್ಲೆಂಡ್ ಪರ ಜೋ ರೂಟ್ ಅಜೇಯ 6 ರನ್ ಹಾಗೂ ಬೆನ್ ಸ್ಟೋಕ್ಸ್ ಅಜೇಯ 12 ರನ್ ಬಾರಿಸಿ ಆಟವಾಡುತ್ತಿದ್ದಾರೆ.

ಜಡೇಜಾ ಉತ್ತಮವಾಗಿ ಬೌಲಿಂಗ್ ಮಾಡಿದ್ದು ಒಲಿ ಪೋಪ್ (3 ರನ್) ಮತ್ತು ಜಾನಿ ಬೈರ್ಸ್ಟೋವ್ (4 ರನ್) ವಿಕೆಟ್ ಪಡೆದರೆ 11 ರನ್ ಗಳಿಸಿದ್ದ ಝಾಕ್ ಕ್ರಾಲಿ ಅವರನ್ನು ಬುಮ್ರಾ ಔಟ್ ಮಾಡಿದರು.

ಟೀಂ ಇಂಡಿಯಾ
3ನೇ ಟೆಸ್ಟ್: ಯಶಸ್ವಿ ಜೈಸ್ವಾಲ್ ಭರ್ಜರಿ ದ್ವಿಶತಕ; ಇಂಗ್ಲೆಂಡ್ ವಿರುದ್ಧ ಈ ದಾಖಲೆ ಮಾಡಿದ ಮೊದಲ ಆಟಗಾರ

ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಮೂರನೇ ದಿನ ಭಾರತದ ಪರ ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಜೈಸ್ವಾಲ್ ಗಾಯಗೊಂಡು ನಿವೃತ್ತಿ ಗೊಂಡಿದ್ದರು. ಬಳಿಕ ನಾಲ್ಕನೇ ದಿನದಾಟದಲ್ಲಿ ಶುಭಮನ್ ಗಿಲ್‌ (91) ವಿಕೆಟ್‌ ಪತನದ ಬಳಿಕ ಮರಳಿ ಕ್ರೀಸ್‌ಗೆ ಬಂದು ತಮ್ಮ ಟೆಸ್ಟ್‌ ಕ್ರಿಕೆಟ್‌ ವೃತ್ತಿಬದುಕಿನ 2ನೇ ದ್ವಿಶತಕ ಬಾರಿಸಿದರು.

ಇಂಗ್ಲೆಂಡ್ ವಿರುದ್ಧ 2 ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್

ಈ ಮೂಲಕ ಟೆಸ್ಟ್‌ ಕ್ರಿಕೆಟ್‌ ಸರಣಿ ಒಂದರಲ್ಲಿ ಬ್ಯಾಕ್‌ ಟು ಬ್ಯಾಕ್‌ ದ್ವಿಶತಕ ಬಾರಿಸಿದ ಭಾರತದ ಮೊದಲ ಬ್ಯಾಟರ್‌ ಎಂಬ ದಾಖಲೆಯನ್ನು 22 ವರ್ಷದ ಯುವ ಎಡಗೈ ಬ್ಯಾಟರ್‌ ತಮ್ಮದಾಗಿಸಿಕೊಂಡರು. ವಿರಾಟ್‌ ಕೊಹ್ಲಿ (2017ರಲ್ಲಿ) ಮತ್ತು ವಿನೋದ್‌ ಕಾಂಬ್ಳಿ (1993ರಲ್ಲಿ) ಈ ಮೊದಲು ಬ್ಯಾಕ್‌ ಟು ಬ್ಯಾಕ್‌ ದ್ವಿಶತಕ ಬಾರಿಸಿದ ಭಾರತೀಯ ಬ್ಯಾಟರ್‌ಗಳಾಗಿದ್ದಾರೆ.

2ನೇ ಇನ್ನಿಂಗ್ಸ್ ನಲ್ಲಿ ದ್ವಿಶತಕ ಸಿಡಿಸಿ ಎಲೈಟ್ ಪಟ್ಟಿ ಸೇರಿದ ಜೈಸ್ವಾಲ್

ಇನ್ನು ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ ಈ ಸಾಧನೆ ಮಾಡಿದ ಇತರೆ ಭಾರತೀಯ ಆಟಗಾರರ ಎಲೈಟ್ ಪಟ್ಟಿ ಸೇರಿದ್ದಾರೆ. ಈ ಹಿಂದೆ 1964 ಮನ್ಸೂಲ್‌ ಅಲಿ ಖಾನ್‌ ಪಟೌಡಿ (ಅಜೇಯ 203 ರನ್), 1965ರಲ್ಲಿ ಡಿ ಸರ್ದೇಸಾಯ್‌ (ಅಜೆಯೇ 200 ರನ್), 1971ರಲ್ಲಿ ಸುನಿಲ್ ಗವಾಸ್ಕರ್ (220 ರನ್), 2001ರಲ್ಲಿ ವಿವಿಎಸ್ ಲಕ್ಷಣ್ (281 ರನ್) ಮತ್ತು 2006ರಲ್ಲಿ ವಸೀಂ ಜಾಫರ್ (212 ರನ್) ದ್ವಿತಶಕ ಸಿಡಿಸಿದ ಸಾಧನೆ ಗೈದಿದ್ದಾರೆ. ಇದೀಗ ಈ ಪಟ್ಟಿಗೆ ಜೈಸ್ವಾಲ್ ಕೂಡ ಸೇರ್ಪಡೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com