3ನೇ ಟೆಸ್ಟ್: ಯಶಸ್ವಿ ಜೈಸ್ವಾಲ್ ಭರ್ಜರಿ ದ್ವಿಶತಕ; ಇಂಗ್ಲೆಂಡ್ ವಿರುದ್ಧ ಈ ದಾಖಲೆ ಮಾಡಿದ ಮೊದಲ ಆಟಗಾರ

ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಭಾರತದ ಸ್ಫೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ.
ಜೈಸ್ವಾಲ್ ದ್ವಿಶತಕ ಸಾಧನೆ
ಜೈಸ್ವಾಲ್ ದ್ವಿಶತಕ ಸಾಧನೆ

ರಾಜ್ ಕೋಟ್: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ನಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ ಭಾರತದ ಸ್ಫೋಟಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಹಲವು ದಾಖಲೆಗಳನ್ನು ಧೂಳಿಪಟ ಮಾಡಿದ್ದಾರೆ.

ಸೌರಾಷ್ಟ್ರ ಕ್ರಿಕೆಟ್‌ ಸಂಸ್ಥೆ ಕ್ರೀಡಾಂಗಣದಲ್ಲಿ ಮೂರನೇ ದಿನ ಭಾರತದ ಪರ ಎರಡನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ಜೈಸ್ವಾಲ್ ಗಾಯಗೊಂಡು ನಿವೃತ್ತಿ ಗೊಂಡಿದ್ದರು. ಬಳಿಕ ನಾಲ್ಕನೇ ದಿನದಾಟದಲ್ಲಿ ಶುಭಮನ್ ಗಿಲ್‌ (91) ವಿಕೆಟ್‌ ಪತನದ ಬಳಿಕ ಮರಳಿ ಕ್ರೀಸ್‌ಗೆ ಬಂದು ತಮ್ಮ ಟೆಸ್ಟ್‌ ಕ್ರಿಕೆಟ್‌ ವೃತ್ತಿಬದುಕಿನ 2ನೇ ದ್ವಿಶತಕ ಬಾರಿಸಿದರು.

ಜೈಸ್ವಾಲ್ ದ್ವಿಶತಕ ಸಾಧನೆ
3ನೇ ಟೆಸ್ಟ್: 430 ರನ್ ಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್, ಇಂಗ್ಲೆಂಡ್ ಗೆ 557 ರನ್ ಬೃಹತ್ ಗುರಿ

ಇಂಗ್ಲೆಂಡ್ ವಿರುದ್ಧ 2 ದ್ವಿಶತಕ ಸಿಡಿಸಿದ ಮೊದಲ ಭಾರತೀಯ ಬ್ಯಾಟರ್

ಈ ಮೂಲಕ ಟೆಸ್ಟ್‌ ಕ್ರಿಕೆಟ್‌ ಸರಣಿ ಒಂದರಲ್ಲಿ ಬ್ಯಾಕ್‌ ಟು ಬ್ಯಾಕ್‌ ದ್ವಿಶತಕ ಬಾರಿಸಿದ ಭಾರತದ ಮೊದಲ ಬ್ಯಾಟರ್‌ ಎಂಬ ದಾಖಲೆಯನ್ನು 22 ವರ್ಷದ ಯುವ ಎಡಗೈ ಬ್ಯಾಟರ್‌ ತಮ್ಮದಾಗಿಸಿಕೊಂಡರು. ವಿರಾಟ್‌ ಕೊಹ್ಲಿ (2017ರಲ್ಲಿ) ಮತ್ತು ವಿನೋದ್‌ ಕಾಂಬ್ಳಿ (1993ರಲ್ಲಿ) ಈ ಮೊದಲು ಬ್ಯಾಕ್‌ ಟು ಬ್ಯಾಕ್‌ ದ್ವಿಶತಕ ಬಾರಿಸಿದ ಭಾರತೀಯ ಬ್ಯಾಟರ್‌ಗಳಾಗಿದ್ದಾರೆ.

Hitting 200s in successive Tests (India)

  • Vinod Kambli: 224 vs Eng Mumbai WS | 227 vs Zim Delhi (1992/93)

  • Virat Kohli: 213 vs SL Nagpur | 243 vs SL Delhi (2017/18)

  • Yashasvi Jaiswal: 209 vs Eng Vizag | 200* vs Eng Rajkot (2023/24)

2ನೇ ಇನ್ನಿಂಗ್ಸ್ ನಲ್ಲಿ ದ್ವಿಶತಕ ಸಿಡಿಸಿ ಎಲೈಟ್ ಪಟ್ಟಿ ಸೇರಿದ ಜೈಸ್ವಾಲ್

ಇನ್ನು ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ದ್ವಿಶತಕ ಸಿಡಿಸಿದ ಯಶಸ್ವಿ ಜೈಸ್ವಾಲ್ ಈ ಸಾಧನೆ ಮಾಡಿದ ಇತರೆ ಭಾರತೀಯ ಆಟಗಾರರ ಎಲೈಟ್ ಪಟ್ಟಿ ಸೇರಿದ್ದಾರೆ. ಈ ಹಿಂದೆ 1964 ಮನ್ಸೂಲ್‌ ಅಲಿ ಖಾನ್‌ ಪಟೌಡಿ (ಅಜೇಯ 203 ರನ್), 1965ರಲ್ಲಿ ಡಿ ಸರ್ದೇಸಾಯ್‌ (ಅಜೆಯೇ 200 ರನ್), 1971ರಲ್ಲಿ ಸುನಿಲ್ ಗವಾಸ್ಕರ್ (220 ರನ್), 2001ರಲ್ಲಿ ವಿವಿಎಸ್ ಲಕ್ಷಣ್ (281 ರನ್) ಮತ್ತು 2006ರಲ್ಲಿ ವಸೀಂ ಜಾಫರ್ (212 ರನ್) ದ್ವಿತಶಕ ಸಿಡಿಸಿದ ಸಾಧನೆ ಗೈದಿದ್ದಾರೆ. ಇದೀಗ ಈ ಪಟ್ಟಿಗೆ ಜೈಸ್ವಾಲ್ ಕೂಡ ಸೇರ್ಪಡೆಯಾಗಿದ್ದಾರೆ.

Double hundreds in second innings for India

  • 203*MAK Pataudi vs Eng Delhi 1964

  • 200*D Sardesai vs WI Mumbai BS 1965

  • 220 S Gavaskar vs WI Port of Spain 1971

  • 221 S Gavaskar vs Eng The Oval 1979

  • 281 VVS Laxman vs Aus Kolkata 2001

  • 212 Wasim Jaffer vs WI St John's 2006

  • 200*Yashasvi Jaiswal vs Eng Rajkot 2024

ಜೈಸ್ವಾಲ್ ದ್ವಿಶತಕ ಸಾಧನೆ
3ನೇ ಟೆಸ್ಟ್: ಜೈಸ್ವಾಲ್ ದಾಖಲೆಯ ದ್ವಿಶತಕ, ಹಲವು ದಾಖಲೆಗಳು ಧೂಳಿಪಟ

ಸಿಕ್ಸರ್ ನಲ್ಲೂ ಜೈಸ್ವಾಲ್ ದಾಖಲೆ

ಇನ್ನು ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ದ್ವಿಶತಕ ಸಿಡಿಸಿದ ಜೈಸ್ವಾಲ್, ಇದೇ ಪಂದ್ಯದಲ್ಲಿ ಸಿಕ್ಸರ್ ಗಳ ಮೂಲಕವೂ ದಾಖಲೆಯೊಂದನ್ನು ನಿರ್ಮಿಸಿದ್ದಾರೆ. 2ನೇ ಇನ್ನಿಂಗ್ಸ್ ನಲ್ಲಿ ಜೈಸ್ವಾಲ್ ಒಟ್ಟು 12 ಸಿಕ್ಸರ್ ಸಿಡಿಸಿದ್ದು, ಆ ಮೂಲಕ 1996ರಲ್ಲಿ ಪಾಕಿಸ್ತಾನದ ಆಲ್ರೌಂಡರ್ ವಸೀಂ ಅಕ್ರಂರ ದಾಖಲೆಯನ್ನು ಜೈಸ್ವಾಲ್ ಸರಿಗಟ್ಟಿದ್ದಾರೆ.

Most sixes in a Test innings

  • 12 Yashasvi Jaiswal vs Eng Rajkot 2024 *

  • 12 Wasim Akram vs Zim Sheikhupura 1996

  • 11 M Hayden vs Zim Perth 2003

  • 11 N Astle vs Eng Christchurch 2002

  • 11 B McCullum vs Pak Sharjah 2014

  • 11 B McCullum vs SL Christchurch 2014

  • 11 B Stokes vs SA Cape Town 2016

  • 11 Kusal Mendis vs Ire Galle 2023

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com