ಐಪಿಎಲ್ ಪ್ರಾಯೋಜಕತ್ವ ದಾಖಲೆ; ಟೈಟಲ್ ಹಕ್ಕು ಮತ್ತೆ ಟಾಟಾ ಪಾಲು, 2024 ರಿಂದ 2028ರವರೆಗಿನ 'ಸ್ಪಾನ್ಸರ್ ಶಿಪ್'!

ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ ಪ್ರಾಯೋಜಕತ್ವ ಹಕ್ಕು ಮತ್ತೆ ಟಾಟಾ ಸಂಸ್ಥೆಯ ಪಾಲಾಗಿದ್ದು, ಹಾಲಿ ಅಂದರೆ 2024ರಿಂದ 2028ರವರೆಗಿನ ಟೈಟಲ್ 'ಸ್ಪಾನ್ಸರ್ ಶಿಪ್' ಹಕ್ಕು ಟಾಟಾ ಸಮೂಹದ ಪಾಲಾಗಿದೆ.
ಐಪಿಎಲ್
ಐಪಿಎಲ್

ಮುಂಬೈ: ತೀವ್ರ ಕುತೂಹಲ ಕೆರಳಿಸಿದ್ದ ಐಪಿಎಲ್ ಪ್ರಾಯೋಜಕತ್ವ ಹಕ್ಕು ಮತ್ತೆ ಟಾಟಾ ಸಂಸ್ಥೆಯ ಪಾಲಾಗಿದ್ದು, ಹಾಲಿ ಅಂದರೆ 2024ರಿಂದ 2028ರವರೆಗಿನ ಟೈಟಲ್ 'ಸ್ಪಾನ್ಸರ್ ಶಿಪ್' ಹಕ್ಕು ಟಾಟಾ ಸಮೂಹದ ಪಾಲಾಗಿದೆ.

ಹೌದು.. ಐಪಿಎಲ್‌ ಟೂರ್ನಿಯ ಶೀರ್ಷಿಕೆ ಪ್ರಾಯೋಜಕತ್ವ ಮತ್ತೆ ಟಾಟಾ ಸಂಸ್ಥೆಯ ಪಾಲಾಗಿದ್ದು, 2028ರ ವರೆಗೆ ಐಪಿಎಲ್‌ ಪ್ರಾಯೋಜಕತ್ವ ಪಡೆದಿರುವ ಟಾಟಾ ಸಂಸ್ಥೆಯು ಪ್ರತಿ ಆವೃತ್ತಿಗೆ ಬಿಸಿಸಿಐಗೆ 500 ಕೋಟಿ ರೂ ಪಾವತಿಸಲಿದೆ. 2022-23ರ ಆವೃತ್ತಿಗಳಲ್ಲಿ ಟಾಟಾ ಸಂಸ್ಥೆ ಶೀರ್ಷಿಕೆ ಹಕ್ಕು ಪಡೆದಿತ್ತು. ವರ್ಷಕ್ಕೆ ತಲಾ 335 ಕೋಟಿ ರು ಪಾವತಿಸಿತ್ತು.

ಇತ್ತೀಚೆಗಷ್ಟೆ ಬಿಸಿಸಿಐ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಟೆಂಡರ್‌ ಆಹ್ವಾನಿಸಿತ್ತು. ಶುಕ್ರವಾರ ಟಾಟಾ ಸಂಸ್ಥೆಗೆ ಆಯೋಜನೆ ಹಕ್ಕು ಸಿಕ್ಕಿದ್ದು, 5 ವರ್ಷಗಳಲ್ಲಿ ಒಟ್ಟು 2500 ಕೋಟಿ ರು, ಬಿಸಿಸಿಐಗೆ ಪಾವತಿಸಲಿದೆ. 2008ರಲ್ಲಿ ಐಪಿಎಲ್‌ ಆರಂಭಗೊಂಡಾಗ ಡಿಎಲ್‌ಎಫ್‌ 5 ವರ್ಷಕ್ಕೆ ಪ್ರಾಯೋಜಕತ್ವ ಪಡೆದು, ಪ್ರತಿ ವರ್ಷಕ್ಕೆ 40 ಕೋಟಿ ರು ಪಾವತಿಸಿತ್ತು.

BCCI ಕಾರ್ಯದರ್ಶಿ ಜಯ್ ಶಾ ಈ ಬಗ್ಗೆ ಮಾಹಿತಿ ನೀಡಿದ್ದು, "ಐಪಿಎಲ್‌ನ ಶೀರ್ಷಿಕೆ ಪ್ರಾಯೋಜಕರಾಗಿ ಟಾಟಾ ಗ್ರೂಪ್‌ನೊಂದಿಗೆ ಪಾಲುದಾರಿಕೆಯನ್ನು ಘೋಷಿಸಲು ನಾವು ಹರ್ಷಿಸುತ್ತೇವೆ. ಲೀಗ್ ಗಡಿಗಳನ್ನು ಮೀರಿದೆ, ಕೌಶಲ್ಯ, ಉತ್ಸಾಹ ಮತ್ತು ಮನರಂಜನೆಯ ಸಾಟಿಯಿಲ್ಲದ ಮಿಶ್ರಣದಿಂದ ವಿಶ್ವದಾದ್ಯಂತ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಅದೇ ರೀತಿ, ಭಾರತದಲ್ಲಿ ಬೇರೂರಿರುವ ಟಾಟಾ ಗ್ರೂಪ್, ಶ್ರೇಷ್ಠತೆಯ ಸಂಕೇತವಾಗಿ ಹೊರಹೊಮ್ಮಿದೆ. ವಿವಿಧ ಜಾಗತಿಕ ವಲಯಗಳಲ್ಲಿ ತನ್ನ ಛಾಪನ್ನು ಮೂಡಿಸಿದೆ.ಈ ಸಹಯೋಗವು ಬೆಳವಣಿಗೆ, ನಾವೀನ್ಯತೆ ಮತ್ತು ಉತ್ಕೃಷ್ಟತೆಗೆ ಪರಸ್ಪರ ಸಮರ್ಪಣಾ ಮನೋಭಾವವನ್ನು ಒಳಗೊಂಡಿರುತ್ತದೆ. ಅಭೂತಪೂರ್ವ ಆರ್ಥಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ಐಪಿಎಲ್‌ನ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ಮಾತನಾಡಿ, "ಐಪಿಎಲ್ 2024-28 ರ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಟಾಟಾ ಗ್ರೂಪ್‌ನ ಸಹಯೋಗವು ಐಪಿಎಲ್‌ನ ಪ್ರಯಾಣದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಟಾಟಾ ಗ್ರೂಪ್ 2500 ಕೋಟಿ ರೂ. ದಾಖಲೆ ಮುರಿಯುವ ಮೊತ್ತಕ್ಕೆ ಸಾಕ್ಷಿಯಾಗಿದೆ. ಕ್ರೀಡಾ ಜಗತ್ತಿನಲ್ಲಿ ಐಪಿಎಲ್ ಹೊಂದಿರುವ ಅಪಾರ ಮೌಲ್ಯ ಮತ್ತು ಆಕರ್ಷಣೆ ಇದಾಗಿದೆ. ಈ ಅಭೂತಪೂರ್ವ ಮೊತ್ತವು ಲೀಗ್‌ನ ಇತಿಹಾಸದಲ್ಲಿ ಹೊಸ ಮಾನದಂಡವನ್ನು ಹೊಂದಿಸುತ್ತದೆ ಮಾತ್ರವಲ್ಲದೆ ಜಾಗತಿಕ ಪ್ರಭಾವದೊಂದಿಗೆ ಐಪಿಎಲ್‌ನ ಸ್ಥಾನವನ್ನು ಪ್ರಮುಖ ಕ್ರೀಡಾಕೂಟವಾಗಿ ಪುನರುಚ್ಚರಿಸುತ್ತದೆ. ಕ್ರೀಡೆಯು ನಿಜವಾಗಿಯೂ ಶ್ಲಾಘನೀಯವಾಗಿದೆ, ಮತ್ತು ನಾವು ಒಟ್ಟಾಗಿ ಹೊಸ ಎತ್ತರವನ್ನು ಏರಲು ಮತ್ತು ಅಭಿಮಾನಿಗಳಿಗೆ ಸಾಟಿಯಿಲ್ಲದ ಕ್ರಿಕೆಟ್ ಮನರಂಜನೆಯನ್ನು ಒದಗಿಸಲು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com