
T20 ವಿಶ್ವಕಪ್ 2024ರ ಸೂಪರ್ 8ರ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡಕ್ಕೆ ಅಫ್ಘಾನ್ ತಂಡ ಸೋಲಿನ ರುಚಿ ತೋರಿಸಿದೆ.
ಆಸ್ಟ್ರೇಲಿಯ ತಂಡ ಈ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದು ಎಂದು ಪಂದ್ಯಕ್ಕೂ ಮುನ್ನ ಹೇಳಲಾಗುತ್ತಿದ್ದರೂ ಅದು ಆಗಲಿಲ್ಲ. 149 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಆಸ್ಟ್ರೇಲಿಯಾಗೆ ಸೋಲಾಗಿದೆ. ಅಫ್ಘಾನಿಸ್ತಾನ ತಂಡ ಆಸ್ಟ್ರೇಲಿಯಾವನ್ನು 21 ರನ್‌ಗಳಿಂದ ಸೋಲಿಸಿದೆ. 2023ರ ಏಕದಿನ ವಿಶ್ವಕಪ್‌ನ ಲೀಗ್ ಹಂತದ ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡ ಆಸ್ಟ್ರೇಲಿಯಾ ವಿರುದ್ಧ ಮಾಡಿದ ತಪ್ಪನ್ನು ಈ ಬಾರಿ ಮಾಡಲಿಲ್ಲ.
ಆಸ್ಟ್ರೇಲಿಯಾದ ವಿಜಯ ರಥವನ್ನು ಅಫ್ಘಾನ್ ತಡೆದು ನಿಲ್ಲಿಸಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ, ಅಫ್ಘಾನಿಸ್ತಾನವು ಸೆಮಿಫೈನಲ್‌ಗೆ ತಲುಪುವ ಭರವಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ ಗ್ರೂಪ್ 1ರ ಬಾಂಗ್ಲಾದೇಶ ತಂಡವೂ ಪಂದ್ಯಾವಳಿಯಲ್ಲಿ ಜೀವಂತವಾಗಿದೆ. ಆದರೆ ಈಗ ಆಸ್ಟ್ರೇಲಿಯಕ್ಕೆ ಕಷ್ಟವಾಗಿದೆ. ಏಕೆಂದರೆ ಭಾರತ ವಿರುದ್ಧದ ಪಂದ್ಯ ಆಸ್ಟ್ರೇಲಿಯಾ ತಂಡಕ್ಕೆ ನಾಕೌಟ್ ಪಂದ್ಯದಂತಾಗುತ್ತದೆ. ಆದರೆ, ಆ ಪಂದ್ಯದಿಂದ ಭಾರತಕ್ಕೆ ಹೆಚ್ಚಿನ ವ್ಯತ್ಯಾಸವಾಗುವುದಿಲ್ಲ.
ಪಂದ್ಯದಲ್ಲಿ ಮೊದಲು ಅಫ್ಘಾನಿಸ್ತಾನ ಬ್ಯಾಟಿಂಗ್ ಮಾಡಿತ್ತು. ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 148 ರನ್ ಗಳಿಸಿತ್ತು. ರಹಮಾನುಲ್ಲಾ ಗುರ್ಬಾಜ್ 49 ಎಸೆತಗಳಲ್ಲಿ 60 ರನ್ ಗಳಿಸಿದ್ದರು. ಇನ್ನು ಇಬ್ರಾಹಿಂ ಜದ್ರಾನ್ 48 ಎಸೆತಗಳಲ್ಲಿ 51 ರನ್ ಗಳಿಸಿದ್ದರು. ಪ್ಯಾಟ್ ಕಮ್ಮಿನ್ಸ್ ಹ್ಯಾಟ್ರಿಕ್ ವಿಕೆಟ್ ಪಡೆದರು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಏಕೆಂದರೆ ಆಸ್ಟ್ರೇಲಿಯಾ ತಂಡವು 149 ರನ್‌ಗಳಿಗೆ ಉತ್ತರವಾಗಿ 127 ರನ್ ಗಳಿಸಲಷ್ಟೇ ಶಕ್ತವಾಗಿದ್ದು 21 ರನ್‌ಗಳಿಂದ ಸೋಲು ಕಂಡಿದೆ. ಅಫ್ಘಾನಿಸ್ತಾನ ತಂಡದ ಪರ ಗುಲ್ಬದಿನ್ ನೈಬ್ 4 ಹಾಗೂ ನವೀನ್ ಉಲ್ ಹಕ್ 3 ವಿಕೆಟ್ ಪಡೆದರು.
Advertisement