ಗಯಾನ: ಹಾಲಿ ಐಸಿಸಿ ಟಿ20 ವಿಶ್ವಕಪ್ ನಲ್ಲಿ ಭಾರತ ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಮತ್ತೆ ಮುಂದುವರೆದಿದ್ದು, ಇಂಗ್ಲೆಂಡ್ ವಿರುದ್ಧದ ಸೆಮಿ ಫೈನಲ್ ಪಂದ್ಯದಲ್ಲಿ ಕೊಹ್ಲಿ ಕೇವಲ 9 ರನ್ ಗೆ ಔಟ್ ಆಗಿದ್ದಾರೆ.
ಇಂದು ಗಯಾನದ ಪ್ರಾವಿಡೆಂಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ನಡೆಸಿದ ಭಾರತ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಕೊಹ್ಲಿ 9 ಎಸೆತ ಎದುರಿಸಿ ಕೇವಲ 9 ರನ್ ಗಳಿಸಿ ಔಟಾದರು.
ಆ ಮೂಲಕ ವಿರಾಟ್ ಕೊಹ್ಲಿ(Virat Kohli) ಅವರು ಮೊಟ್ಟ ಮೊದಲ ಬಾರಿಗೆ ಟಿ20 ವಿಶ್ವಕಪ್(T20 World Cup 2024) ಸೆಮಿಫೈನಲ್ ಪಂದ್ಯದಲ್ಲಿ ಸಿಂಗಲ್ ಡಿಜಿಟ್ಗೆ ವಿಕೆಟ್ ಒಪ್ಪಿಸಿದ ಕೆಟ್ಟ ದಾಖಲೆಯೊಂದನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.
2014, 2016, 2022ರಲ್ಲಿ ಭಾರತ ಆಡಿದ ಎಲ್ಲ ಟಿ20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅರ್ಥಶತಕ ಬಾರಿಸಿ ಮಿಂಚಿದ್ದರು. ಆದರೆ, ಈ ಬಾರಿ ಒಂದಂಕಿಗೆ ಸೀಮಿತರಾದರು. ಜತೆಗೆ ಈ ಬಾರಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಕೊಹ್ಲಿ ಬ್ಯಾಟಿಂಗ್ ವೈಫಲ್ಯ ಕಂಡಂತಾಯಿತು. ಇಂಗ್ಲೆಂಡ್ ವಿರುದ್ಧ 9 ಎಸೆತಗಳಲ್ಲಿ 9 ರನ್ ಬಾರಿಸಿ ಟಾಪ್ಲಿ ಎಸೆತಕ್ಕೆ ಕ್ಲೀನ್ ಬೌಲ್ಡ್ ಆದರು.
Kohli in T20 WC semis
72*(44) vs SA, 2014
89*(47) vs WI, 2016
50(40) vs ENG, 2022
9(9) vs ENG, 2024
ಟಿ20 ವಿಶ್ವಕಪ್ ನಲ್ಲಿ ಆರಂಭಿಕ ಆಟಗಾರ ಕಳಪೆ ಬ್ಯಾಟಿಂಗ್ ಸರಾಸರಿ
ಇನ್ನು ಕೊಹ್ವಿ ತಾವಾಡಿದ 5 ಪಂದ್ಯಗಳಲ್ಲಿ ಸರಾಸರಿ 10.71ರಲ್ಲಿ ಬ್ಯಾಟ್ ಬೀಸಿದ್ದು, ಇದು ಟಿ20 ವಿಶ್ವಕಪ್ ನಲ್ಲಿ ಆರಂಭಿಕ ಆಟಗಾರನ 3ನೇ ಕಳಪೆ ಬ್ಯಾಟಿಂಗ್ ಸರಾಸರಿಯಾಗಿದೆ. ಈ ಹಿಂದೆ 2016ರಲ್ಲಿ ಬಾಂಗ್ಲಾದೇಶದ ಸೌಮ್ಯ ಸರ್ಕಾರ್ 9.60ಯಲ್ಲಿ ಬ್ಯಾಟ್ ಬೀಸಿದ್ದರು.
Lowest avg in a T20 WC edition for an opener (min 5 inns)
9.60 - Soumya Sarkar (BAN, 2016)
9.80 - Wesley Madhevere (ZIM, 2022)
10.71 - Virat Kohli (IND, 2024)
10.85 - Tanzid Hasan (BAN, 2024)
11.20 - Tamim Iqbal (BAN, 2007)

Advertisement