WPL 2024: ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್ ಸಿಬಿಗೆ ಸೋಲು!

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ- ಡೆಲ್ಲಿ ಕ್ಯಾಪಿಟಲ್ಸ್ ನ ಡಬ್ಲ್ಯುಪಿಎಲ್ 2024 ಪಂದ್ಯದಲ್ಲಿ ಡೆಲ್ಲಿ ತಂಡ 25 ರನ್ ಗಳ ಗೆಲುವು ಸಾಧಿಸಿದೆ.
ಡಬ್ಲ್ಯುಪಿಎಲ್ 2024 ಪಂದ್ಯ
ಡಬ್ಲ್ಯುಪಿಎಲ್ 2024 ಪಂದ್ಯonline desk
Updated on

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ- ದೆಹಲಿ ಕ್ಯಾಪಿಟಲ್ಸ್ ನ ಡಬ್ಲ್ಯುಪಿಎಲ್ 2024 ಪಂದ್ಯದಲ್ಲಿ ಡೆಲ್ಲಿ ತಂಡ 25 ರನ್ ಗಳ ಗೆಲುವು ಸಾಧಿಸಿದೆ. ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಿದ ಆರ್ ಸಿಬಿ ತಂಡ ಡೆಲ್ಲಿ ತಂಡದ ಆಟಗಾರರನ್ನು ನಿಯಂತ್ರಿಸುವಲ್ಲಿ ಆರಂಭಿಕ ವೈಫಲ್ಯ ಎದುರಿಸಿದರು.

ದೆಹಲಿ ತಂಡದ ಪರ ಮೆಗ್ ಲ್ಯಾನಿಂಗ್ ವೇಗವಾಗಿ ವಿಕೆಟ್ ಒಪ್ಪಿಸಿದರಾದರೂ ಶಫಾಲಿ ವರ್ಮ ಹಾಗೂ ಆಲಿಸ್ ಕ್ಯಾಪ್ಸಿ ಮೊದಲ 10 ಓವರ್ ಗಳಲ್ಲಿ ತಂಡಕ್ಕೆ 82 ರನ್ ಗಳ ಜೊತೆಯಾಟದ ಉತ್ತಮ ಮೊತ್ತ ಸೇರಿಸಿದರು.

ಡಬ್ಲ್ಯುಪಿಎಲ್ 2024 ಪಂದ್ಯ
WPL: ಆರ್ ಸಿಬಿ ಮುಖ್ಯ ಕೋಚ್ ಆಗಿ ಆಸ್ಟ್ರೇಲಿಯಾದ ಲ್ಯೂಕ್ ವಿಲಿಯಮ್ಸ್ ನೇಮಕ

ಶಫಾಲಿ 30 ಎಸೆತಗಳಲ್ಲಿ ಅರ್ಧ ಶತಕ ದಾಖಲಿಸಿದರೆ, ಕ್ಯಾಪ್ಸಿ ದೊಡ್ಡ ಹೊಡೆತಗಳ ಮೂಲಕ ತಂಡಕ್ಕೆ ಹೆಚ್ಚಿನ ರನ್ ಗಳಿಸಲು ನೆರವಾದರು. ಡೆಲ್ಲಿ ತಂಡ ಅಂತಿಮವಾಗಿ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 194 ರನ್ ಗಳನ್ನು ದಾಖಲಿಸಿ ಆರ್ ಸಿಬಿ ಗೆ 195 ರನ್ ಗಳ ಗುರಿ ನೀಡಿತ್ತು.

ಬೃಹತ್ ಮೊತ್ತವನ್ನು ಬೆನ್ನಟ್ಟಿದ ಆರ್ ಸಿಬಿ ಪರ ಸ್ಮೃತಿ ಮಂಧನ ಅತ್ಯುತ್ತಮ ಬ್ಯಾಟಿಂಗ್ ಮಾಡಿ ಡಿಸಿ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದರು ಮಂಧನ ಜೊತೆ ಸೋಫಿ ಫ್ರಾನ್ಸಿಸ್ ಮೊನಿಕ್ ಡಿವೈನ್ ಉತ್ತಮ ಜೊತೆಯಾಟ ನೀಡಿದ್ದರ ಪರಿಣಾಮ ಆರ್ ಸಿಬಿ 77 ರನ್ ಗಳನ್ನು ಗಳಿಸಿತು. ಅರುಂಧತಿ ರೆಡ್ಡಿ ಇವರ ಅದ್ಭುತ ಜೊತೆಯಾಟ ಮುರಿದರು ಬಳಿಕ ಸಬ್ಬಿನೇನಿ ಮೇಘನಾ 31 ಎಸೆತಗಳಲ್ಲಿ 36 ರನ್ ಗಳಿಸುವ ಮೂಲಕ ತಂಡಕ್ಕೆ ನೆರವಾಗಲು ಯತ್ನಿಸಿದರಾದರೂ ಉತ್ತಮ ಜೊತೆಯಾಟದ ವೈಫಲ್ಯದಿಂದ ಆರ್ ಸಿಬಿ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 169 ರನ್ ಗಳನ್ನಷ್ಟೇ ಗಳಿಸಲು ಸಾಧ್ಯವಾಗಿ 25 ರನ್ ಗಳ ಅಂತರದ ಸೋಲೊಪ್ಪಿಕೊಂಡಿತು. ಈ ಮೂಲಕ ಆರ್ ಸಿಬಿ ಈ ಸೀಸನ್ ನ ಮೊದಲ ಸೋಲು ದಾಖಲಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com