ಐಪಿಎಲ್ 2024: 3.60 ಕೋಟಿಗೆ ಬಿಕರಿಯಾಗಿದ್ದ ಆಟಗಾರ ಚಲಾಯಿಸುತ್ತಿದ್ದ ಸೂಪರ್ ಬೈಕ್ ಭೀಕರ ಅಪಘಾತ!

ಐಪಿಎಲ್ 2024ಗಾಗಿ ನಡೆದ ಕಿರು ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ತಂಡವು ಕ್ರಿಕೆಟಿಗ ರಾಬಿನ್ ಮಿನ್ಜ್ ಅವರನ್ನು 3.60 ಕೋಟಿ ರೂಪಾಯಿಗೆ ಖರೀದಿಸಿದ್ದು ಟೂರ್ನಿಗೂ ಮುನ್ನ ಈ ಯುವ ಕ್ರಿಕೆಟಿಗನಿಗೆ ಅಪಘಾತವಾಗಿದೆ.
ರಾಬಿನ್ ಮಿನ್ಜ್
ರಾಬಿನ್ ಮಿನ್ಜ್

ಐಪಿಎಲ್ 2024ಗಾಗಿ ನಡೆದ ಕಿರು ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ತಂಡವು ಕ್ರಿಕೆಟಿಗ ರಾಬಿನ್ ಮಿನ್ಜ್ ಅವರನ್ನು 3.60 ಕೋಟಿ ರೂಪಾಯಿಗೆ ಖರೀದಿಸಿದ್ದು ಟೂರ್ನಿಗೂ ಮುನ್ನ ಈ ಯುವ ಕ್ರಿಕೆಟಿಗನಿಗೆ ಅಪಘಾತವಾಗಿದೆ.

21 ವರ್ಷದ ರಾಬಿನ್ ತನ್ನ ಕವಾಸಕಿ ಸೂಪರ್ ಬೈಕ್ ಅನ್ನು ಓಡಿಸುತ್ತಿದ್ದರು. ರಾಬಿನ್ ಮತ್ತೊಂದು ಬೈಕ್ ಡಿಕ್ಕಿ ಹೊಡೆದ ನಂತರ ನಿಯಂತ್ರಣ ತಪ್ಪಿ ಅಪಘಾತ ಸಂಭವಿಸಿದೆ. ಈ ಕ್ರಿಕೆಟಿಗನ ಬಲ ಮೊಣಕಾಲಿಗೆ ಗಾಯವಾಗಿದ್ದು, ಪ್ರಸ್ತುತ ನಿಗಾದಲ್ಲಿದ್ದಾರೆ. IPL 2024 ರಾಬಿನ್ ಮಿನ್ಜ್ ಅವರ ಚೊಚ್ಚಲ ಋತುವಾಗಿದೆ.

ಅಪಘಾತದ ಕುರಿತು ಮಾತನಾಡಿದ ರಾಬಿನ್ ಮಿಂಜ್ ಅವರ ತಂದೆ ಕ್ಸೇವಿಯರ್ ಫ್ರಾನ್ಸಿಸ್ ಮಿನ್ಜ್, 'ತನ್ನ (ರಾಬಿನ್) ಬೈಕ್ ಮತ್ತೊಂದು ಬೈಕ್‌ಗೆ ಡಿಕ್ಕಿ ಹೊಡೆದಾಗ ನಿಯಂತ್ರಣ ಕಳೆದುಕೊಂಡಿದ್ದಾನೆ. ಸದ್ಯಕ್ಕೆ ಗಂಭೀರವಾದದ್ದೇನೂ ಆಗಿಲ್ಲ. ಆದರೆ ನಿಗಾದಲ್ಲಿದ್ದಾನೆ ಎಂದು ಹೇಳಿದ್ದಾರೆ. ರಾಬಿನ್ ಮಿನ್ಜ್ ಅವರ ತಂದೆ ರಾಂಚಿಯಲ್ಲಿರುವ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಾರೆ. ಇತ್ತೀಚೆಗಷ್ಟೇ ರಾಂಚಿ ಟೆಸ್ಟ್‌ಗಾಗಿ ಟೀಂ ಇಂಡಿಯಾದ ಆಟಗಾರರು ಏರ್‌ಪೋರ್ಟ್‌ನಿಂದ ಹೊರ ಬರುತ್ತಿರುವುದನ್ನು ನೋಡಿದ ಅವರು, ‘ಒಂದು ದಿನ ರಾಬಿನ್ ಕೂಡ ಭಾರತ ಪರ ಆಡುವುದನ್ನು ಕಾಣಬಹುದು ಎಂದು ಹೇಳಿದ್ದರು. ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಾಬಿನ್ ಐಪಿಎಲ್ 2024ರ ಮೊದಲು ಗುಜರಾತ್ ಟೈಟಾನ್ಸ್‌ನ ತರಬೇತಿ ಶಿಬಿರವನ್ನು ಸೇರಬೇಕಾಗಿತ್ತು. ಆದರೆ ಅಪಘಾತದಿಂದಾಗಿ, ಅವರು ತಂಡವನ್ನು ಸೇರುವುದು ಈಗ ವಿಳಂಬವಾಗಬಹುದು.

ರಾಬಿನ್ ಮಿನ್ಜ್
ಐಪಿಎಲ್ 2024: ಮಾರ್ಚ್ 22ಕ್ಕೆ ಚೆನ್ನೈನಲ್ಲಿ CSK vs RCB ನಡುವೆ ಉದ್ಘಾಟನಾ ಪಂದ್ಯ!

ಐಪಿಎಲ್ 2024ರಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭಮನ್ ಗಿಲ್ ರಾಂಚಿ ವಿಮಾನ ನಿಲ್ದಾಣದಲ್ಲಿ ರಾಬಿನ್ ಅವರ ತಂದೆ ಕ್ಸೇವಿಯರ್ ಫ್ರಾನ್ಸಿಸ್ ಮಿನ್ಜ್ ಅವರನ್ನು ಭೇಟಿಯಾದರು. ಶುಬ್ಮಾನ್ ಭೇಟಿಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅಷ್ಟೇ ಅಲ್ಲ, ರಾಬಿನ್ ತಂದೆಯೊಂದಿಗಿನ ಫೋಟೋವನ್ನು ಶುಭ್‌ಮನ್ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದರು. ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ಸೇರಿದ ನಂತರ, ಶುಭಮನ್ ಗಿಲ್ ಅವರನ್ನು ಗುಜರಾತ್ ಟೈಟಾನ್ಸ್ ನಾಯಕನಾಗಿ ನೇಮಿಸಲಾಗಿದೆ.

ಡಿಸೆಂಬರ್‌ನಲ್ಲಿ ಐಪಿಎಲ್ 2024 ಗಾಗಿ ನಡೆದ ಮಿನಿ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ 3.60 ಕೋಟಿ ರೂಪಾಯಿಗಳ ಬೃಹತ್ ಮೊತ್ತವನ್ನು ಪಾವತಿಸಿ ರಾಬಿನ್ ಮಿಂಜ್ ಅವರನ್ನು ತಂಡಕ್ಕೆ ಸೇರಿಸಿತ್ತು. ಇತ್ತೀಚೆಗೆ ರಾಬಿನ್ ಕರ್ನಲ್ CK ನಾಯುಡು ಟ್ರೋಫಿಯಲ್ಲಿ ಜಾರ್ಖಂಡ್ ಪರ ಆಡಿದ್ದರು. ಅಲ್ಲಿ ಅವರು ಕರ್ನಾಟಕದ ವಿರುದ್ಧ 137 ರನ್ ಗಳಿಸಿದರು. ಆದರೆ, ಪಂದ್ಯ ಡ್ರಾ ಆಗಿತ್ತು. ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದ ಮೇಲೆ ಕರ್ನಾಟಕ ಸೆಮಿಫೈನಲ್‌ಗೆ ಅರ್ಹತೆ ಪಡೆಯಿತು. ಗುಜರಾತ್ ಅಲ್ಲದೆ, ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್ಸ್, ಡೆಲ್ಲಿ ಕ್ಯಾಪಿಟಲ್ಸ್, ಕೋಲ್ಕತ್ತಾ ನೈಟ್ ರೈಡರ್ಸ್ ಕೂಡ ಐಪಿಎಲ್ ಹರಾಜಿನಲ್ಲಿ ಬಿಡ್ ಮಾಡಿತ್ತು. ಆದರೆ, ಗುಜರಾತ್ ಫ್ರಾಂಚೈಸಿ ರಾಬಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com