ಆರ್‌ಸಿಬಿಗೆ ಅಭಿಮಾನಿಗಳಿಂದ ಅಭೂತಪೂರ್ವ ಬೆಂಬಲ: ಧನ್ಯವಾದ ಹೇಳಿದ ಸ್ಮೃತಿ ಮಂಧಾನ ಪಡೆ!

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಟಗಾರ್ತಿಯರು ತಮ್ಮ ಅಭಿಮಾನಿಗಳ ಅಪಾರ ಬೆಂಬಲ ಮತ್ತು ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು.
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಆರ್‌ಸಿಬಿ ಪಡೆ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಆರ್‌ಸಿಬಿ ಪಡೆ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಯುಪಿ ವಾರಿಯರ್ಸ್ ವಿರುದ್ಧ ನಡೆದ ಪಂದ್ಯದ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಆಟಗಾರ್ತಿಯರು ತಮ್ಮ ಅಭಿಮಾನಿಗಳ ಅಪಾರ ಬೆಂಬಲ ಮತ್ತು ಪ್ರೀತಿಗೆ ಕೃತಜ್ಞತೆ ಸಲ್ಲಿಸಿದರು.

ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 2024ರ ಪಂದ್ಯದಲ್ಲಿ ಆರ್‌ಸಿಬಿ ತಂಡ ಯುಪಿ ವಾರಿಯರ್ಸ್ ವಿರುದ್ಧ 23 ರನ್‌ಗಳ ಜಯ ಸಾಧಿಸಿತು. ಇದು ಬೆಂಗಳೂರಿನಲ್ಲಿ ನಡೆದ ಕೊನೇ ಪಂದ್ಯವಾಗಿದ್ದು, ಇನ್ನುಳಿದ ಪಂದ್ಯಗಳು ದೆಹಲಿಯಲ್ಲಿ ನಡೆಯಲಿವೆ.

ತಮ್ಮ ತವರಿನಲ್ಲಿ ನಡೆದ ತಂಡದ ಎಲ್ಲಾ ಐದು ಪಂದ್ಯಗಳಿಗೆ ಅಭಿಮಾನಿಗಳು ಭಾರಿ ಸಂಖ್ಯೆಯಲ್ಲಿ ಆಗಮಿಸಿದ್ದರು. ಅಭಿಮಾನಿಗಳಿಗೆ ಈ ಬಾರಿ ಆರ್‌ಸಿಬಿ ಕೂಡ ನಿರಾಸೆ ಉಂಟುಮಾಡಲಿಲ್ಲ. ಏಕೆಂದರೆ, ಕಳೆದ ಆವೃತ್ತಿಗೆ ಹೋಲಿಸಿದರೆ ಈ ಬಾರಿ ತಂಡವು ಉತ್ತಮ ಪ್ರದರ್ಶನ ನೀಡಿದೆ. ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಸ್ಮೃತಿ ಮಂಧಾನ ಅವರು ತಮ್ಮ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶದೊಂದಿಗೆ ತಂಡವನ್ನು ಮುನ್ನಡೆಸಿದರು. ಎರಡು ಅರ್ಧಶತಕ ಸೇರಿದಂತೆ 154.23 ಸ್ಟ್ರೈಕ್ ರೇಟ್‌ನಲ್ಲಿ 219 ರನ್ ಗಳಿಸಿದ್ದಾರೆ. ಸದ್ಯ ಅವರು ಆರೆಂಜ್ ಕ್ಯಾಪ್‌ ಅನ್ನು ಸಹ ಪಡೆದಿದ್ದಾರೆ.

ಪಂದ್ಯದ ಮುಕ್ತಾಯದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಟಗಾರ್ತಿಯರು ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಗೌರವ ವಂದನೆ ಸಲ್ಲಿಸುವ ಮೂಲಕ ವಿಜಯೋತ್ಸವ ಆಚರಿಸಿದರು. ಅದೇ ಸಮಯದಲ್ಲಿ ಓರ್ವ ಆಟಗಾರ್ತಿ ಅಭಿಮಾನಿಗಳತ್ತ ಕೈಜೋಡಿಸಿ ಸಾಗಿದರು. ಡಬ್ಲ್ಯುಪಿಎಲ್‌ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಭಾವನಾತ್ಮಕ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಆರ್‌ಸಿಬಿ ಪಡೆ
WPL 2024: ಸರಣಿ ಸೋಲಿಗಳಿಂದ ಹೊರಬಂದ RCB, ಯುಪಿ ವಿರುದ್ಧ ಭರ್ಜರಿ ಜಯ, ಒಂದು ಸ್ಥಾನ ಮೇಲಕ್ಕೆ!

ಆರ್‌ಸಿಬಿ ಅಭಿಮಾನಿಗಳಿಗೆ ಎಲ್ಲಿಸ್ ಪೆರ್ರಿ ಧನ್ಯವಾದ

ಯುಪಿಡಬ್ಲ್ಯು ವಿರುದ್ಧದ ಪಂದ್ಯದ ನಂತರ ಆರ್‌ಸಿಬಿ ಆಲ್‌ರೌಂಡರ್ ಎಲ್ಲಿಸ್ ಪೆರ್ರಿ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕೆ ಮೂಕವಿಸ್ಮಿತರಾದರು ಹಾಗೂ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು.

'ನಾವು ಇಲ್ಲಿ ಆಡಿದ ಎಲ್ಲಾ ಐದು ಪಂದ್ಯಗಳು ಅದ್ಭುತವಾಗಿವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಬಂದ ಪ್ರೇಕ್ಷಕರಿಗೆ ಕೃತಜ್ಞರಾಗಿರಬೇಕು. ಹೌದು, ಕಳೆದ ಕೆಲವು ತಿಂಗಳುಗಳಲ್ಲಿ ನಾವು ಸಾಕಷ್ಟು ಕ್ರಿಕೆಟ್ ಆಡಿದ್ದೇವೆ. ಇಲ್ಲಿನ ಅಭಿಮಾನಿಗಳ ಬೆಂಬಲ ಸಿಕ್ಕಿದ್ದಕ್ಕೆ ನನಗೆ ಖುಷಿಯಾಗಿದೆ. ಬಹುಶಃ ಇಂದು ನನಗೆ ಸಿಕ್ಕಿದ ಅವಕಾಶ ನನ್ನನ್ನು ನಾನು ಸಾಬೀತುಪಡಿಸಿಕೊಳ್ಳಲು ಸಾಧ್ಯವಾಯಿತು' ಎಂದರು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೆರೆದಿದ್ದ ಅಭಿಮಾನಿಗಳಿಗೆ ಧನ್ಯವಾದ ಹೇಳಿದ ಆರ್‌ಸಿಬಿ ಪಡೆ
RCB vs UPW: ಆರ್‌ಸಿಬಿ ಆಟಗಾರ್ತಿ ಎಲ್ಲಿಸ್ ಪೆರ್ರಿ ಸಿಕ್ಸರ್ ಮೋಡಿಗೆ ಕಾರಿನ ಕಿಟಕಿ ಗಾಜು ಪುಡಿ ಪುಡಿ!

'ಬೌಂಡರಿ ಗೆರೆಯಾಚೆಗೆ ಕೆಲವು ಚೆಂಡುಗಳನ್ನು ಕಳುಹಿಸುವುದು ಸಂತೋಷವಾಗಿದೆ. ಬ್ಯಾಟಿಂಗ್‌ಗೆ ಇದು ಉತ್ತಮ ಪಿಚ್ ಆಗಿದೆ. ಫೀಲ್ಡಿಂಗ್‌ನಲ್ಲಿ ಇನ್ನಷ್ಟು ಸುಧಾರಣೆ ತರಲು ಪ್ರಯತ್ನಿಸುತ್ತೇವೆ. ಇಲ್ಲಿನ ಅಭಿಮಾನಿಗಳ ಮುಂದೆ ಪ್ರದರ್ಶನ ನೀಡುವುದು ಅದ್ಭುತ ಅನುಭವವಾಗಿದೆ' ಎಂದು ಪೆರ್ರಿ ಹೇಳಿದರು.

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬುಧವಾರ (ಮಾರ್ಚ್ 6) ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಗುಜರಾತ್ ಜೈಂಟ್ಸ್ ಅನ್ನು ಎದುರಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com