WPL 2024: ಶ್ರೇಯಾಂಕಾ, ಪೆರ್ರಿಗೆ ಡಬಲ್ ಖುಷಿ; ಕಪ್ ಅಷ್ಟೇ ಅಲ್ಲ ಆರೆಂಜ್, ಪರ್ಪಲ್ ಕ್ಯಾಪ್ ಕೂಡ ನಮ್ದೇ...

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಮಹಿಳೆಯರ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.
ಪ್ರಶಸ್ತಿ ಸ್ವೀಕರಿಸಿದ ಎಲ್ಲಿಸ್ ಪೆರ್ರಿ ಮತ್ತು ಶ್ರೇಯಾಂಕಾ ಪಾಟೀಲ್
ಪ್ರಶಸ್ತಿ ಸ್ವೀಕರಿಸಿದ ಎಲ್ಲಿಸ್ ಪೆರ್ರಿ ಮತ್ತು ಶ್ರೇಯಾಂಕಾ ಪಾಟೀಲ್
Updated on

ನವದೆಹಲಿ: ಅದೆಷ್ಟೋ ವರ್ಷಗಳಿಂದ ಈಸಲ ಕಪ್ ನಮ್ದೆ ಎನ್ನುತ್ತಾ ಕಾದು ಕುಳಿತಿದ್ದ ಅಭಿಮಾನಿಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ ಈ ಬಾರಿ ಕಪ್ ಗೆದ್ದು ಕೊಡುವ ಮೂಲಕ ಕಪ್ ಬರವನ್ನು ನೀಗಿಸಿದೆ. ಇದರೊಂದಿಗೆ ಹಲವು ವಿಚಾರಗಳಲ್ಲಿ ಆರ್‌ಸಿಬಿ ಆಟಗಾರ್ತಿಯರು ಪ್ರಶಸ್ತಿಯನ್ನು ಪಡೆದಿದ್ದಾರೆ.

ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಮಹಿಳೆಯರ ಪ್ರೀಮಿಯರ್ ಲೀಗ್‌ನ ಎರಡನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 8 ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು.

ಡಬ್ಲ್ಯುಪಿಎಲ್‌ನ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಅದೇ ರೀತಿ ಅತಿಹೆಚ್ಚು ವಿಕೆಟ್ ಪಡೆದ ಆಟಗಾರರಿಗೆ ಪರ್ಪಲ್ ಕ್ಯಾಪ್ ಅನ್ನು ನೀಡಲಾಗುತ್ತದೆ.

ಪ್ರಶಸ್ತಿ ಸ್ವೀಕರಿಸಿದ ಎಲ್ಲಿಸ್ ಪೆರ್ರಿ ಮತ್ತು ಶ್ರೇಯಾಂಕಾ ಪಾಟೀಲ್
‘ಈ ಸಲ ಕಪ್ ನಮ್ದೆ’ ಎನ್ನುತ್ತಿದ್ದ RCB ಅಭಿಮಾನಿಗಳಿಗಾಗಿ ಈ ಕಪ್: ಕನ್ನಡತಿ ಶ್ರೇಯಾಂಕಾ ಪಾಟೀಲ್

ಈ ಬಾರಿಯ ಡಬ್ಲ್ಯುಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿಯ ಎಲ್ಲಿಸ್ ಪೆರ್ರಿ ಆರೆಂಜ್ ಕ್ಯಾಪ್ ಗೆದ್ದರು ಮತ್ತು 5 ಲಕ್ಷ ರೂ. ಗಳನ್ನು ಬಹುಮಾನವಾಗಿ ಪಡೆದರು.

ಇದರೊಂದಿಗೆ ಕನ್ನಡತಿ ಶ್ರೇಯಾಂಕಾ ಪಾಟೀಲ್ ಅತಿಹೆಚ್ಚು ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ಅನ್ನು ಗೆದ್ದರು ಮತ್ತು 5 ಲಕ್ಷ ರೂ. ಮೊತ್ತವನ್ನು ಗೆದ್ದರು.

ಪ್ರಶಸ್ತಿ ಸ್ವೀಕರಿಸಿದ ಎಲ್ಲಿಸ್ ಪೆರ್ರಿ ಮತ್ತು ಶ್ರೇಯಾಂಕಾ ಪಾಟೀಲ್
ಪ್ರಶಸ್ತಿ ಬರವನ್ನು ಕೊನೆಗೂ ಕೊನೆಗೊಳಿಸಿದ RCB ಮಹಿಳಾ ತಂಡ! ಆಕರ್ಷಕ ಫೋಟೋಗಳು

WPL 2024ರಲ್ಲಿ ಆರೆಂಜ್ ಕ್ಯಾಪ್: ಅತಿಹೆಚ್ಚು ರನ್ ಗಳಿಸಿದವರ ಪಟ್ಟಿ

ಎಲ್ಲಿಸ್ ಪೆರ್ರಿ (ಆರ್‌ಸಿಬಿ): ಆರೆಂಜ್ ಕ್ಯಾಪ್ ವಿಜೇತೆ; 347 ರನ್ (9 ಪಂದ್ಯಗಳು)

ಮೆಗ್ ಲ್ಯಾನಿಂಗ್ (ಡಿಸಿ): 331 ರನ್ (9 ಪಂದ್ಯಗಳು)

ಶಫಾಲಿ ವರ್ಮಾ (ಡಿಸಿ): 309 ರನ್ (9 ಪಂದ್ಯಗಳು)

ಸ್ಮೃತಿ ಮಂಧಾನ (ಆರ್‌ಸಿಬಿ): 300 ರನ್‌ಗಳು (10 ಪಂದ್ಯಗಳು)

ದೀಪ್ತಿ ಶರ್ಮಾ (ಯುಪಿಡಬ್ಲ್ಯು): 295 ರನ್ (8 ಪಂದ್ಯಗಳು)

WPL 2024ರಲ್ಲಿ ಪರ್ಪಲ್ ಕ್ಯಾಪ್: ಅತಿಹೆಚ್ಚು ವಿಕೆಟ್ ಪಡೆದವರ ಪಟ್ಟಿ

ಶ್ರೇಯಾಂಕಾ ಪಾಟೀಲ್ (ಆರ್‌ಸಿಬಿ): ಪರ್ಪಲ್ ಕ್ಯಾಪ್ ವಿಜೇತೆ; 13 ವಿಕೆಟ್‌ಗಳು (8 ಪಂದ್ಯಗಳು)

ಆಶಾ ಶೋಬನಾ (ಆರ್‌ಸಿಬಿ): 12 ವಿಕೆಟ್‌ಗಳು (10 ಪಂದ್ಯಗಳು)

ಸೋಫಿ ಮೊಲಿನ್ಯೂ (ಆರ್‌ಸಿಬಿ): 12 ವಿಕೆಟ್ (10 ಪಂದ್ಯಗಳು)

ಮರಿಜಾನ್ ಕಾಪ್ (ಡಿಸಿ): 11 ವಿಕೆಟ್‌ಗಳು (7 ಪಂದ್ಯಗಳು)

ಸೋಫಿ ಎಕಲ್ಸ್ಟನ್ (ಯುಪಿಡಬ್ಲ್ಯು): 11 ವಿಕೆಟ್ (8 ಪಂದ್ಯಗಳು)

Follow KannadaPrabha channel on WhatsApp

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com