‘ಈ ಸಲ ಕಪ್ ನಮ್ದೆ’ ಎನ್ನುತ್ತಿದ್ದ RCB ಅಭಿಮಾನಿಗಳಿಗಾಗಿ ಈ ಕಪ್: ಕನ್ನಡತಿ ಶ್ರೇಯಾಂಕಾ ಪಾಟೀಲ್

ಕಳೆದ ಕೆಲವು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ 'ಈ ಸಲ ಕಪ್ ನಮ್ದೇ' ಎಂಬ ಘೋಷಣೆಯು ಸಾಮಾಜಿಕ ಜಾಲತಾಣಗಳ ಸೇನೆಯ ನೆಚ್ಚಿನ ಟ್ರೋಲ್ ಆಗಿ ಉಳಿದಿತ್ತು. ಆದರೆ, ಈ ಭಾನುವಾರ ಇದಕ್ಕೆಲ್ಲ ಫುಲ್ ಸ್ಟಾಪ್ ಹಾಕಿದೆ.
ಶ್ರೇಯಾಂಕಾ ಪಾಟೀಲ್
ಶ್ರೇಯಾಂಕಾ ಪಾಟೀಲ್

ನವದೆಹಲಿ: ಕಳೆದ ಕೆಲವು ವರ್ಷಗಳಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ 'ಈ ಸಲ ಕಪ್ ನಮ್ದೇ' ಎಂಬ ಘೋಷಣೆಯು ಸಾಮಾಜಿಕ ಜಾಲತಾಣಗಳ ಸೇನೆಯ ನೆಚ್ಚಿನ ಟ್ರೋಲ್ ಆಗಿ ಉಳಿದಿತ್ತು. ಆದರೆ, ಈ ಭಾನುವಾರ ಇದಕ್ಕೆಲ್ಲ ಫುಲ್ ಸ್ಟಾಪ್ ಹಾಕಿದೆ.

ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಮಹಿಳಾ ಪ್ರೀಮಿಯರ್ ಲೀಗ್‌ನ ಫೈನಲ್‌ ಪಂದ್ಯದಲ್ಲಿ ಎಂಟು ವಿಕೆಟ್‌ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೋಲಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೊನೆಗೂ ಟ್ರೋಫಿಯನ್ನು ಮನೆಗೆ ತರುವಲ್ಲಿ ಯಶಸ್ವಿಯಾಗಿದೆ.

ಕಪ್ ಗೆದ್ದ ಆರ್‌ಸಿಬಿ ಆಟಗಾರ್ತಿಯರ ಸಂಭ್ರಮಾಚರಣೆ
ಕಪ್ ಗೆದ್ದ ಆರ್‌ಸಿಬಿ ಆಟಗಾರ್ತಿಯರ ಸಂಭ್ರಮಾಚರಣೆ

ಡಬ್ಲ್ಯುಪಿಎಲ್‌ನಲ್ಲಿ 13 ವಿಕೆಟ್ ಕಬಳಿಸುವ ಮೂಲಕ ಈ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಆರ್‌ಸಿಬಿ ಆಫ್ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ್, ಈ ಸಲ ಕಪ್ ನಮ್ದೆ ಎನ್ನುತ್ತಿದ್ದ ಅಭಿಮಾನಿಗಳಿಗಾಗಿ ಈ ಸಲ ಕಪ್ ನಮ್ಮದಾಗಿದೆ ಎಂದಿದ್ದಾರೆ.

ಶ್ರೇಯಾಂಕಾ ಪಾಟೀಲ್
RCB ಕಟ್ಟಾ ಅಭಿಮಾನಿಗಳೇ 'ಈ ಸಲ ಕಪ್ ನಮ್ದೆ ಅಲ್ಲ, ಈ ಸಲ ಕಪ್ ನಮ್ದು': RCB ನಾಯಕಿ ಸ್ಮೃತಿ ಮಂದಾನ

ಆರ್‌ಸಿಬಿಯ ಲಾಯಲ್ ಅಭಿಮಾನಿಗಳು ‘ಈ ಸಲ ಕಪ್ ನಮ್ದೆ’ ಎಂದು ಹೇಳುತ್ತಲೇ ಇದ್ದರು. ಅದರಂತೆ, ಈ ಬಾರಿ ಕಪ್ ನಮಗೆ ಸಿಕ್ಕಿದೆ ಎಂದ ಅವರು, ಡ್ರೆಸ್ಸಿಂಗ್ ರೂಮ್ ಅನ್ನು ಕೂಲ್ ಆಗಿ ಇರಿಸಿದ್ದಕ್ಕಾಗಿ ಆರ್‌ಸಿಬಿಯ ಮುಖ್ಯ ಕೋಚ್ ಲ್ಯೂಕ್ ವಿಲಿಯಮ್ಸ್ ಅವರನ್ನು ಶ್ಲಾಘಿಸಿದರು.

'ನಾವು ದಿನದಿಂದ ದಿನಕ್ಕೆ ಕಠಿಣ ಪರಿಶ್ರಮ ಪಟ್ಟಿದ್ದೇವೆ. ನಾವೆಲ್ಲರೂ ಒಂದೇ ಕುಟುಂಬದವರು ಎಂದೇ ಭಾವಿಸಿದ್ದೇವೆ. ನಮಗೆ ಲ್ಯೂಕ್ ಹೆಚ್ಚು ತಿಳಿದಿರಲಿಲ್ಲ. ನಾವು ಮುಂಬೈ ವಿರುದ್ಧ ಗೆದ್ದ ಕೊನೆಯ ಪಂದ್ಯದಲ್ಲಿ ಅವರು ಕಣ್ಣೀರು ಹಾಕಿದರು. ಇದನ್ನು ಮುಂದುವರಿಸಲು ನಾವು ಎದುರು ನೋಡುತ್ತಿದ್ದೇವೆ' ಎಂದು ಅವರು ಹೇಳಿದರು.

ಶ್ರೇಯಾಂಕಾ ಪಾಟೀಲ್
WPL 2024: RCB ಚಾಂಪಿಯನ್, ಚೊಚ್ಚಲ ಪ್ರಶಸ್ತಿ ಮುಡಿಗೇರಿಸಿಕೊಂಡ ವನಿತೆಯರು!

ಈ ಡಬ್ಲ್ಯುಪಿಎಲ್‌ನಲ್ಲಿ 347 ರನ್‌ ಗಳಿಸುವುದರೊಂದಿಗೆ ಈ ಆವೃತ್ತಿಯಲ್ಲಿ ಅತ್ಯಧಿಕ ರನ್ ಕಲೆಹಾಕಿರುವ ಎಲಿಸ್ಸೆ ಪೆರ್ರಿ ಅಭಿಮಾನಿಗಳ ಪಾಲಿಗೆ ಮ್ಯಾಚ್ ವಿನ್ನಿಂಗ್ ಅಂಶವಾಗಿದ್ದಾರೆ. ಈ ಆವೃತ್ತಿಯ ಎಲ್ಲಾ ಪಂದ್ಯಗಳ ವೇಳೆ ತಂಡಕ್ಕೆ ನೀಡಿದ ಬೆಂಬಲಕ್ಕಾಗಿ ಕೃತಜ್ಞತೆ ಸಲ್ಲಿಸಿದ್ದಾರೆ ಆಸ್ಟ್ರೇಲಿಯಾದ ಆಲ್‌ರೌಂಡರ್.

'ನಿಜವಾಗಿ ಹೇಳಬೇಕೆಂದರೆ, ಇದು ನಮಗೆ ಮತ್ತೊಂದು ಹಂತವಾಗಿದೆ. ಎಲ್ಲಾ ತಂಡಗಳಿಗೆ ಸಿಗುತ್ತಿರುವ ಬೆಂಬಲವು ಅಸಾಧಾರಣವಾಗಿದೆ ಮತ್ತು ಇದು ನಂಬಲಸಾಧ್ಯವಾಗಿದೆ.

ಶ್ರೇಯಾಂಕಾ ಪಾಟೀಲ್
ಹೆಣ್ಮಕ್ಳೇ ಸ್ಟ್ರಾಂಗು ಗುರು: ಪುನೀತ್ ಹುಟ್ಟುಹಬ್ಬದ ದಿನವೇ IPL ಟ್ರೋಫಿ ಬರ ನೀಗಿಸಿದ RCB ಸಿಂಹಿಣಿಯರು! ಜೈ ಜೈ ಎಂದ ಅಭಿಮಾನಿಗಳು

ಸೋಫಿ ಮೊಲಿನ್ಯೂ ಅವರು ಪಂದ್ಯದ ಗತಿಯನ್ನೇ ಬದಲಿಸಿದರು. ಉಳಿದ ಸ್ಪಿನ್ನರ್‌ಗಳು ಅವರ ಹಾದಿಯಲ್ಲೇ ಸಾಗಿದರು. ಶ್ರೇಯಾಂಕಾ ಯುವ ಆಟಗಾರ್ತಿಯಾಗಿದ್ದು, ಅತ್ಯುತ್ತಮ ಪ್ರದರ್ಶನದಿಂದಾಗಿ ಅವರು ತಂಡದ ಗೆಲುವಿಗೆ ಸಹಕಾರಿಯಾದರು. ಇದು ಆಕೆಯಿಂದ ಬಂದ ವಿಶೇಷ ಪ್ರದರ್ಶನವಾಗಿದೆ' ಎಂದು ಪೆರ್ರಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com