ನನ್ನನ್ನು 'ಕಿಂಗ್' ಎಂದು ಕರೆಯಬೇಡಿ, ವಿರಾಟ್ ಎಂದರೆ ಸಾಕು: RCB ಅಭಿಮಾನಿಗಳಿಗೆ ಕೊಹ್ಲಿ ಮನವಿ

ಬಹುನಿರೀಕ್ಷಿತ ಐಪಿಎಲ್ 2024ಕ್ಕೆ ಮುನ್ನ ಮಂಗಳವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಭಾಗವಹಿಸಿದ್ದರು. ಅಭಿಮಾನಿಗಳಿಂದ ಸದಾ ಕಿಂಗ್ ಎಂದೇ ಕರೆಸಿಕೊಳ್ಳುವ ಕೊಹ್ಲಿ, ಹಾಗೆ ಕರೆಯದಂತೆ ಮನವಿ ಮಾಡಿದ್ದಾರೆ.
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ

ಬಹುನಿರೀಕ್ಷಿತ ಐಪಿಎಲ್ 2024ಕ್ಕೆ ಮುನ್ನ ಮಂಗಳವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆರ್‌ಸಿಬಿ ಅನ್‌ಬಾಕ್ಸ್ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಭಾಗವಹಿಸಿದ್ದರು. ಅಭಿಮಾನಿಗಳಿಂದ ಸದಾ ಕಿಂಗ್ ಎಂದೇ ಕರೆಸಿಕೊಳ್ಳುವ ಕೊಹ್ಲಿ, ಹಾಗೆ ಕರೆಯದಂತೆ ಮನವಿ ಮಾಡಿದ್ದಾರೆ.

ವಿರಾಟ್ ಕೊಹ್ಲಿ 2008 ರಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಭಾಗವಾಗಿದ್ದಾರೆ. ಅಂದಿನಿಂದ ಇಂದಿನವರೆಗೂ ಅಭಿಮಾನಿಗಳು ಅವರನ್ನು 'ಕಿಂಗ್ ಕೊಹ್ಲಿ' ಎಂದೇ ಕರೆಯುತ್ತಾರೆ. ಅನ್‌ಬಾಕ್ಸ್ ಕಾರ್ಯಕ್ರಮದಲ್ಲೂ ಅಭಿಮಾನಿಗಳು ಇದನ್ನೇ ಮುಂದುವರಿಸಿದ್ದರು. ಕಾರ್ಯಕ್ರಮದ ನಿರೂಪಕ ಡ್ಯಾನಿಶ್ ಸೇಟ್ ಕೂಡ ಕಿಂಗ್ ಕೊಹ್ಲಿ ಎಂದೇ ಕರೆದರು. ಇದಕ್ಕೆ ಪ್ರತಿಕ್ರಿಯಿಸಿದ ವಿರಾಟ್, ದಯವಿಟ್ಟು ಹಾಗೆ ಕರೆಯಬೇಡಿ ಎಂದು ಮನವಿ ಮಾಡಿದರು.

ಏಕೆಂದರೆ ಕಿಂಗ್ ಎಂಬುದನ್ನು ಕೇಳಿದಾಗಲೆಲ್ಲ ಮುಜುಗರ ಉಂಟಾಗುತ್ತದೆ. ಇಂದು ರಾತ್ರಿ ನಾವು ಚೆನ್ನೈಗೆ ಬೇಗನೆ ಹೋಗಬೇಕು. ನಮಗೆ ಚಾರ್ಟರ್ ಫ್ಲೈಟ್ ಇದೆ, ಆದ್ದರಿಂದ ನಮಗೆ ಹೆಚ್ಚು ಸಮಯವಿಲ್ಲ. ಮೊದಲು, ನೀವು ನನ್ನನ್ನು ಆ ಪದ (ಕಿಂಗ್) ಎಂದು ಕರೆಯುವುದನ್ನು ನಿಲ್ಲಿಸಬೇಕು. ದಯವಿಟ್ಟು ನನ್ನನ್ನು ವಿರಾಟ್ ಎಂದು ಕರೆಯಿರಿ ಎಂದು ಮನವಿ ಮಾಡಿದ್ದಾರೆ.

ನಾನು ಫಾಫ್ ಡು ಪ್ಲೆಸಿಸ್‌ ಜೊತೆಗೆ ಕೂಡ ಇದೇ ವಿಚಾರದ ಬಗ್ಗೆ ಹೇಳುತ್ತಿದ್ದೆ, ನೀವು ನನ್ನನ್ನು ಆ ಪದವನ್ನು ಬಳಸಿ ಕರೆಯುವಾಗ ಪ್ರತಿ ವರ್ಷವೂ ನನಗೆ ಮುಜುಗರವಾಗುತ್ತದೆ. ಹಾಗಾಗಿ ಇನ್ಮುಂದೆ ನನ್ನನ್ನು ವಿರಾಟ್ ಎಂದು ಕರೆಯಿರಿ, ದಯವಿಟ್ಟು ಇನ್ನು ಮುಂದೆ ಆ ಪದವನ್ನು ಬಳಸಬೇಡಿ, ಇದು ನನಗೆ ತುಂಬಾ ಮುಜುಗರದ ಸಂಗತಿ ಎಂದು ಕೊಹ್ಲಿ ಹೇಳಿದ್ದಾರೆ.

ಮಹಿಳಾ ಪ್ರೀಮಿಯರ್ ಲೀಗ್‌ನಲ್ಲಿ ಆರ್‌ಸಿಬಿ ತಂಡವು ಕಪ್ ಗೆದ್ದ ರೀತಿಯಲ್ಲಿಯೇ ಮಾರ್ಚ್ 22 ರಿಂದ ಪ್ರಾರಂಭವಾಗುವ ಐಪಿಎಲ್ 2024ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟ್ರೋಫಿಯನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ
IPL 2024: ಹೊಸ ಹೆಸರು, ಹೊಸ ಜೆರ್ಸಿ, ಹೊಸ ಭರವಸೆಯೊಂದಿಗೆ ಅಖಾಡಕ್ಕೆ RCB ಎಂಟ್ರಿ!

'ಇದು ಸಂಪೂರ್ಣವಾಗಿ ಅದ್ಭುತವಾಗಿತ್ತು. ಅವರು ಡಬ್ಲ್ಯುಪಿಎಲ್ ಟ್ರೋಫಿಯನ್ನು ಗೆದ್ದಾಗ ನಾವು ನೋಡುತ್ತಿದ್ದೆವು. ಇದು ತುಂಬಾ ಖುಷಿಯ ವಿಚಾರ. ನಾವು ಕೂಡ ಟ್ರೋಫಿ ಗೆಲ್ಲುವುದರೊಂದಿಗೆ ಈ ಖುಷಿಯನ್ನು ದ್ವಿಗುಣಗೊಳಿಸಬಹುದು ಮತ್ತು ಅದು ನಿಜವಾಗಿಯೂ ವಿಶೇಷವಾದದ್ದು' ಎಂದು ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ನಲ್ಲಿ ಕೊಹ್ಲಿ ಹೇಳಿದರು.

ಐಪಿಎಲ್ ಟ್ರೋಫಿಯನ್ನು ಗೆದ್ದಾಗ ಆ ಅನುಭವ ಹೇಗಿರುತ್ತದೆ ಎಂಬುದನ್ನು ತಿಳಿಯುವುದು ನನ್ನ ಕನಸು. ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದ ತಂಡದ ಭಾಗವಾಗಲು ನಾನು ಇಲ್ಲಿದ್ದೇನೆ. ನನ್ನ ಸಾಮರ್ಥ್ಯ, ನನ್ನ ಅನುಭವದೊಂದಿಗೆ ಈ ಬಾರಿ ಅತ್ಯುತ್ತಮ ಪ್ರಯತ್ನ ಮಾಡುತ್ತೇನೆ. ಅಭಿಮಾನಿಗಳು ಮತ್ತು ಫ್ರಾಂಚೈಸಿಗಾಗಿ ಕಪ್ ಗೆಲ್ಲಲು ಶ್ರಮಿಸುತ್ತೇನೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com