IPL 2024: ನಾಳೆಯಿಂದ ಐಪಿಎಲ್ ಹಬ್ಬ ಶುರು; ಯಾವ ಪಂದ್ಯಗಳು ಎಲ್ಲಿ ನಡೆಯಲಿವೆ, ವೇಳಾಪಟ್ಟಿ ಇಲ್ಲಿದೆ...

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024 ರ ಆರಂಭಿಕ ಪಂದ್ಯ ಮಾರ್ಚ್ 22ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೆಣಸಲಿದೆ. ಯಾವ ಪಂದ್ಯಗಳು ಎಲ್ಲಿ ನಡೆಯಲಿವೆ ಮತ್ತು ವೇಳಾಪಟ್ಟಿ ಇಲ್ಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್
ಇಂಡಿಯನ್ ಪ್ರೀಮಿಯರ್ ಲೀಗ್

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024 ರ ಆರಂಭಿಕ ಪಂದ್ಯ ಮಾರ್ಚ್ 22ರಂದು ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೆಣಸಲಿದೆ. ಈ ಆವೃತ್ತಿಯ ಮೊದಲ ಪಂದ್ಯದಲ್ಲಿ ಎಂಎಸ್ ಧೋನಿ vs ವಿರಾಟ್ ಕೊಹ್ಲಿ ಮುಖಾಮುಖಿಯಾಗಲಿದ್ದಾರೆ. ಉಭಯ ತಂಡಗಳು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದು, ಪಂದ್ಯದ ಆರಂಭಕ್ಕೆ ದಿನಗಣನೆ ಆರಂಭವಾಗಿದೆ.

ಅಪಘಾತಕ್ಕೀಡಾಗಿ ಕ್ರಿಕೆಟ್‌ನಿಂದ ದೂರ ಉಳಿದಿದ್ದ ರಿಷಬ್ ಪಂತ್ ಮೊದಲ ಬಾರಿಗೆ ಟಿ20 ಲೀಗ್‌ನ 17ನೇ ಆವೃತ್ತಿ ಮೂಲಕ ವೃತ್ತಿಪರ ಕ್ರಿಕೆಟ್‌ಗೆ ಮರಳಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಎಂಎಸ್ ಧೋನಿ ಅವರು ಐಪಿಎಲ್ 2023ರ ಆವೃತ್ತಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಮತ್ತೆ ಐಪಿಎಲ್ 2024ರ ಆವೃತ್ತಿಯಲ್ಲಿ ಆಡುತ್ತಿದ್ದಾರೆ. ವೈಯಕ್ತಿಕ ಕಾರಣಗಳಿಂದ ಕಳೆದ ಎರಡು ತಿಂಗಳಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದ ವಿರಾಟ್ ಕೊಹ್ಲಿ, ಆರ್‌ಸಿಬಿ ಮೂಲಕ ಅಂಗಳಕ್ಕೆ ಇಳಿಯುತ್ತಿದ್ದಾರೆ. ಗುಜರಾತ್ ಟೈಟಾನ್ಸ್ ನಾಯಕನಾಗಿದ್ದ ಹಾರ್ದಿಕ್ ಪಾಂಡ್ಯ ಈ ಬಾರಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ವೇಳಾಪಟ್ಟಿ

1. ಮಾರ್ಚ್ 22ರಂದು 8 ಗಂಟೆಗೆ: ಸಿಎಸ್‌ಕೆ vs ಆರ್‌ಸಿಬಿ, ಚೆನ್ನೈ

2. ಮಾರ್ಚ್ 23 ರಂದು ಮಧ್ಯಾಹ್ನ 3.30 ಗಂಟೆಗೆ: ಪಂಜಾಬ್ ಕಿಂಗ್ಸ್ vs ಡೆಲ್ಲಿ ಕ್ಯಾಪಿಟಲ್ಸ್, ಮೊಹಾಲಿ.

3. ಮಾರ್ಚ್ 23ರಂದು ಸಂಜೆ 7.30 ಗಂಟೆಗೆ: ಕೆಕೆಆರ್ vs ಎಸ್‌ಆರ್‌ಎಚ್, ಕೋಲ್ಕತ್ತಾ.

4. ಮಾರ್ಚ್ 24ರಂದು ಸಂಜೆ 7.30 ಗಂಟೆಗೆ: ಆರ್‌ಆರ್ vs ಎಲ್ಎಸ್‌ಜಿ, ಜೈಪುರ

5. ಮಾರ್ಚ್ 24ರಂದು ಸಂಜೆ 7.30 ಗಂಟೆಗೆ: ಜಿಟಿ vs ಎಂಐ, ಅಹಮದಾಬಾದ್

6. ಮಾರ್ಚ್ 25ರಂದು ಸಂಜೆ 7.30 ಗಂಟೆಗೆ: ಆರ್‌ಸಿಬಿ vs ಪಂಜಾಬ್ ಕಿಂಗ್ಸ್, ಬೆಂಗಳೂರು

7. ಮಾರ್ಚ್ 26ರಂದು ಸಂಜೆ 7.30 ಗಂಟೆಗೆ: ಸಿಎಸ್‌ಕೆ vs ಜಿಟಿ, ಚೆನ್ನೈ

8. ಮಾರ್ಚ್ 27ರಂದು ಸಂಜೆ 7.30 ಗಂಟೆಗೆ: ಎಸ್ಆರ್‌ಎಚ್ vs ಎಂಐ, ಹೈದರಾಬಾದ್

9. ಮಾರ್ಚ್ 28ರಂದು ಸಂಜೆ 7.30ಕ್ಕೆ: ಆರ್‌ಆರ್ vs ಡಿಸಿ, ಜೈಪುರ

10. ಮಾರ್ಚ್ 29ರಂದು ಸಂಜೆ 7.30ಕ್ಕೆ: ಆರ್‌ಸಿಬಿ vs ಕೆಕೆಆರ್, ಬೆಂಗಳೂರು

ಇಂಡಿಯನ್ ಪ್ರೀಮಿಯರ್ ಲೀಗ್
ನನ್ನನ್ನು 'ಕಿಂಗ್' ಎಂದು ಕರೆಯಬೇಡಿ, ವಿರಾಟ್ ಎಂದರೆ ಸಾಕು: RCB ಅಭಿಮಾನಿಗಳಿಗೆ ಕೊಹ್ಲಿ ಮನವಿ

11. ಮಾರ್ಚ್ 30ರಂದು ಸಂಜೆ 7.30ಕ್ಕೆ: ಎಲ್ಎಸ್‌ಜಿ vs ಪಿಬಿಕೆಎಸ್, ಲಖನೌ

12. ಮಾರ್ಚ್ 31ರಂದು ಸಂಜೆ 3.30ಕ್ಕೆ: ಜಿಟಿ vs ಎಸ್ಆರ್‌ಎಚ್, ಅಹಮದಾಬಾದ್

13. ಮಾರ್ಚ್ 31ರಂದು ಸಂಜೆ 7.30ಕ್ಕೆ: ಡಿಸಿ vs ಸಿಎಸ್‌ಕೆ, ವೈಜಾಗ್

14. ಏಪ್ರಿಲ್ 1ರಂದು ಸಂಜೆ 7.30ಕ್ಕೆ: ಎಂಐ vs ಆರ್‌ಆರ್, ಮುಂಬೈ

15. ಏಪ್ರಿಲ್ 2ರಂದು ಸಂಜೆ 7.30ಕ್ಕೆ: ಆರ್‌ಸಿಬಿ vs ಎಲ್ಎಸ್‌ಜಿ, ಬೆಂಗಳೂರು

16. ಏಪ್ರಿಲ್ 3ರಂದು ಸಂಜೆ 7.30ಕ್ಕೆ: ಡಿಸಿ vs ಕೆಕೆಆರ್, ವೈಜಾಗ್

17. ಏಪ್ರಿಲ್ 4ರಂದು ಸಂಜೆ 7.30ಕ್ಕೆ: ಜಿಟಿ vs ಪಿಬಿಕೆಎಸ್, ಅಹಮದಾಬಾದ್

18. ಏಪ್ರಿಲ್ 5ರಂದು ಸಂಜೆ 7.30ಕ್ಕೆ: ಎಸ್ಆರ್‌ಎಚ್ vs ಸಿಎಸ್‌ಕೆ, ಹೈದರಾಬಾದ್

19. ಏಪ್ರಿಲ್ 6ರಂದು ಸಂಜೆ 7.30ಕ್ಕೆ: ಆರ್‌ಆರ್ vs ಆರ್‌ಸಿಬಿ, ಜೈಪುರ

20. ಏಪ್ರಿಲ್ 7ರಂದು ಸಂಜೆ 7.30ಕ್ಕೆ: ಎಂಐ vs ಡಿಸಿ, ಮುಂಬೈ

21. ಏಪ್ರಿಲ್ 7ರಂದು ಸಂಜೆ 7.30ಕ್ಕೆ: ಎಲ್ಎಸ್‌ಜಿ vs ಜಿಟಿ, ಲಖನೌ

ಇಂಡಿಯನ್ ಪ್ರೀಮಿಯರ್ ಲೀಗ್
ಐಪಿಎಲ್ 2024: ಮಾರ್ಚ್ 22ಕ್ಕೆ ಚೆನ್ನೈನಲ್ಲಿ CSK vs RCB ನಡುವೆ ಉದ್ಘಾಟನಾ ಪಂದ್ಯ!

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024 ತಂಡಗಳ ನಾಯಕರು

1. ಚೆನ್ನೈ ಸೂಪರ್ ಕಿಂಗ್ಸ್: ಎಂಎಸ್ ಧೋನಿ

2. ಡೆಲ್ಲಿ ಕ್ಯಾಪಿಟಲ್ಸ್: ರಿಷಬ್ ಪಂತ್

3. ಗುಜರಾತ್ ಟೈಟಾನ್ಸ್: ಶುಭಮನ್ ಗಿಲ್

4. ಕೋಲ್ಕತ್ತಾ ನೈಟ್ ರೈಡರ್ಸ್: ಶ್ರೇಯಸ್ ಐಯ್ಯರ್

5. ಲಖನೌ ಸೂಪರ್ ಜೈಂಟ್ಸ್: ಕೆಎಲ್ ರಾಹುಲ್

6. ಮುಂಬೈ ಇಂಡಿಯನ್ಸ್: ಹಾರ್ದಿಕ್ ಪಾಂಡ್ಯ

7. ಪಂಜಾಬ್ ಕಿಂಗ್ಸ್: ಶಿಖರ್ ಧವನ್

8. ರಾಜಸ್ತಾನ್ ರಾಯಲ್ಸ್: ಸಂಜು ಸ್ಯಾಮ್ಸನ್

9. ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್

10. ಸನ್‌ರೈಸರ್ಸ್ ಹೈದರಾಬಾದ್: ಪ್ಯಾಟ್ ಕಮಿನ್ಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com