IPL 2024: ಸಿಎಸ್‌ಕೆ ಎದುರಿನ ನಿರ್ಣಾಯಕ ಪಂದ್ಯಕ್ಕೂ ಮುನ್ನ ಆರ್‌ಸಿಬಿಗೆ ದೊಡ್ಡ ಸಂಕಷ್ಟ; ಗತಿ ಏನು?

ಸಿಎಸ್‌ಕೆ ವಿರುದ್ಧದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬೃಹತ್ ಗೆಲುವು ಪಡೆದರೆ, ಪ್ಲೇಆಫ್ ಪ್ರವೇಶಿಸುವ ಸಾಧ್ಯತೆ ಇದೆ. ಈ ಮಹತ್ವದ ಪಂದ್ಯ ಗೆಲ್ಲುವ ಲೆಕ್ಕಾಚಾರದಲ್ಲಿದ್ದ ಆರ್‌ಸಿಬಿ ತಂಡಕ್ಕೆ ಇದೀಗ ದೊಡ್ಡ ಆಘಾತ ಎದುರಾಗಿದೆ. ಆರ್‌ಸಿಬಿಯ ಪ್ರಮುಖ ಆಲ್‌ರೌಂಡರ್ ವಿಲ್ ಜಾಕ್ಸ್ ತಂಡವನ್ನು ತೊರೆದಿದ್ದಾರೆ. ಜೂನ್ 2ರಿಂದ ಟಿ20 ವಿಶ್ವಕಪ್ ಆರಂಭವಾಗಲಿದ್ದು, ಸಿದ್ಧತೆಗಾಗಿ ಇಂಗ್ಲೆಂಡ್ ತಂಡದ ಆಟಗಾರರಾದ ವಿಲ್ ಜಾಕ್ಸ್ ಮತ್ತು ರೀಸ್ ಟೋಪ್ಲಿ ತವರಿಗೆ ಮರಳಿದ್ದಾರೆ. ಬಳಿಕ ಅವರು ಯುಎಸ್‌ಗೆ ಪ್ರಯಾಣ ಮಾಡಲಿದ್ದಾರೆ.
ಆರ್‌ಸಿಬಿ
ಆರ್‌ಸಿಬಿ

ಐಪಿಎಲ್ 2024ನೇ ಆವೃತ್ತಿಯ ಆರಂಭದಲ್ಲಿ ಅಷ್ಟೇನು ಉತ್ತಮ ಪ್ರದರ್ಶನ ತೋರದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ್ದ ಎಂಟು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದು, ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಕುಸಿದಿತ್ತು. ಬಳಿಕ ಐದು ಪಂದ್ಯಗಳನ್ನು ಸತತವಾಗಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಜಿಗಿದಿದೆ. ಸಿಎಸ್‌ಕೆ ವಿರುದ್ಧದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಬೃಹತ್ ಗೆಲುವು ಪಡೆದರೆ, ಪ್ಲೇಆಫ್ ಪ್ರವೇಶಿಸುವ ಸಾಧ್ಯತೆ ಇದೆ. ಈ ಮಹತ್ವದ ಪಂದ್ಯ ಗೆಲ್ಲುವ ಲೆಕ್ಕಾಚಾರದಲ್ಲಿದ್ದ ಆರ್‌ಸಿಬಿ ತಂಡಕ್ಕೆ ಇದೀಗ ದೊಡ್ಡ ಆಘಾತ ಎದುರಾಗಿದೆ.

ಆರ್‌ಸಿಬಿಯ ಪ್ರಮುಖ ಆಲ್‌ರೌಂಡರ್ ವಿಲ್ ಜಾಕ್ಸ್ ತಂಡವನ್ನು ತೊರೆದಿದ್ದಾರೆ. ಜೂನ್ 2ರಿಂದ ಟಿ20 ವಿಶ್ವಕಪ್ ಆರಂಭವಾಗಲಿದ್ದು, ಸಿದ್ಧತೆಗಾಗಿ ಇಂಗ್ಲೆಂಡ್ ತಂಡದ ಆಟಗಾರರಾದ ವಿಲ್ ಜಾಕ್ಸ್ ಮತ್ತು ರೀಸ್ ಟೋಪ್ಲಿ ತವರಿಗೆ ಮರಳಿದ್ದಾರೆ. ಬಳಿಕ ಅವರು ಯುಎಸ್‌ಗೆ ಪ್ರಯಾಣ ಮಾಡಲಿದ್ದಾರೆ.

ರೀಸ್ ಟೋಪ್ಲಿ ತಂಡವನ್ನು ತೊರೆದಿರುವುದು ತಂಡದ ಮೇಲೆ ಪರಿಣಾಮ ಬೀರದಿದ್ದರೂ, ವಿಲ್ ಜಾಕ್ಸ್ ಆಡದಿರುವುದು ತಂಡಕ್ಕೆ ಹಿನ್ನಡೆಯಾಗಲಿದೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಲವನ್ನು ಹೆಚ್ಚಿಸುತ್ತಿದ್ದ ಜಾಕ್ಸ್, ಈ ಬಾರಿ ಐಪಿಎಲ್‌ನಲ್ಲಿ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ.

ಇಂಗ್ಲೆಂಡ್‌ನ ಆಟಗಾರರು ವಾಪಸ್

ಪಂಜಾಬ್ ಕಿಂಗ್ಸ್‌ನ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಅವರು ಮುಂದಿನ ತಿಂಗಳು ನಡೆಯಲಿರುವ T20 ವಿಶ್ವಕಪ್‌ಗೆ ಮುಂಚಿತವಾಗಿ ಗುಣಮುಖರಾಗಲು ಐಪಿಎಲ್‌ನಿಂದ ಹೊರನಡೆದಿದ್ದು, ಸೋಮವಾರ ಇಂಗ್ಲೆಂಡ್‌ಗೆ ಮರಳಿದ್ದಾರೆ. ಲಿವಿಂಗ್‌ಸ್ಟೋನ್ ಜೊತೆಗೆ, ಜೋಸ್ ಬಟ್ಲರ್ (ರಾಜಸ್ಥಾನ್ ರಾಯಲ್ಸ್), ವಿಲ್ ಜಾಕ್ಸ್ ಮತ್ತು ರೀಸ್ ಟೋಪ್ಲಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಸಹ ಮೇ 22ರಂದು ಪ್ರಾರಂಭವಾಗುವ ಪಾಕಿಸ್ತಾನ ವಿರುದ್ಧದ T20I ಸರಣಿಗೂ ಮುನ್ನ ಇಂಗ್ಲೆಂಡ್ ತಂಡವನ್ನು ಸೇರಲು ಐಪಿಎಲ್ ಅನ್ನು ತೊರೆದಿದ್ದಾರೆ.

ಆರ್‌ಸಿಬಿ
IPL 2024: RCB ಪ್ಲೇ ಆಫ್ ಹಾದಿ ಮತ್ತಷ್ಟು ಕಠಿಣ, ರಾಜಸ್ತಾನ ವಿರುದ್ಧ ಚೆನ್ನೈಗೆ ಭರ್ಜರಿ ಜಯ

'ಈ ವರ್ಷಕ್ಕೆ ಐಪಿಎಲ್ ಪ್ರಯಾಣ ಮುಗಿದಿದೆ. ಮುಂಬರುವ ವಿಶ್ವಕಪ್‌ಗೆ ಮುಂಚಿತವಾಗಿ ನನ್ನ ಮೊಣಕಾಲು ಗಾಯದಿಂದ ಚೇತರಿಸಿಕೊಳ್ಳಬೇಕಿದೆ. ತಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕಾಗಿ ಪಂಜಾಬ್ ಕಿಂಗ್ಸ್ ಅಭಿಮಾನಿಗಳಿಗೆ ಮತ್ತೊಮ್ಮೆ ಧನ್ಯವಾದಗಳು. ತಂಡವಾಗಿ ಮತ್ತು ವೈಯಕ್ತಿಕವಾಗಿ ಇದು ನಿರಾಶಾದಾಯಕ ಆವೃತ್ತಿಯಾಗಿದೆ. ಆದರೆ, ಯಾವಾಗಲೂ ನಾನು ಐಪಿಎಲ್‌ನಲ್ಲಿ ಆಡುವ ಪ್ರತಿ ನಿಮಿಷವನ್ನು ಪ್ರೀತಿಸುತ್ತೇನೆ' ಎಂದು ಲಿವಿಂಗ್‌ಸ್ಟೋನ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದಿದ್ದಾರೆ.

ಆದ್ದರಿಂದ, ಲಿವಿಂಗ್‌ಸ್ಟೋನ್ ರಾಜಸ್ಥಾನ್ ರಾಯಲ್ಸ್ (ಮೇ 15) ಮತ್ತು ಸನ್‌ರೈಸರ್ಸ್ ಹೈದರಾಬಾದ್ (ಮೇ 19) ವಿರುದ್ಧ ನಡೆಯಲಿರುವ ಎರಡು ಪಂದ್ಯಗಳಲ್ಲಿ ಪಂಜಾಬ್ ತಂಡಕ್ಕೆ ಲಭ್ಯವಿರುವುದಿಲ್ಲ.

ಲಿವಿಂಗ್‌ಸ್ಟೋನ್ ಅವರ ಗಾಯವು ಗಂಭೀರ ಸ್ವರೂಪ ಹೊಂದಿಲ್ಲ. ಆದರೆ, ಇಎಸ್‌ಪಿಎನ್‌ಕ್ರಿಕ್‌ಇನ್‌ಫೋ ಪ್ರಕಾರ, ಇಂಗ್ಲೆಂಡ್ ಮ್ಯಾನೇಜ್‌ಮೆಂಟ್, ಪಾಕಿಸ್ತಾನ ವಿರುದ್ಧದ T20I ಸರಣಿಯ ಮೊದಲು ಚಿಕಿತ್ಸೆ ಪಡೆಯಲು ಹೆಚ್ಚಿನ ಸಮಯವನ್ನು ನೀಡಲು ನಿರ್ಧರಿಸಿದೆ. ಆ ಸರಣಿಯ ನಂತರ, ಹಾಲಿ ಚಾಂಪಿಯನ್‌ಗಳು ತಮ್ಮ T20 ವಿಶ್ವಕಪ್‌ಗಾಗಿ ವೆಸ್ಟ್ ಇಂಡೀಸ್‌ಗೆ ಪ್ರಯಾಣಿಸಲಿದ್ದಾರೆ. ಜೂನ್ 4 ರಂದು ಬಾರ್ಬಡೋಸ್‌ನ ಬ್ರಿಡ್ಜ್‌ಟೌನ್‌ನಲ್ಲಿ ಸ್ಕಾಟ್‌ಲ್ಯಾಂಡ್ ವಿರುದ್ಧ ಪ್ರಾರಂಭವಾಗಲಿದೆ.

ಆರ್‌ಸಿಬಿ
IPL 2024 Playoff: ಪ್ಲೇಆಫ್ ಪ್ರವೇಶಿಸಲು ಸಿಎಸ್‌ಕೆ, ಡಿಸಿ, ಆರ್‌ಸಿಬಿ ಮುಂದಿರುವ ಸವಾಲುಗಳು ಏನು?

ಈಮಧ್ಯೆ, ವಿಶ್ವಕಪ್ ತಂಡದ ಭಾಗವಾಗಿರುವ ಐಪಿಎಲ್‌ನಲ್ಲಿರುವ ಇತರ ಇಂಗ್ಲೆಂಡ್ ಆಟಗಾರರಾದ ಮೊಯಿನ್ ಅಲಿ (ಸಿಎಸ್‌ಕೆ), ಸ್ಯಾಮ್ ಕರಣ್, ಜಾನಿ ಬೈರ್‌ಸ್ಟೋವ್ (ಪಿಬಿಕೆಎಸ್) ಮತ್ತು ಫಿಲ್ ಸಾಲ್ಟ್ (ಕೆಕೆಆರ್) ಶೀಘ್ರದಲ್ಲೇ ತವರಿಗೆ ಮರಳಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com