ಸಿಎಸ್‌ಕೆ vs ಆರ್‌ಸಿಬಿ ಪಂದ್ಯದಲ್ಲಿ ಎಂಸ್ ಧೋನಿ-ವಿರಾಟ್ ಕೊಹ್ಲಿ
ಸಿಎಸ್‌ಕೆ vs ಆರ್‌ಸಿಬಿ ಪಂದ್ಯದಲ್ಲಿ ಎಂಸ್ ಧೋನಿ-ವಿರಾಟ್ ಕೊಹ್ಲಿ

IPL 2024 Playoff: ಪ್ಲೇಆಫ್ ಪ್ರವೇಶಿಸಲು ಸಿಎಸ್‌ಕೆ, ಡಿಸಿ, ಆರ್‌ಸಿಬಿ ಮುಂದಿರುವ ಸವಾಲುಗಳು ಏನು?

ಇದೀಗ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್‌ನಂತಹ ತಂಡಗಳು ಇನ್ನೂ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಹೊಂದಿರುವ ಕಾರಣ ಪಂದ್ಯಾವಳಿ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
Published on

ಶುಕ್ರವಾರ (ಮೇ 10 ರಂದು) ಅಹಮದಾಬಾದ್‌ನಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವು ಸಿಎಸ್‌ಕೆ ವಿರುದ್ಧ 35 ರನ್‌ಗಳ ಅಂತರದಿಂದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆಲುವು ಸಾಧಿಸಿದ್ದು, ಐಪಿಎಲ್ 2024ನೇ ಆವೃತ್ತಿಯು ಇದೀಗ ಹೆಚ್ಚು ಕುತೂಹಲಕಾರಿಯಾಗಿದೆ. ಸದ್ಯ ಪ್ಲೇಆಫ್ ಸ್ಥಾನವನ್ನು ಭದ್ರಪಡಿಸಿಕೊಂಡಿರುವುದು ಕೋಲ್ಕತ್ತಾ ನೈಟ್ ರೈಡರ್ಸ್. ಇದಕ್ಕೆ ವ್ಯತಿರಿಕ್ತವಾಗಿ, ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಈ ವರ್ಷ ರೇಸ್‌ನಿಂದ ಹೊರಬಿದ್ದಿವೆ.

ಇದೀಗ ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್‌ನಂತಹ ತಂಡಗಳು ಇನ್ನೂ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯುವ ಅವಕಾಶವನ್ನು ಹೊಂದಿರುವ ಕಾರಣ ಪಂದ್ಯಾವಳಿ ಇದೀಗ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಸಿಎಸ್‌ಕೆ ಮತ್ತು ಡಿಸಿ ತಂಡಗಳು ಆಡಿರುವ 12 ಪಂದ್ಯಗಳಲ್ಲಿ ತಲಾ 6ರಲ್ಲಿ ಗೆಲುವು ಸಾಧಿಸುವ ಮೂಲಕ 12 ಅಂಕಗಳನ್ನು ಪಡೆದಿವೆ. ಡಿಸಿಗಿಂತ ಉತ್ತಮ ನೆಟ್ ರನ್ ರೇಟ್ ಹೊಂದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸದ್ಯ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ಐದನೇ ಸ್ಥಾನದಲ್ಲಿದೆ. RCB ತಮ್ಮ ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಲು ನಾಲ್ಕು ಸತತ ಗೆಲುವುಗಳೊಂದಿಗೆ ಅದ್ಭುತ ಫಾರ್ಮ್‌ನಲ್ಲಿದೆ. ಪಂದ್ಯಾವಳಿಯ ಮೊದಲಾರ್ಧದಲ್ಲಿ ಆಡಿದ್ದ ಎಂಟು ಪಂದ್ಯಗಳಲ್ಲಿ ಏಳರಲ್ಲಿ ಸೋತಿದ್ದ ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡವು ಇಲ್ಲಿವರೆಗೆ ಆಡಿರುವ 12 ಪಂದ್ಯಗಳಲ್ಲಿ ಐದರಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ.

ಇಂದು ಚೆನ್ನೈ ಸೂಪರ್ ಕಿಂಗ್ಸ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಲಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲು ಸಜ್ಜಾಗಿದೆ. ಈ ನಾಲ್ಕು ತಂಡಗಳು ಸದ್ಯ ತಮ್ಮ 13ನೇ ಪಂದ್ಯವನ್ನು ಆಡಲಿವೆ.

ಐಪಿಎಲ್ 2024 ಪ್ಲೇಆಫ್‌ ತಲುಪಲು ಸಿಎಸ್‌ಕೆ, ಡಿಸಿ ಮತ್ತು ಆರ್‌ಸಿಬಿ ಮುಂದಿರುವ ಸವಾಲುಗಳು ಏನೆಂಬುದನ್ನು ನೋಡೋಣ...

ಚೆನ್ನೈ ಸೂಪರ್ ಕಿಂಗ್ಸ್

ಹಾಲಿ ಚಾಂಪಿಯನ್ ಸಿಎಸ್‌ಕೆ ಎನ್‌ಆರ್‌ಆರ್ (+0.491) ನೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ರುತುರಾಜ್ ಗಾಯಕ್ವಾಡ್ ನಾಯಕತ್ವದ ತಂಡವು ಭಾನುವಾರ ರಾಜಸ್ಥಾನ್ ರಾಯಲ್ಸ್ ತಂಡವನ್ನು ತವರಿನಲ್ಲಿ ಎದುರಿಸಲು ಸಜ್ಜಾಗಿದೆ. ಮೇ 18ರ ಶನಿವಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿ ವಿರುದ್ಧ ಲೀಗ್ ಹಂತದ ತಮ್ಮ ಅಂತಿಮ ಪಂದ್ಯವನ್ನು ಆಡಲಿದ್ದಾರೆ.

ಸಿಎಸ್‌ಕೆ ತಮ್ಮ ಉಳಿದಿರುವ ಎರಡೂ ಪಂದ್ಯಗಳನ್ನು ಗೆದ್ದರೆ 16 ಅಂಕಗಳನ್ನು ಪಡೆಯಬಹುದು. ಹೀಗಾದಲ್ಲಿ ಡಿಸಿ ಮತ್ತು ಎಲ್‌ಎಸ್‌ಜಿಗಿಂತ ಉತ್ತಮವಾದ NRR ಕಾರಣದಿಂದಾಗಿ ಪ್ಲೇಆಫ್‌ಗೆ ಅರ್ಹತೆ ಪಡೆಯಲು ಹೆಚ್ಚಿನ ಅವಕಾಶವಿದೆ. ಒಂದು ವೇಳೆ ಕೇವಲ ಒಂದೇ ಪಂದ್ಯದಲ್ಲಿ ಗೆದ್ದರೆ, ಡಿಸಿ ಮತ್ತು ಎಲ್‌ಎಸ್‌ಜಿ ನಡುವಿನ ಪಂದ್ಯದ ನಂತರ ಅರ್ಹತೆ ಪಡೆಯುವ ಸಾಧ್ಯತೆಯಿದೆ.

ಚೆನ್ನೈ ಮುಂದಿರುವ ಎರಡೂ ಪಂದ್ಯಗಳಲ್ಲಿ ಸೋತರೆ, ಪಂದ್ಯಾವಳಿಯಿಂದ ಹೊರಗುಳಿಯಬೇಕಾಗುತ್ತದೆ. ಎಲ್‌ಎಸ್‌ಜಿ ಮತ್ತು ಡಿಸಿ ನಡುವಿನ ವಿಜೇತರು 14 ಅಂಕಗಳೊಂದಿಗೆ ಸಿಎಸ್‌ಕೆಯನ್ನು ಹಿಂದಿಕ್ಕುತ್ತಾರೆ.

ಸಿಎಸ್‌ಕೆ vs ಆರ್‌ಸಿಬಿ ಪಂದ್ಯದಲ್ಲಿ ಎಂಸ್ ಧೋನಿ-ವಿರಾಟ್ ಕೊಹ್ಲಿ
ಐಪಿಎಲ್ 2024: ರಾಜಸ್ಥಾನ್ ರಾಯಲ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ಗೆಲುವು, ಪ್ಲೇಆಫ್ ಕನಸು ಜೀವಂತ

ಡೆಲ್ಲಿ ಕ್ಯಾಪಿಟಲ್ಸ್

ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 12 ಅಂಕಗಳೊಂದಿಗೆ (NRR (-0.316)) ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಅವರ ಉಳಿದ ಎರಡು ಪಂದ್ಯಗಳು RCB ಮತ್ತು LSG ವಿರುದ್ಧವಿದೆ.

ಮುಂದಿರುವ ಎರಡೂ ಪಂದ್ಯಗಳಲ್ಲಿ ಡಿಸಿ ಗೆದ್ದರೆ 16 ಅಂಕಗಳನ್ನು ಪಡೆಯುತ್ತದೆ. ಡಿಸಿ ಪ್ಲೇಆಫ್‌ಗೆ ನೇರ ಅರ್ಹತೆ ಪಡೆಯಲು ಸಿಎಸ್‌ಕೆ ತಮ್ಮ ಉಳಿದಿರುವ ಎರಡು ಪಂದ್ಯಗಳಲ್ಲಿ ಒಂದರಲ್ಲಿ ಸೋಲು ಕಾಣುವುದು ಅನಿವಾರ್ಯವಾಗಿದೆ. ಒಂದು ವೇಳೆ ಉಭಯ ತಂಡಗಳು ತಮ್ಮ ಮುಂದಿನ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿ 16 ಅಂಕಗಳನ್ನು ಗಳಿಸಿದ್ದೇ ಆದರೆ, NRR ನೆರವಿಗೆ ಬರುತ್ತದೆ.

ಡೆಲ್ಲಿ ಎರಡು ಪಂದ್ಯಗಳಲ್ಲಿ ಒಂದನ್ನು ಗೆದ್ದು 14 ಅಂಕ ಗಳಿಸಿದರೆ, ಸಿಎಸ್‌ಕೆ ತನ್ನ ಎರಡೂ ಪಂದ್ಯಗಳಲ್ಲಿ ಸೋತರೆ ಮತ್ತು ಎಲ್‌ಎಸ್‌ಜಿ ಕನಿಷ್ಠ ಒಂದು ಪಂದ್ಯದಲ್ಲಾದರೂ ಸೋತರೆ ಮಾತ್ರ ಡೆಲ್ಲಿಗೆ ಪ್ಲೇಆಪ್ ಪ್ರವೇಶಕ್ಕೆ ಅವಕಾಶವಿದೆ. ಒಂದು ವೇಳೆ ಡೆಲ್ಲಿ ಕ್ಯಾಪಿಟಲ್ಸ್ ತಮ್ಮ ಎರಡೂ ಪಂದ್ಯಗಳಲ್ಲಿ ಸೋತರೆ, ಪ್ಲೇಆಫ್ ರೇಸ್‌ನಿಂದ ಹೊರಗುಳಿಯುತ್ತದೆ.

ಸಿಎಸ್‌ಕೆ vs ಆರ್‌ಸಿಬಿ ಪಂದ್ಯದಲ್ಲಿ ಎಂಸ್ ಧೋನಿ-ವಿರಾಟ್ ಕೊಹ್ಲಿ
IPL 2024: GT ವಿರುದ್ಧ ಭರ್ಜರಿ ಗೆಲುವು; RCB ಪ್ಲೇಆಫ್ ಕನಸು ಇನ್ನೂ ಜೀವಂತ!

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಐಪಿಎಲ್ 2024 ರ ಪ್ಲೇಆಫ್ ಮೇಲೆ ಕಣ್ಣಿಟ್ಟಿರುವ ತಂಡಗಳಲ್ಲಿ ಆರ್‌ಸಿಬಿ ಕೂಡ ಒಂದಾಗಿದೆ. ಫಾಫ್ ಡು ಪ್ಲೆಸಿಸ್ ನೇತೃತ್ವದ ಆರ್‌ಸಿಬಿ ತನ್ನ ಉಳಿದ ಎರಡು ಪಂದ್ಯಗಳನ್ನು ಗೆಲ್ಲುವಲ್ಲಿ ಯಶಸ್ವಿಯಾದರೆ 14 ಅಂಕಗಳನ್ನು ಪಡೆಯಬಹುದು. ಆದಾಗ್ಯೂ, ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ಇತರ ಫಲಿತಾಂಶಗಳು ಬೇಕಾಗುತ್ತವೆ.

RCB ತನ್ನ ಕೊನೆಯ ಎರಡು ಪಂದ್ಯಗಳನ್ನು ಗೆದ್ದು 14 ಅಂಕಗಳನ್ನು ತಲುಪಿದರೆ, ರಾಜಸ್ಥಾನ್ ರಾಯಲ್ಸ್ ವಿರುದ್ಧ ಸಿಎಸ್‌ಕೆ ಸೋಲಬೇಕಿರುತ್ತದೆ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ಸೋಲಬೇಕಿರುತ್ತದೆ ಮತ್ತು ಎಲ್‌ಎಸ್‌ಜಿ ಎಂಐ ಅಥವಾ ಜಿಟಿ ವಿರುದ್ಧ ಒಂದು ಪಂದ್ಯದಲ್ಲಿ ಸೋಲುವ ಅಗತ್ಯವಿರುತ್ತದೆ.

ಇದರೊಂದಿಗೆ, ಆರ್‌ಸಿಬಿ ಮತ್ತು ಎಲ್‌ಎಸ್‌ಜಿ 14 ಅಂಕ ಪಡೆದು ಸಮನಾಗಿರುತ್ತವೆ. ಆದರೆ, ಅತ್ಯುತ್ತಮ NRR ಹೊಂದಿರುವ ತಂಡವು ಪ್ಲೇಆಫ್‌ಗೆ ಪ್ರವೇಶ ಪಡೆಯುತ್ತದೆ. ಸದ್ಯ ಆರ್‌ಸಿಬಿ ಎಲ್‌ಎಸ್‌ಜಿಗಿಂತ ಅತ್ಯುತ್ತಮ NRR ಅನ್ನು ಹೊಂದಿದೆ.

ಆದಾಗ್ಯೂ, ಸಿಎಸ್‌ಕೆ ತನ್ನ ಉಳಿದ ಎರಡೂ ಪಂದ್ಯಗಳನ್ನು ಗೆದ್ದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡವು ಗುಜರಾತ್ ಟೈಟಾನ್ಸ್ ಮತ್ತು ಪಂಜಾಬ್ ವಿರುದ್ಧ ಎರಡೂ ಪಂದ್ಯಗಳಲ್ಲಿ ಸೋಲಬೇಕಿದೆ. ಜಿಟಿ ಕೂಡ ಕೆಕೆಆರ್ ವಿರುದ್ಧ ಸೋಲು ಕಾಣಬೇಕಿರುತ್ತದೆ. LSG ತನ್ನ ಉಳಿದ ಎರಡು ಪಂದ್ಯಗಳಲ್ಲಿ ಒಂದಕ್ಕಿಂತ ಹೆಚ್ಚು ಗೆಲುವು ಕಾಣುವಂತಿಲ್ಲ.

ಈ ಮೂಲಕ ಆರು ತಂಡಗಳು ಇದೀಗ ಪ್ಲೇಆಫ್‌ ರೇಸ್‌ನಲ್ಲಿದ್ದು, ಉತ್ತಮ NRR ಹೊಂದಿರುವ ಎರಡು ತಂಡಗಳು ಅರ್ಹತೆ ಪಡೆಯುತ್ತವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com