BCCI ಕೈಬಿಟ್ಟಿದ್ದ Team India ಸ್ಟಾರ್ ಆಟಗಾರ Wriddhiman Saha ದಿಢೀರ್ ನಿವೃತ್ತಿ

ಭಾರತ ಕ್ರಿಕೆಟ್ ತಂಡದಲ್ಲಿ ವಿಕೆಟ್ ಕೀಪಿಂಗ್ ಬ್ಯಾಟರ್ ಸ್ಥಾನದಲ್ಲಿ ವ್ಯಾಪಕ ಪೈಪೋಟಿ ನೀಡುತ್ತಿದ್ದ ಟೀಮ್ ಇಂಡಿಯಾ ಆಟಗಾರ ವೃದ್ಧಿಮಾನ್ ಸಾಹ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.
Wriddhiman Saha
ವೃದ್ದಿಮಾನ್ ಸಾಹ
Updated on

ಮುಂಬೈ: 2023ರ ಆಟಗಾರರ ಒಪ್ಪಂದದಿಂದ ಬಿಸಿಸಿಐ ಕೈ ಬಿಟ್ಟಿದ್ದ ಟೀಂ ಇಂಡಿಯಾದ ಸ್ಟಾರ್ ಆಟಗಾರ ವೃದ್ದಿಮಾನ್ ಸಾಹ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ದಿಢೀರ್ ವಿದಾಯ ಘೋಷಣೆ ಮಾಡಿದ್ದಾರೆ.

ಹೌದು.. ಭಾರತ ಕ್ರಿಕೆಟ್ ತಂಡದಲ್ಲಿ ವಿಕೆಟ್ ಕೀಪಿಂಗ್ ಬ್ಯಾಟರ್ ಸ್ಥಾನದಲ್ಲಿ ವ್ಯಾಪಕ ಪೈಪೋಟಿ ನೀಡುತ್ತಿದ್ದ ಟೀಮ್ ಇಂಡಿಯಾ ಆಟಗಾರ ವೃದ್ಧಿಮಾನ್ ಸಾಹ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದಾರೆ.

ಪ್ರಸ್ತುತ ನಡೆಯುತ್ತಿರುವ ರಣಜಿ ಟೂರ್ನಿಯಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಆಗಿ ಬಂಗಾಳ ಪರ ಕಣಕ್ಕಿಳಿದಿರುವ ಸಾಹ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.

Wriddhiman Saha
ಆಸ್ಟ್ರೇಲಿಯಾ ಸರಣಿ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಅಶ್ವಿನ್ ಭವಿಷ್ಯ ನಿರ್ಧಾರ?

ಭಾವುಕ ಪೋಸ್ಟ್

ನಿವೃತ್ತಿ ಬಗ್ಗೆ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಭಾವುಕ ಪೋಸ್ಟ್ ಮಾಡಿರುವ ಸಾಹ, 'ಕ್ರಿಕೆಟ್‌ನಲ್ಲಿ ಸ್ಮರಣೀಯ ಪ್ರಯಾಣದ ನಂತರ, ಈ ರಣಜಿ ಋತುವು ನನ್ನ ಕೊನೆಯ ಸರಣಿಯಾಗಿದೆ. ಸದ್ಯ ನಡೆಯುತ್ತಿರುವ ರಣಜಿ ಟ್ರೋಫಿ ನನ್ನ ಕೊನೆಯ ಸರಣಿಯಾಗಿದ್ದು, ನನ್ನ ವೃತ್ತಿ ಜೀವನದ ಕೊನೆಯ ಪಂದ್ಯದಲ್ಲಿ ಬಂಗಾಳವನ್ನು ಪ್ರತಿನಿಧಿಸುವ ಗೌರವವನ್ನು ಪಡೆದಿದ್ದೇನೆ. ಈ ಸರಣಿಯನ್ನು ಸ್ಮರಣೀಯಗೊಳಿಸೋಣ' ಎಂದು ಬರೆದುಕೊಂಡಿದ್ದಾರೆ.

ಈ ಮೂಲಕ 17 ವರ್ಷಗಳ ಸುದೀರ್ಘ ವೃತ್ತಿಜೀವನವನ್ನು ಕೊನೆಗೊಳಿಸಲು ವೃದ್ಧಿಮಾನ್ ಸಾಹ ನಿರ್ಧರಿಸಿದ್ದು, ತಮ್ಮ 17 ವರ್ಷಗಳ ವೃತ್ತಿಜೀವನದಲ್ಲಿ ಸಾಹ 15 ವರ್ಷಗಳ ಕಾಲ ಬಂಗಾಳ ಪರವಾಗಿ ಮತ್ತು 2 ವರ್ಷಗಳ ಕಾಲ ತ್ರಿಪುರಾ ಪರ ದೇಶೀಯ ಕ್ರಿಕೆಟ್ ಆಡಿದ್ದಾರೆ.

ಇನ್ನು 2010 ರಲ್ಲಿ ಟೀಮ್ ಇಂಡಿಯಾ ಪರ ಪಾದಾರ್ಪಣೆ ಮಾಡಿದ್ದ ವೃದ್ಧಿಮಾನ್ ಸಾಹ 40 ಟೆಸ್ಟ್ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ 56 ಇನಿಂಗ್ಸ್ ಆಡಿರುವ ಅವರು 3 ಶತಕ ಹಾಗೂ 6 ಅರ್ಧಶತಕಗಳೊಂದಿಗೆ ಒಟ್ಟು 1353 ರನ್ ಕಲೆಹಾಕಿದ್ದಾರೆ. ಹಾಗೆಯೇ ಭಾರತದ ಪರ 9 ಏಕದಿನ ಪಂದ್ಯಗಳಲ್ಲೂ ವಿಕೆಟ್ ಕೀಪರ್ ಆಗಿ ಕಣಕ್ಕಿಳಿದಿದ್ದ ಸಾಹ ಕೇವಲ 41 ರನ್​ಗಳಿಸಲಷ್ಟೇ ಶಕ್ತರಾಗಿದ್ದರು. ಹೀಗಾಗಿ 2014 ರ ಬಳಿಕ ಅವರಿಗೆ ಭಾರತ ಏಕದಿನ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ.

2021ರವರೆಗೆ ಭಾರತ ಟೆಸ್ಟ್ ತಂಡದಲ್ಲಿ ಕಾಣಿಸಿಕೊಂಡಿದ್ದ ವೃದ್ಧಿಮಾನ್ ಸಾಹ ಅತ್ಯುತ್ತಮ ವಿಕೆಟ್ ಕೀಪಿಂಗ್ ಮೂಲಕ ಗಮನ ಸೆಳೆದಿದ್ದರು. ಇದೀಗ ತಮ್ಮ 40ನೇ ವಯಸ್ಸಿನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಲು ನಿರ್ಧರಿಸಿದ್ದು, ಈ ಮೂಲಕ ಸುದೀರ್ಘ ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ್ದಾರೆ.

Wriddhiman Saha
ರಿಷಬ್ ಪಂತ್ ಔಟ್ ವಿವಾದ: ಥರ್ಡ್ ಅಂಪೈರ್ ನಿರ್ಧಾರಕ್ಕೆ ಎಬಿ ಡಿವಿಲಿಯರ್ಸ್ ಆಕ್ಷೇಪ, ವಿಡಿಯೋ ನೋಡಿ!

ಒಪ್ಪಂದದಿಂದ ಕೈಬಿಟ್ಟಿದ್ದ BCCI

ಭಾರತದ ರೆಡ್ ಬಾಲ್ ಕ್ರಿಕೆಟ್‌ನಲ್ಲಿ ಬಹಳ ಸಮಯದಿಂದ ಗುರುತಿಸಿಕೊಂಡಿರುವ ಸಹಾ ಅವರನ್ನು ಕಳೆದ ವರ್ಷ ಬಿಸಿಸಿಐ ಆಟಗಾರರ ಕೇಂದ್ರೀಯ ಗುತ್ತಿಗೆ ಪಟ್ಟಿಯಿಂದ ಕೈ ಬಿಟ್ಟಿತ್ತು.

ಐಪಿಎಲ್ ನಿಂದಲೂ ದೂರ

ಅಂತೆಯೇ ಈ ತಿಂಗಳಾಂತ್ಯದಲ್ಲಿ ನಡೆಯಲಿರುವ ಮೆಗಾ ಹರಾಜಿಗೆ ಸಹಾ ನೋಂದಣಿ ಮಾಡದ ಕಾರಣ ಮುಂದಿನ ವರ್ಷದ ಐಪಿಎಲ್‌ನಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ. ಅವರು ಈ ವಿಷಯವನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸದಿದ್ದರೂ, ಹರಾಜಿಗೂ ಮುನ್ನ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಬಹುದು ಎಂದು ತಿಳಿದುಬಂದಿದೆ.

ಕಳೆದ ಮೂರು ವರ್ಷಗಳಿಂದ ಸಾಹಾ ಪ್ರತಿನಿಧಿಸುತ್ತಿದ್ದ ಗುಜರಾತ್ ಟೈಟಾನ್ಸ್ ಫ್ರಾಂಚೈಸಿ ಅವರನ್ನು ಉಳಿಸಿಕೊಂಡಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್ (CSK), ಪಂಜಾಬ್ ಕಿಂಗ್ಸ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ಎಂಬ ಐದು ಫ್ರಾಂಚೈಸಿಗಳನ್ನು ಪ್ರತಿನಿಧಿಸುವ, 2008 ರಲ್ಲಿ ಪ್ರಾರಂಭವಾದಾಗಿನಿಂದ IPL ನ ಪ್ರತಿ ಕ್ರೀಡಾಋತುವಿನಲ್ಲೂ ಕಾಣಿಸಿಕೊಂಡ ಕೆಲವೇ ಕೆಲವು ಆಟಗಾರರಲ್ಲಿ ಸಹಾ ಒಬ್ಬರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com