IPL 2025: Vaibhav Suryavanshi ವಿರುದ್ಧ ವಯಸ್ಸು ತಿರುಚಿದ ಆರೋಪ; ತಂದೆ ಹೇಳಿದ್ದೇನು?

ಬಿಹಾರದ ಸಮಸ್ತಿಪುರ್ ಪಟ್ಟಣದಿಂದ 15 ಕಿ.ಮೀ ದೂರದಲ್ಲಿರುವ ಮೋತಿಪುರ್ ಗ್ರಾಮದಲ್ಲಿ ಜನಿಸಿದ್ದ ವೈಭವ್ ಸೂರ್ಯವಂಶಿ ಹಾಲಿ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ.
Vaibhav Suryavanshi
ಉದಯೋನ್ಮುಖ ಆಟಗಾರ ಕ್ರಿಕೆಟ್ ಆಟಗಾರ ವೈಭವ್ ಸೂರ್ಯವಂಶಿ
Updated on

ಮುಂಬೈ: ಮುಂಬರುವ ಐಪಿಎಲ್ 2025ರ ಟೂರ್ನಿಯ ಹರಾಜು ಪ್ರಕ್ರಿಯೆ ಚಾಲ್ತಿಯಲ್ಲಿರುವಂತೆಯೇ ಹರಾಜಿನಲ್ಲಿ ಹೆಸರು ನೊಂದಾಯಿಸಿಕೊಂಡಿದ್ದ ಅತ್ಯಂತ ಕಿರಿಯ ಕ್ರಿಕೆಟಿಗನೆಂಬ ಕೀರ್ತಿಗೆ ಭಾಜನವಾಗಿದ್ದ ಉದಯೋನ್ಮುಖ ಆಟಗಾರ Vaibhav Suryavanshi ಸುತ್ತ ವಿವಾದವೊಂದು ಸುತ್ತಿಕೊಂಡಿದೆ.

ಹೌದು.. ಬಿಹಾರ ಮೂಲದ ಉದಯೋನ್ಮುಖ ಆಟಗಾರ ಕ್ರಿಕೆಟ್ ಆಟಗಾರ Vaibhav Suryavanshi ತನ್ನ ವಯಸ್ಸು ತಿರುಚ್ಚಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವೈಭವ್ ಸೂರ್ಯವಂಶಿ ವಯಸ್ಸಿನ ವಿಚಾರವಾಗಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಬಿಹಾರದ ಸಮಸ್ತಿಪುರ್ ಪಟ್ಟಣದಿಂದ 15 ಕಿ.ಮೀ ದೂರದಲ್ಲಿರುವ ಮೋತಿಪುರ್ ಗ್ರಾಮದಲ್ಲಿ ಜನಿಸಿದ್ದ ವೈಭವ್ ಸೂರ್ಯವಂಶಿ ಹಾಲಿ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಪಾಲಾಗಿದ್ದಾರೆ.

1.10 ಕೋಟಿ ರೂ.ಗೆ ರಾಜಸ್ಥಾನ ರಾಯಲ್ಸ್ ತಂಡ Vaibhav Suryavanshi ಖರೀದಿಸಿದ್ದು, ಆ ಮೂಲಕ Vaibhav Suryavanshi ಫ್ರಾಂಚೈಸಿಯಿಂದ ಆಯ್ಕೆಯಾದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

ವೈಭವ್ ಸೂರ್ಯವಂಶಿ ಅವರ ತಂದೆ ಸಂಜೀವ್ ಸೂರ್ಯವಂಶಿ ತನ್ನ ಮಗನ ಕ್ರಿಕೆಟ್ ಆಕಾಂಕ್ಷೆಗಳಿಗೆ ಹಣ ನೀಡಲು ತನ್ನ ಕೃಷಿ ಭೂಮಿಯನ್ನು ಮಾರಾಟ ಮಾಡಿದ್ದರು. ಹೀಗೆ ಮಾರಾಟ ಕೃಷಿ ಭೂಮಿ ಮಾರಾಟ ಮಾಡಿದ ಮೂರೇ ವರ್ಷಗಳಲ್ಲಿ ಈ ದುಬಾರಿ ಬೆಲೆಗೆ ಬಿಕರಿಯಾಗುವ ಮೂಲಕ ಇತಿಹಾಸ ಬರೆದಿದ್ದಾನೆ.

Vaibhav Suryavanshi
ಕೂಚ್‌ ಬಿಹಾರ್‌ ಟ್ರೋಫಿ: 23 ರನ್‌ಗಳಿಂದ ಫೆರಾರಿ ಮಿಸ್; ಪುತ್ರನ ಬಗ್ಗೆ ವೀರೇಂದ್ರ ಸೆಹ್ವಾಗ್ ಪೋಸ್ಟ್ ವೈರಲ್

ಇಷ್ಟಕ್ಕೂ ವಿವಾದವೇನು?

ಬಿಸಿಸಿಐ ಮೂಲಗಳ ಪ್ರಕಾರ ವೈಭವ್ ಸೂರ್ಯವಂಶಿ ವಯಸ್ಸು 13 ವರ್ಷ ಎಂದು ಹೇಳಲಾಗುತ್ತಿದೆ. ಆದರೆ ಆತನ ನೈಜ ವಯಸ್ಸು 15 ವರ್ಷಗಳು ಎಂಬ ಆರೋಪ ಕೇಳಿಬಂದಿದೆ. ತಮ್ಮ ವಯಸ್ಸು ತಿರುಚಿ ಬಿಸಿಸಿಐಗೆ ದಾಖಲೆ ನೀಡಿದ್ದಾರೆ ಎಂಬ ಆರೋಪ ವೈಭವ್ ಸೂರ್ಯವಂಶಿ ಕುಟುಂಬಸ್ಥರ ವಿರುದ್ಧ ಕೇಳಿಬಂದಿದೆ.

ತಿರುಗೇಟು ಕೊಟ್ಟ ತಂದೆ

ಇನ್ನು ವಯಸ್ಸಿನ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ವೈಭವ್ ಸೂರ್ಯವಂಶಿ ತಂದೆ ಸಂಜೀವ್ ಸೂರ್ಯವಂಶಿ, 'ಇದರಲ್ಲಿ ಮುಚ್ಚಿಡುವುದೇನೂ ಇಲ್ಲ. ಎಲ್ಲ ದಾಖಲೆಗಳನ್ನೂ ನಾವು ಬಿಸಿಸಿಐಗೆ ನೀಡಿದ್ದಾವೆ. ವೈಭವ್ ಸೂರ್ಯವಂಶಿ ಈಗ ನಮ್ಮ ಮಗ ಮಾತ್ರ ಅಲ್ಲ.. ಆತ ಇಡೀ ಬಿಹಾರದ ಮಗನಾಗಿದ್ದಾನೆ. ಆತ ಪ್ರಸ್ತುತ U-19 ಏಷ್ಯಾ ಕಪ್‌ಗಾಗಿ ದುಬೈನಲ್ಲಿದ್ದಾನೆ. ನನ್ನ ಮಗ ಕಷ್ಟಪಟ್ಟು ಕೆಲಸ ಮಾಡಿದ್ದಾನೆ, 8 ವರ್ಷ ವಯಸ್ಸಿನಲ್ಲಿ, ಆತ 16 ವರ್ಷದೊಳಗಿನವರ ಜಿಲ್ಲಾ ಟ್ರಯಲ್ಸ್‌ನಲ್ಲಿ ಮಿಂಚಿದ್ದ ಎಂದು ಹೇಳಿದ್ದಾರೆ.

ಅಂತೆಯೇ ತಮ್ಮ ಕಷ್ಟದ ದಿನಗಳನ್ನು ನೆನೆಸಿಕೊಂಡ ಅವರು, ನಾನು ವೈಭವ್ ನ ಕ್ರಿಕೆಟ್ ಕನಸಿಗೆ ಸಾಕಷ್ಟು ಸಂಕಷ್ಟ ಎದುರಿಸಿದ್ದೇನೆ. ಆತನ ಕ್ರಿಕೆಟ್ ಆಸೆಗಾಗಿ ನನ್ನ ಜಮೀನನ್ನು ಕೂಡ ಮಾರಾಟ ಮಾಡಿದ್ದೆ. ಆದರಿಂದ ಬಂದ ಹಣದಲ್ಲಿ ಆತನ ಕ್ರಿಕೆಟ್ ಕೋಚಿಂಗ್ ಹಣ ನೀಡಿದ್ದೆ. ನಾನು ಅವನನ್ನು ಸಮಸ್ತಿಪುರಕ್ಕೆ ಕ್ರಿಕೆಟ್ ಕೋಚಿಂಗ್‌ಗೆ ಹಾಕಿದ್ದೆ. ಕ್ರಿಕೆಟ್ ಎನ್ನುವುದು ಈಗ ದೊಡ್ಡ ಹೂಡಿಕೆಯಾಗಿದೆ. ಜಮೀನು ಮಾರಾಟ ಮಾಡಿ ಮೂರೂವರೆ ವರ್ಷಗಳೇ ಕಳೆದರೂ ನಾವು ಇನ್ನೂ ಸುಧಾರಿಸಿಕೊಂಡಿಲ್ಲ. ಹಣಕಾಸಿನ ಸಮಸ್ಯೆಗಳು ಇನ್ನೂ ಇವೆ ಎಂದರು.

ಬೇಕಿದ್ದರೆ ಪರೀಕ್ಷೆ ಮಾಡಲಿ!

ವಯಸ್ಸಿನ ವಿವಾದದ ಕುರಿತು ಮಾತನಾಡಿದ ಅವರು, ವೈಭವ್ ಗೆ ಎಂಟೂವರೆ ವರ್ಷವಿದ್ದಾಗ BCCI ಆತನ ಮೂಳೆ ಪರೀಕ್ಷೆ ಮಾಡಿತ್ತು. ವೈಭವ್ ಈಗ U-19 ಅನ್ನು ಆಡಿದ್ದಾರೆ. ವಯಸ್ಸಿನ ಅನುಮಾನವಿದ್ದವರೂ ಯಾರು ಬೇಕಾದರೂ ಆತನನ್ನು ಮತ್ತೆ ಪರೀಕ್ಷೆಗೊಳಪಡಿಸಬಹುದು. ಬಿಹಾರ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರಾಕೇಶ್ ತಿವಾರಿ ಅವರ "ಆಶೀರ್ವಾದ" ವೈಭವ್ ಅವರ ಕ್ರಿಕೆಟ್ ಪ್ರಯಾಣದಲ್ಲಿ ಯಾವಾಗಲೂ ಸಹಾಯ ಮಾಡಿದೆ ಎಂದು ಸಂಜೀವ್ ಸೂರ್ಯವಂಶಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com