IPL 2025 ರ ಮೆಗಾ ಹರಾಜಿನಲ್ಲಿ ಅನುಭವಿ ಮತ್ತು ಯುವ ಆಟಗಾರರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತನ್ನ ತಂಡಕ್ಕೆ ಸೇರಿಸಿಕೊಂಡಿದೆ. ಈ ಪಡೆ ತಮ್ಮ ಮೊದಲ IPL ಪ್ರಶಸ್ತಿಯನ್ನು ಗೆಲ್ಲಲು ಶ್ರಮಿಸುತ್ತಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ವಿರಾಟ್ ಕೊಹ್ಲಿ ಸೇರಿದಂತೆ ಮೂವರು ಆಟಗಾರರನ್ನು ಮಾತ್ರ ಉಳಿಸಿಕೊಂಡಿತ್ತು. ಹೊಸ ತಂಡ ತನ್ನ ಪ್ರದರ್ಶನದಿಂದ ಇತಿಹಾಸ ಸೃಷ್ಟಿಸುವ ಮೂಲಕ ಮೊದಲ ಐಪಿಎಲ್ ಪ್ರಶಸ್ತಿ ಗೆಲ್ಲುವಲ್ಲಿ ಯಶಸ್ವಿಯಾಗಲಿ ಎಂದು ಆರ್‌ಸಿಬಿ ಅಭಿಮಾನಿಗಳು ಹಾರೈಸಿದ್ದಾರೆ. ಆರ್‌ಸಿಬಿ ಜೋಶ್ ಹ್ಯಾಜಲ್‌ವುಡ್‌ಗೆ ಅತಿ ಹೆಚ್ಚು ಬಿಡ್ ಮಾಡಿದ್ದು ಅವರನ್ನು ತಮ್ಮ ತಂಡಕ್ಕೆ ಸೇರಿಸಿದೆ.
ಐಪಿಎಲ್ 2025 ರ ಮೆಗಾ ಹರಾಜಿನ ನಂತರ RCB 14 ಭಾರತೀಯ ಆಟಗಾರರು ಮತ್ತು 8 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 22 ಆಟಗಾರರ ತಂಡವನ್ನು ಅಂತಿಮಗೊಳಿಸಲಾಗಿದೆ. ನೀವು ಇತರ ವಿವರಗಳನ್ನು ಕೆಳಗೆ ನೋಡಬಹುದು.
ಆರ್ ಸಿಬಿ ಉಳಿಸಿಕೊಂಡಿದ್ದ ಆಟಗಾರರು:
1. ವಿರಾಟ್ ಕೊಹ್ಲಿ - 21 ಕೋಟಿ
2. ರಜತ್ ಪಾಟಿದಾರ್ - 11 ಕೋಟಿ
3. ಯಶ್ ದಯಾಳ್ - 5 ಕೋಟಿ
ಲಿಯಾಮ್ ಲಿವಿಂಗ್‌ಸ್ಟೋನ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ ಮತ್ತು ಜೋಶ್ ಹ್ಯಾಜಲ್‌ವುಡ್ ಅವರಂತಹ ಪ್ರಭಾವಿ ಆಟಗಾರರನ್ನು ತಂಡವು ಹರಾಜಿನಲ್ಲಿ ಸೇರಿಸಿದೆ. ಮೆಗಾ ಹರಾಜು 2025 ರಲ್ಲಿ RCB ಖರೀದಿಸಿದ ಎಲ್ಲಾ ಆಟಗಾರರ ಸಂಪೂರ್ಣ ಪಟ್ಟಿಯನ್ನು ನೀವು ಇಲ್ಲಿ ನೋಡಬಹುದು-
* ಜೋಶ್ ಹ್ಯಾಜಲ್ವುಡ್ ಮೂಲ ಬೆಲೆ 2 ಕೋಟಿ ಇದ್ದು ₹12.50 ಕೋಟಿಗೆ ಖರೀದಿಸಿದೆ.
* ಫಿಲ್ ಸಾಲ್ಟ್ ಮೂಲ ಬೆಲೆ 2 ಕೋಟಿ ಇದ್ದು ₹11.50 ಕೋಟಿಗೆ ಖರೀದಿಸಿದೆ.
* ಜಿತೇಶ್ ಶರ್ಮಾ ಮೂಲ ಬೆಲೆ 1 ಕೋಟಿ ₹11 ಕೋಟಿಗೆ ಖರೀದಿಸಿದೆ.
* ಭುವನೇಶ್ವರ್ ಕುಮಾರ್ ಮೂಲ ಬೆಲೆ 2 ಕೋಟಿ ₹10.75ಗೆ ಖರೀದಿಸಿದೆ.
* ಲಿಯಾಮ್ ಲಿವಿಂಗ್ಸ್ಟೋನ್ ಮೂಲ ಬೆಲೆ 2 ಕೋಟಿ ಇದ್ದು ₹8.75 ಕೋಟಿಗೆ ಖರೀದಿಸಿದೆ.
* ರಾಸಿಖ್ ದಾರ್ ಮೂಲ ಬೆಲೆ 30 ಲಕ್ಷ ಇದ್ದು ₹6 ಕೋಟಿಗೆ ಖರೀದಿಸಿದೆ.
* ಕೃನಾಲ್ ಪಾಂಡ್ಯ ಮೂಲ ಬೆಲೆ 2 ಕೋಟಿ ಇದ್ದು ₹5.75 ಕೋಟಿಗೆ ಖರೀದಿಸಿದೆ.
* ಟಿಮ್ ಡೇವಿಡ್ ಮೂಲ ಬೆಲೆ 2 ಕೋಟಿ ಇದ್ದು ₹3 ಕೋಟಿಗೆ ಖರೀದಿಸಿದೆ.
* ಜಾಕೋಬ್ ಬೆಟ್ಟೆಲ್ ಮೂಲ ಬೆಲೆ 1.25 ಕೋಟಿ ಇದ್ದು ₹2.60 ಕೋಟಿಗೆ ಖರೀದಿಸಿದೆ.
* ಸುಯಶ್ ಶರ್ಮಾ ಮೂಲ ಬೆಲೆ 30 ಲಕ್ಷ ಇದ್ದು ₹2.60 ಕೋಟಿಗೆ ಖರೀದಿಸಿದೆ.
* ದೇವದತ್ ಪಡಿಕ್ಕಲ್ ಮೂಲ ಬೆಲೆ 2 ಕೋಟಿ ಇದ್ದು ₹2 ಕೋಟಿಗೆ ಖರೀದಿಸಿದೆ.
* ನುವಾನ್ ತುಷಾರ ಮೂಲ ಬೆಲೆ 75 ಲಕ್ಷ ಇದ್ದು ₹1.60 ಕೋಟಿಗೆ ಖರೀದಿಸಿದೆ.
* ರೊಮಾರಿಯೋ ಶೆಫರ್ಡ್ ಮೂಲ ಬೆಲೆ 1.50 ಕೋಟಿ ಇದ್ದು ₹1.50 ಕೋಟಿಗೆ ಖರೀದಿಸಿದೆ.
* ಲುಂಗಿಸಾನಿ ಎನ್ಗಿಡಿ ಮೂಲ ಬೆಲೆ 1 ಕೋಟಿ ಇದ್ದು ₹1 ಕೋಟಿಗೆ ಖರೀದಿಸಿದೆ.
* ಸ್ವಪ್ನಿಲ್ ಸಿಂಗ್ ಮೂಲ ಬೆಲೆ 30 ಲಕ್ಷ ಇದ್ದು ₹50 ಲಕ್ಷಕ್ಕೆ ಖರೀದಿಸಿದೆ.
* ಮೋಹಿತ್ ರಾಠಿ ಮೂಲ ಬೆಲೆ 30 ಲಕ್ಷ ಇದ್ದು ₹30 ಲಕ್ಷಕ್ಕೆ ಖರೀದಿಸಿದೆ.
* ಅಭಿನಂದನ್ ಸಿಂಗ್ ಮೂಲ ಬೆಲೆ 30 ಲಕ್ಷ ಇದ್ದು ₹30 ಲಕ್ಷಕ್ಕೆ ಖರೀದಿಸಿದೆ.
* ಸ್ವಸ್ತಿಕ ಚಿಕಾರ ಮೂಲ ಬೆಲೆ 30 ಲಕ್ಷ ಇದ್ದು ₹30 ಲಕ್ಷಕ್ಕೆ ಖರೀದಿಸಿದೆ.
* ಮನೋಜ್ ಭಾಂಡಗೆಮೂಲ ಬೆಲೆ 30 ಲಕ್ಷ ಇದ್ದು ₹30 ಲಕ್ಷಕ್ಕೆ ಖರೀದಿಸಿದೆ.
Advertisement