ಕಾನ್ಪುರ: ಕಾನ್ಪುರದಲ್ಲಿ ನಡೆದ ಭಾರತ-ಬಾಂಗ್ಲಾದೇಶದ ನಡುವಿನ 2 ನೇ ಟೆಸ್ಟ್ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಜಯ ಗಳಿಸಿದ್ದು 2-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ.
4 ನೇ ದಿನದಂದು 2 ವಿಕೆಟ್ ನಷ್ಟಕ್ಕೆ 26 ರನ್ ಗಳಿಂದ ಪಂದ್ಯವನ್ನು ಮುಂದುವರೆಸಿದೆ ಬಾಂಗ್ಲಾದೇಶ 146 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ 95 ರನ್ ಗಳ ಗುರಿ ನೀಡಿತ್ತು.
ಚೇಸಿಂಗ್‌ನಲ್ಲಿ ಭಾರತ ಆಕ್ರಮಣಕಾರಿ ಆಟ ಪ್ರಾರಂಭಿಸಿತು ಆದರೆ ಆರಂಭಿಕ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಜೈಸ್ವಾಲ್ 51 ರನ್ ಗಳಿಸಿ ಔಟಾದರು. ಅಂತಿಮವಾಗಿ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಭಾರತ ತಂಡ ಏಳು ವಿಕೆಟ್‌ಗಳ ಜಯ ಗಳಿಸುವಲ್ಲಿ ನೆರವಾದರು.
ಭಾರತದ ಪರ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ತಲಾ ಮೂರು ವಿಕೆಟ್ ಪಡೆದರು. ಬಾಂಗ್ಲಾ ಪರ ಮೆಹಿದಿ ಹಸನ್ ಮಿರಾಜ್ ಎರಡು ವಿಕೆಟ್ ಪಡೆದರೆ, ತೈಜುಲ್ ಇಸ್ಲಾಂ ಒಂದು ವಿಕೆಟ್ ಪಡೆದರು.
Advertisement