ಬಾಂಗ್ಲಾದೇಶ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಭಾರತೀಯ ಬ್ಯಾಟರ್ ಗಳ ಅಬ್ಬರಕ್ಕೆ ಬಾಂಗ್ಲಾ ಬೌಲರ್ ಗಳು ಅಕ್ಷರಶಃ ತತ್ತರಿಸಿದರು.
ಹೈದರಾಬಾದ್ ನಲ್ಲಿ ನಡೆಯುತ್ತಿರುವ ಮೂರನೇ ಟಿ20 ಪಂದ್ಯದಲ್ಲಿ ಮೊದಲು ಭಾರತ ಬ್ಯಾಟಿಂಗ್ ಮಾಡಿತು. ಸಂಜು ಸ್ಯಾಮ್ಸನ್ ಮತ್ತು ಸೂರ್ಯಕುಮಾರ್ ಅಬ್ಬರ ಬ್ಯಾಟಿಂಗ್ ನಡೆಸಿದರು. ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಸ್ಯಾಮ್ಸನ್ 22 ಎಸೆತಗಳಲ್ಲಿ 50 ರನ್ ಪೇರಿಸಿ ವೇಗದ ಅರ್ಧಶತಕ ಸಿಡಿಸಿದರು. ಇದರ ಬೆನ್ನಲ್ಲೇ ಸೂರ್ಯಕುಮಾರ್ ಸಹ 23 ಎಸೆತಗಳಲ್ಲಿ 50 ರನ್ ಪೇರಿಸಿದರು.
ಇನ್ನು ರಶೀದ್ ಹುಸೇನ್ ಅವರ 2ನೇ ಓವರ್ ನಲ್ಲಿ ಆರ್ಭಟಿಸಿದ ಸ್ಯಾಮನ್ಸ್ ಮೊದಲ ಎಸೆತದಲ್ಲಿ ಶೂನ್ಯ ಸುತ್ತಿದರು. ಆದರೆ ನಂತರ ಐದು ಎಸೆತಗಳನ್ನು ಸಿಕ್ಸರ್ ಬಾರಿಸುವ ಮೂಲಕ ಒಂದೇ ಓವರ್ ನಲ್ಲಿ 30 ರನ್ ಪೇರಿಸಿದರು. ನಂತರ ಸ್ಫೋಟಕ ಬ್ಯಾಟಿಂಗ್ ನಡೆಸಿದ ಸಂಜು ಸ್ಯಾಮನ್ಸ್ 40ನೇ ಎಸೆತವನ್ನು ಬೌಂಡರಿ ಸಿಡಿಸುವ ಮೂಲಕ ದಾಖಲೆಯ ಶತಕ ಸಿಡಿಸಿದರು.
Advertisement