3rd T20I: ಭಾರತಕ್ಕೆ 3ನೇ ಅತಿದೊಡ್ಡ ಜಯ; ಅತಿಹೆಚ್ಚು ರನ್ ಬಂದ 2ನೇ ಪಂದ್ಯ!

ಭಾರತಕ್ಕೆ ಟಿ20 ಕ್ರಿಕೆಟ್ ನಲ್ಲಿ ಸಿಕ್ಕ 3ನೇ ಅತೀ ದೊಡ್ಡ ಗೆಲುವಾಗಿದೆ. ಇದಕ್ಕೂ ಮೊದಲು ಭಾರತ 2023ರಲ್ಲಿ ನ್ಯೂಜಿಲೆಂಡ್ ವಿರುದ್ಧ 168ರನ್ ಗಳ ಜಯ ದಾಖಲಿಸಿತ್ತು. ಇದು ಟಿ20ಯಲ್ಲಿ ರನ್ ಗಳ ಲೆಕ್ಕಾಚಾರದಲ್ಲಿ ಭಾರತಕ್ಕೆ ಸಿಕ್ಕ ಅತೀ ದೊಡ್ಡ ಗೆಲುವಾಗಿದೆ.
team india
ಚಾಂಪಿಯನ್ ಭಾರತ
Updated on

ಹೈದರಾಬಾದ್: ಬಾಂಗ್ಲಾದೇಶ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಭಾರತ 133 ರನ್ ಗಳ ಅಂತರದ ಭರ್ಜರಿ ಜಯ ದಾಖಲಿಸಿದ್ದು ಇದು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಭಾರತಕ್ಕೆ ಸಿಕ್ಕ 3ನೇ ಅತೀ ದೊಡ್ಡ ಗೆಲುವಾಗಿದೆ.

ನಿನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ ನಿಗಧಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 296 ರನ್ ಕಲೆಹಾಕಿತ್ತು. ಭಾರತ ತಂಡದ ಪರ ಸಂಜು ಸ್ಯಾಮ್ಸನ್ (111 ರನ್) ಅಮೋಘ ಶತಕ ಸಿಡಿಸಿದರೆ, ಸೂರ್ಯ ಕುಮಾರ್ (75 ರನ್) ಅರ್ಧಶತಕ, ಹಾರ್ದಿಕ್ ಪಾಂಡ್ಯ (47 ರನ್) ಮತ್ತು ರಿಯಾನ್ ಪರಾಗ್ (34) ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು.

team india
ಸಿಕ್ಸರ್‌ಗಳ ಸುರಿಮಳೆ: T20 ಕ್ರಿಕೆಟ್ ನಲ್ಲಿ 297 ರನ್ ಸಿಡಿಸಿ Team India ಐತಿಹಾಸಿಕ ದಾಖಲೆ!

ಈ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಬಾಂಗ್ಲಾದೇಶ ತಂಡ 20 ಓವರ್ ನಲ್ಲಿ 164 ರನ್ ಗಳಿಸಿ ಅಲೌಟ್ ಆಯಿತು. ಆ ಮೂಲಕ 133 ರನ್ ಗಳ ಅಂತರದಲ್ಲಿ ಸೋಲು ಕಂಡಿತು. ಇದು ಭಾರತಕ್ಕೆ ಟಿ20 ಕ್ರಿಕೆಟ್ ನಲ್ಲಿ ಸಿಕ್ಕ 3ನೇ ಅತೀ ದೊಡ್ಡ ಗೆಲುವಾಗಿದೆ. ಇದಕ್ಕೂ ಮೊದಲು ಭಾರತ 2023ರಲ್ಲಿ ನ್ಯೂಜಿಲೆಂಡ್ ವಿರುದ್ಧ 168 ರನ್ ಗಳ ಜಯ ದಾಖಲಿಸಿತ್ತು. ಇದು ಟಿ20ಯಲ್ಲಿ ರನ್ ಗಳ ಲೆಕ್ಕಾಚಾರದಲ್ಲಿ ಭಾರತಕ್ಕೆ ಸಿಕ್ಕ ಅತೀ ದೊಡ್ಡ ಗೆಲುವಾಗಿದೆ.

Highest victory margins for India in T20Is

  • 168 runs vs NZ, Ahmedabad, 2023

  • 143 runs vs IRE, Dublin, 2018

  • 133 runs vs BAN, Hyderabad, 2024

  • 106 runs vs SA, Johannesburg, 2023

  • 101 runs vs AFG, Dubai, 2022

  • 100 runs vs ZIM, Harare, 2024

ಗರಿಷ್ಠ ರನ್ ಹರಿದು ಬಂದ 2ನೇ ಟಿ20 ಪಂದ್ಯ

ಇನ್ನು ಈ ಪಂದ್ಯದಲ್ಲಿ ರನ್ ಗಳ ಸುರಿಮಳೆಯೇ ಹರಿದಿದ್ದು, ಕೇವಲ 40 ಓವರ್ ನಲ್ಲಿ ಬರೊಬ್ಬರಿ 461ರನ್ ಗಳು ಹರಿದುಬಂದಿದೆ. ಈ ಪೈಕಿ ಭಾರತ 296 ರನ್ ಗಳಿಸಿದರೆ, ಬಾಂಗ್ಲಾದೇಶ 164 ರನ್ ಗಳಿಸಿತ್ತು. ಆ ಮೂಲಕ ಇದು ಟಿ20 ಇತಿಹಾಸದಲ್ಲಿ ಪಂದ್ಯವೊಂದರಲ್ಲಿ ಬಂದ 2ನೇ ಗರಿಷ್ಠ ರನ್ ಗಳಾಗಿದೆ. ಇದಕ್ಕೂ ಮೊದಲು 2019ರಲ್ಲಿ ಐರ್ಲೆಂಡ್ ಮತ್ತು ಆಪ್ಘಾನಿಸ್ತಾನ ಪಂದ್ಯದಲ್ಲಿ 472 ರನ್ ಹರಿದು ಬಂದಿತ್ತು. ಅಂದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ 278 ರನ್ ಗಳಿಸಿದ್ದರೆ, 2ನೇ ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ 194 ರನ್ ಕಲೆಹಾಕಿತ್ತು.

Highest match-aggregates in T20Is in India

  • 472 - AFG vs IRE, Dehradun, 2019

  • 461 - IND vs BAN, Hyderabad, 2024

  • 459 - ENG vs SA, Mumbai WS, 2016

  • 458 - IND vs SA, Guwahati, 2022

  • 447 - IND vs AUS, Guwahati, 2023

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com