ಸರ್ಫರಾಜ್ ಖಾನ್ ಜಿಗಿದು ಜಿಗದು ರನ್ಔಟ್ ತಪ್ಪಿಸಿದ್ದು ಫಲ ಕೊಡಲಿಲ್ಲ; 99 ರನ್‌ಗೆ ಬೌಲ್ಡ್ ಆದ ರಿಷಬ್ ಪಂತ್, ವಿಡಿಯೋ!

ಇದನ್ನು ಗಮನಿಸಿದ ಕಾಮೆಂಟೇಟರ್ ರವಿಶಾಸ್ತ್ರಿ, 'ಸರ್ಫರಾಜ್ ಖಾನ್ ಇಲ್ಲಿ ರೈನ್ ಡ್ಯಾನ್ಸ್ ಮಾಡುತ್ತಿದ್ದಾರೆ' ಎಂದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ನಾಲ್ಕನೇ ಬೆಳಿಗ್ಗೆ ಸರ್ಫರಾಜ್ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಗಳಿಸಿದರು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತವು 46 ರನ್‌ಗಳಿಗೆ ಆಲೌಟ್ ಆದ ನಂತರ ಶನಿವಾರ ಬೆಳಿಗ್ಗೆ ಸರ್ಫರಾಜ್ ಖಾನ್ ಮತ್ತು ರಿಷಬ್ ಪಂತ್ ಒಟ್ಟಾಗಿ ಭಾರತದ ಪುನರಾಗಮನಕ್ಕೆ ಕಾರಣರಾದರು. ಆತಿಥೇಯರು ತಮ್ಮ ಎರಡನೇ ಇನ್ನಿಂಗ್ಸ್‌ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಸರ್ಫರಾಜ್ ಖಾನ್ ಅವರ ಅದ್ಭುತ ಅರ್ಧಶತಕಗಳೊಂದಿಗೆ ಅದ್ಭುತ ಪುನರಾಗಮನವನ್ನು ಮಾಡಿದರು. ನಾಲ್ಕನೇ ದಿನದ ಆಟದಲ್ಲಿ ಪಂತ್ ಮತ್ತು ಸರ್ಫರಾಜ್ ಜವಾಬ್ದಾರಿ ವಹಿಸಿಕೊಂಡರು. ಸ್ವಲ್ಪ ಸಮಯದಲ್ಲೇ ಅರ್ಧಶತಕದ ಜೊತೆಯಾಟ ನಡೆಸಿದರು. ಭಾರತದ ಪರ ರನ್‌ಗಳು ಹರಿದುಬರುತ್ತಿದ್ದವು. ಆದರೆ ಕಿವೀಸ್ ತಂಡವು ಯಶಸ್ಸನ್ನು ಸಾಧಿಸಲು ಶ್ರಮಿಸುತ್ತಿದೆ. ಈ ಸಮಯದಲ್ಲಿ, ಪ್ರವಾಸಿ ತಂಡಕ್ಕೆ ಪಂತ್ ರನ್ ಔಟ್ ಮಾಡುವ ಅವಕಾಶ ಸಿಕ್ಕಿತು. ಆದರೆ ಸರ್ಫರಾಜ್ ತನ್ನ ಚಾಣಾಕ್ಷ ನಡೆ ಬಳಸಿ ಅದನ್ನು ವಿಫಲಗೊಳಿಸಿದರು.

ಮ್ಯಾಟ್ ಹೆನ್ರಿ ಅವರ ಬಾಲ್‌ನಲ್ಲಿ ಕಟ್ ಆಡಿದ ನಂತರ ಸರ್ಫರಾಜ್ ಒಂದು ರನ್ ತೆಗೆದುಕೊಂಡರು. ಆದರೆ ಪಂತ್ ಬಹುಶಃ ಎರಡನೇ ರನ್ ತೆಗೆದುಕೊಳ್ಳಲು ಬಯಸಿದ್ದರು. ಈ ವೇಳೆ ನಾನ್ ಸ್ಟ್ರೈಕ್ ಕಡೆ ಬರುತ್ತಿದ್ದ ರಿಷಪ್ ಪಂತ್ ಗೆ ಸರ್ಫರಾಜ್ ಖಾನ್ ಜಿಗಿದು ಜಿಗಿದು ಜೋರಾಗಿ ಕೂಗುತ್ತಾ ಪಂತ್ ಗಮನವನ್ನು ತನ್ನತ್ತ ಸೆಳೆದು ಕ್ರೀಜ್ ಗೆ ಹಿಂತಿರುಗುವಂತೆ ಸೂಚಿಸಿದರು. ಇನ್ನು ಅದೃಷ್ಟವಶಾತ್ ಡ್ಯಾರಿಲ್ ಮಿಚೆಲ್ ಸ್ಟಂಪ್‌ಗಿಂತ ಸಾಕಷ್ಟು ಮುಂದಿದ್ದರು. ಆದರೆ ಥ್ರೋ ಸ್ಟಂಪ್‌ಗೆ ತಾಗಲಿಲ್ಲ. ಪಂತ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಆದರೆ ಸರ್ಫರಾಜ್ ಅವರ ಈ ನಡೆ ಎಲ್ಲರ ಗಮನ ಸೆಳೆಯಿತು.

ಇದನ್ನು ಗಮನಿಸಿದ ಕಾಮೆಂಟೇಟರ್ ರವಿಶಾಸ್ತ್ರಿ, 'ಸರ್ಫರಾಜ್ ಖಾನ್ ಇಲ್ಲಿ ರೈನ್ ಡ್ಯಾನ್ಸ್ ಮಾಡುತ್ತಿದ್ದಾರೆ' ಎಂದಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ನಾಲ್ಕನೇ ಬೆಳಿಗ್ಗೆ ಸರ್ಫರಾಜ್ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಗಳಿಸಿದರು. ಅವರು ಕೇವಲ 110 ಎಸೆತಗಳಲ್ಲಿ ಕವರ್‌ಗಳ ಮೇಲೆ ಬೌಂಡರಿ ಬಾರಿಸುವ ಮೂಲಕ ಈ ಸಾಧನೆ ಮಾಡಿದರು. ಮೂರು ಅಂಕಿಗಳನ್ನು ತಲುಪಿದ ತಕ್ಷಣ, ಸರ್ಫರಾಜ್ ತನ್ನ ಕೈಗಳನ್ನು ಮೇಲಕ್ಕೆತ್ತಿ ಸಂತೋಷದಿಂದ ಸಂಭ್ರಮಾಚರಣೆ ಮಾಡಿದರು.

ಸಂಗ್ರಹ ಚಿತ್ರ
1st test, Day 4: 99 ರನ್ ಗೆ ಔಟ್; ದ್ರಾವಿಡ್, ಸಚಿನ್ ದಾಖಲೆಯತ್ತ ಸಾಗಿದ Rishabh Pant!

ಸರ್ಫರಾಜ್ ಟೆಸ್ಟ್ ಇತಿಹಾಸದಲ್ಲಿ ಒಂದೇ ಟೆಸ್ಟ್‌ನಲ್ಲಿ ಡಕ್ ಮತ್ತು ಶತಕ ಗಳಿಸಿದ 22ನೇ ಭಾರತೀಯ ಬ್ಯಾಟ್ಸ್‌ಮನ್ ಆಗಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದ ಈ ಪಂದ್ಯದಿಂದ ಹೊರಗುಳಿದಿದ್ದ ಶುಭಮನ್ ಗಿಲ್ ಇತ್ತೀಚೆಗಷ್ಟೇ ಬಾಂಗ್ಲಾದೇಶ ವಿರುದ್ಧದ ಚೆನ್ನೈ ಟೆಸ್ಟ್ ನಲ್ಲಿ ಶೂನ್ಯ ಹಾಗೂ ಶತಕ ಸಿಡಿಸಿದ್ದರು. ಇನ್ನು 105 ಎಸೆತಗಳನ್ನು ಎದುರಿಸಿದ ಪಂತ್ 5 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 99 ರನ್ ಕಲೆ ಹಾಕಿ ವಿಲಿಯಮ್ ಓರೌರ್ಕೆ ಬೌಲಿಂಗ್ ನಲ್ಲಿ ಔಟ್ ಆಗಿ ಕೇವಲ 1 ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com