
ಬೆಂಗಳೂರು: ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿ ಕೇವಲ 1 ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡ ಭಾರತದ ವಿಕೆಟ್ ಕೀಪರ್ ಬ್ಯಾಟರ್ ರಿಷಬ್ ಪಂತ್ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.
ಇಂದು ಪಂತ್ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. 105 ಎಸೆತಗಳನ್ನು ಎದುರಿಸಿದ ಪಂತ್ 5 ಸಿಕ್ಸರ್ ಮತ್ತು 9 ಬೌಂಡರಿಗಳ ನೆರವಿನಿಂದ 99 ರನ್ ಕಲೆ ಹಾಕಿ ವಿಲಿಯಮ್ ಓರೌರ್ಕೆ ಬೌಲಿಂಗ್ ನಲ್ಲಿ ಔಟ್ ಆಗಿ ಕೇವಲ 1 ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡರು. ಆ ಮೂಲಕ ಪಂತ್ 7ನೇ ಬಾರಿಗೆ 90ರಅಸುಪಾಸಿನಲ್ಲಿ ಔಟಾಗಿದ್ದು, ಈ ಪಟ್ಟಿಯಲ್ಲಿ 3ನೇ ಸ್ಥಾನಕ್ಕೇರಿದ್ದಾರೆ.
ಅತೀ ಹೆಚ್ಚು ಬಾರಿ 90ರ ಆಸುಪಾಸಿನಲ್ಲಿ ಔಟಾದ ಆಟಗಾರರ ಪಟ್ಟಿಯಲ್ಲಿ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಅಗ್ರಸ್ಥಾನದಲ್ಲಿದ್ದು, ಸಚಿನ್ ಒಟ್ಟು 10 ಬಾರಿ 90ರ ಆಸುಪಾಸಿನಲ್ಲಿ ಔಟಾಗಿದ್ದಾರೆ. 2ನೇ ಸ್ಥಾನದಲ್ಲಿರುವ ರಾಹುಲ್ ದ್ರಾವಿಡ್ 9 ಬಾರಿ, 4ನೇ ಸ್ಥಾನದಲ್ಲಿ 5 ಬಾರಿ ಔಟಾಗಿರುವ ಸುನಿಲ್ ಗವಾಸ್ಕರ್ ಇದ್ದಾರೆ. ಅಂದಹಾಗೆ ಧೋನಿ ಮತ್ತು ವಿರೇಂದ್ರ ಸೆಹ್ವಾಗ್ ಕೂಡ ತಲಾ 5 ಬಾರಿ 90ರ ಆಸುಪಾಸಿನಲ್ಲಿ ಔಟಾಗಿದ್ದಾರೆ.
Most dismissals in 90s in Tests for India
10 - Sachin Tendulkar
9 - Rahul Dravid
7 - Rishabh Pant
5 - Sunil Gavaskar
5 - MS Dhoni
5 - Virender Sehwag
3ನೇ ಇನ್ನಿಂಗ್ಸ್ ನಲ್ಲಿ ಪಂತ್ ಭರ್ಜರಿ ಬ್ಯಾಟಿಂಗ್
ಇನ್ನು ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್ ನಲ್ಲಿ ತಾವಾಡಿರುವ ಕೊನೆಯ 5 ಪಂದ್ಯಗಳ 3ನೇ ಇನ್ನಿಂಗ್ಸ್ ಗಳಲ್ಲಿ ಭರ್ಜರಿ ಬ್ಯಾಟಿಂಗ್ ನಡೆಸಿದ್ದು, 3 ಅರ್ಧಶತಕ ಮತ್ತು 2 ಶತಕಗಳನ್ನು ಸಿಡಿಸಿದ್ದಾರೆ. ಈ ಪೈಕಿ ಇಂದಿನ 99 ರನ್ ಗಳು ಕೂಡ ಸೇರಿದೆ.
Rishabh Pant’s last five knocks in 3rd innings of a Test
100*(139) vs SA, Cape Town, 2022
50(31) vs SL, Bengaluru, 2022
57(86) vs ENG, Edgbaston, 2022
109(128) vs BAN, Chennai, 2024
99(104) vs NZ, Bengaluru, 2024
99 ರನ್ ಗೆ ಔಟಾದ ಭಾರತದ 2ನೇ ಆಟಗಾರ
ಅಂತೆಯೇ ಪಂತ್ ಟೆಸ್ಟ್ ಕ್ರಿಕೆಟ್ ನಲ್ಲಿ 99 ರನ್ ಗೆ ಔಟಾದ ಭಾರತದ 2ನೇ ಮತ್ತು ಜಗತ್ತಿನ 4ನೇ ವಿಕೆಟ್ ಕೀಪರ್ ಬ್ಯಾಟರ್ ಎಂಬ ಕುಖ್ಯಾತಿಗೂ ಪಾತ್ರರಾಗಿದ್ದಾರೆ. ಈ ಹಿಂದೆ 2005ರಲ್ಲಿ ನೇಪಿಯರ್ ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್ ಮೆಕ್ಕಲಮ್ ಶ್ರೀಲಂಕಾ ವಿರುದ್ಧ 99 ರನ್ ಗೆ ಔಟಾಗಿದ್ದರು. 2012ರಲ್ಲಿ ನಾಗ್ಪುರದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ 99 ರನ್ ಗೆ ಔಟಾಗಿದ್ದರು. ಇದೀಗ ಬೆಂಗಳೂರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಪಂತ್ ಕೂಡ 99 ರನ್ ಗೆ ಔಟಾಗಿದ್ದಾರೆ.
Wicketkeepers dismissed on 99 in Tests
Brendon McCullum (NZ) vs SL, Napier, 2005
MS Dhoni (IND) vs ENG, Nagpur, 2012
Jonny Bairstow (ENG) vs SA, Old Trafford, 2017
Rishabh Pant (IND) vs NZ, Bengaluru, 2024
Advertisement