ನವದೆಹಲಿ: ಟೀಂ ಇಂಡಿಯಾ ರನ್ ಮೆಷನ್ ವಿರಾಟ್ ಕೊಹ್ಲಿ ಮತ್ತು ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ತಮ್ಮ ನಡುವಿನ ವಿವಾದಗಳಿಗೆ ತೆರೆ ಎಳೆದಿದ್ದು, ವಿಶೇಷ ಸಂದರ್ಶನದ ಮೂಲಕ 'ಎಲ್ಲ ಮಸಾಲೆಗಳಿಗೂ ಫುಲ್ ಸ್ಟಾಪ್' ಹಾಕಿದ್ದಾರೆ.
ಹೌದು.. ಬಾಂಗ್ಲಾ ವಿರುದ್ಧದ ಸರಣಿಗೂ ಮುನ್ನವೇ ವಿರಾಟ್ ಕೊಹ್ಲಿ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ನಡುವೆ ಬಿಸಿಸಿಐ ವಿಶೇಷ ಸಂದರ್ಶನವನ್ನು ಏರ್ಪಡಿಸಿದೆ. ಅದರ ಪ್ರೋಮೋ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಪ್ರೋಮೋದಲ್ಲಿ ಗಂಭೀರ್ ಮತ್ತು ಕೊಹ್ಲಿ ತಮ್ಮ ಕೆಲವು ವಿಶೇಷ ಇನ್ನಿಂಗ್ಸ್ ಅನ್ನು ನೆನಪಿಸಿಕೊಂಡಿದ್ದಾರೆ.
ಬಿಸಿಸಿಐನ ವಿಶೇಷ ಸಂದರ್ಶನದಲ್ಲಿ ರನ್ ಮೆಷನ್ ವಿರಾಟ್ ಕೊಹ್ಲಿ ಮತ್ತು ತಂಡದ ಪ್ರಧಾನ ಕೋಚ್ ಗೌತಮ್ ಗಂಭೀರ್ ಪಾಲ್ಗೊಂಡು ತಮ್ಮ ನಡುವಿನ ವಿವಾದಗಳು ಮತ್ತು ಗೊಂದಲಗಳಿಗೆ ತೆರೆ ಎಳೆಯುವ ಕೆಲಸ ಮಾಡಿದ್ದಾರೆ.
ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಚಿಟ್ ಚಾಟ್ವೊಂದರಲ್ಲಿ ಕಾಣಿಸಿಕೊಂಡಿದ್ದು, ಮಾತ್ರವಲ್ಲದೇ ತಮ್ಮಿಬ್ಬರ ನಡುವೆ ಹಬ್ಬಿರುವ ಮಸಾಲ ಸುದ್ದಿಗಳಿಗೆ ತೆರೆ ಎಳೆದಿದ್ದಾರೆ. ಬಿಸಿಸಿಐ ಹಂಚಿಕೊಂಡಿರುವ ವಿಡಿಯೋ ಚಾಟ್ನಲ್ಲಿ ಗಂಭೀರ್ ಹಾಗೂ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದು, ಅದರಲ್ಲೂ ಆಸೀಸ್ ವಿರುದ್ಧ ರನ್ ಸುರಿಮಳೆಗೈದಿದ್ದ ಕಿಂಗ್ ಕೊಹ್ಲಿಯ ಪರಾಕ್ರಮವನ್ನು ಗೌತಮ್ ಗಂಭೀರ್ ಹಾಡಿ ಹೊಗಳಿದ್ದಾರೆ.
ಈ ಹೊಗಳಿಕೆಯ ನಡುವೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ವಿರುದ್ಧದ ವಾಕ್ಸಮರವನ್ನು ಪ್ರಸ್ತಾಪಿಸಿದ್ದಾರೆ. ಈ ವೇಳೆ ಗಂಭೀರ್ ನನಗಿಂತ ಹೆಚ್ಚು ವಾಗ್ವಾದಗಳನ್ನು ನೀನೇ ಮಾಡಿರುವೆ ಎಂದು ಕಾಲೆಳೆದಿದ್ದಾರೆ. ಈ ಸಂದರ್ಶನದಲ್ಲಿ, ಇಬ್ಬರ ನಡುವೆ ಕೆಲವು ತಮಾಷೆಯ ಸಂಭಾಷಣೆಗಳು ಸಹ ನಡೆದಿವೆ.
ನೀವು ಬ್ಯಾಟಿಂಗ್ ಅಥವಾ ಫೀಲ್ಡಿಂಗ್ ಮಾಡುವಾಗ ಎದುರಾಳಿಗಳೊಂದಿಗೆ ಸಂಘರ್ಷ ಎದುರಾದರೆ, ಅದು ನಿಮ್ಮನ್ನು ಕಂಫರ್ಟ್ ಝೋನ್‌ನಿಂದ ಹೊರಹಾಕುತ್ತದೆಯೇ? ಅಥವಾ ಇನ್ನೂ ಪ್ರೇರೇಪಿಸುತ್ತದೆಯೇ? ಎಂದು ಕೊಹ್ಲಿ ಪ್ರಶ್ನೆ ಮಾಡಿದಾಗ ನಗುತ್ತಲೇ ಉತ್ತರಿಸಿದ ಗಂಭೀರ್, ನೀವು ನನಗಿಂತ ಹೆಚ್ಚು ಜಗಳವಾಡುತ್ತೀರಾ? ಇದಕ್ಕೆ ಉತ್ತರ ನಿಮಗೇ ಗೊತ್ತಿರಬೇಕು ಎಂದಾಗ ಇಬ್ಬರು ನಗುತ್ತಾರೆ.
ಇದೀಗ ಈ ಚಿಟ್ ಚಾಟ್ ವಿಡಿಯೋದ ಝಲಕ್ ಅನ್ನು ಬಿಸಿಸಿಐ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ. ಇದೀಗ ಈ ಪ್ರೋಮೋ ವೈರಲ್ ಆಗಿದ್ದು, ಕ್ರಿಕೆಟ್ ಅಭಿಮಾನಿಗಳು ಪೂರ್ಣ ಸಂಚಿಕೆಗಾಗಿ ಕಾಯುತ್ತಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶ ಸರಣಿ
ಅಂದಹಾಗೆ ಬಾಂಗ್ಲಾದೇಶ ವಿರುದ್ಧ ಟೀಮ್ ಇಂಡಿಯಾ 2 ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಈ ಸರಣಿಯ ಮೊದಲ ಪಂದ್ಯವು ಗುರುವಾರ (ಸೆ.19) ಶುರುವಾಗಲಿದೆ. ಇನ್ನು ಎರಡನೇ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 27 ರಿಂದ ಆರಂಭವಗಾಲಿದೆ. ಸೆಪ್ಟೆಂಬರ್ 19 ರಿಂದ ಚೆನ್ನೈನ ಚೆಪಾಕ್ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯ ಶುರುವಾಗಲಿದೆ. ಇನ್ನು ಎರಡನೇ ಟೆಸ್ಟ್ ಪಂದ್ಯವು ಸೆಪ್ಟೆಂಬರ್ 27 ರಿಂದ ಕಾನ್ಪುರ ಗ್ರೀನ್ ಪಾರ್ಕ್ ಮೈದಾನದಲ್ಲಿ ನಡೆಯಲಿದೆ.
Advertisement