ಚೆನ್ನೈ: ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯಗಳಿಸಿದ್ದು, ಈ ಪಂದ್ಯದ ವೇಳೆ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ಬಾಂಗ್ಲಾದೇಶ ಅಭಿಮಾನಿಗಳನ್ನು ಅವರ 'ನಾಗಿನ್ ಡ್ಯಾನ್ಸ್' ಮೂಲಕ ಕಿಚಾಯಿಸಿದ್ದಾರೆ.
ಸಾಮಾನ್ಯವಾಗಿ ಬಾಂಗ್ಲಾ ಪಡೆ ಗೆದ್ದ ಬಳಿಕ ನಾಗಿಣಿ ನೃತ್ಯದೊಂದಿಗೆ ಸಂಭ್ರಮಿಸುವುದು ವಾಡಿಕೆ. ಆದರೆ ಚೆನ್ನೈ ಪಂದ್ಯದಲ್ಲಿ ಬಾಂಗ್ಲಾದೇಶಕ್ಕೆ ಗೆಲುವು ಸಾಧ್ಯವಾಗಿಲ್ಲ. ಇದೇ ಕಾರಣಕ್ಕೆ ಮೈದಾನದಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ವಿರಾಟ್ ಕೊಹ್ಲಿ ಭಾರತ ಆಟಗಾರರ ಕೆಣಕಿದ್ದ ಬಾಂಗ್ಲಾ ಅಭಿಮಾನಿಗಳನ್ನು ನಾಗಿನ್ ಡ್ಯಾನ್ಸ್ ಮೂಲಕ ಕಿಚಾಯಿಸಿದ್ದಾರೆ.
ಪಂದ್ಯದ ನಡುವೆ ಪ್ರೇಕ್ಷಕರತ್ತ ಮುಖ ಮಾಡಿದ ವಿರಾಟ್ ಕೊಹ್ಲಿ ನಾಗಿಣಿ ಸಿಗ್ನಲ್ ಮಾಡಿ, ಹಾವು ಕಚ್ಚುತ್ತೆ ಎಂದು ಟ್ರೋಲ್ ಮಾಡಿದ್ದಾರೆ. ಇದೀಗ ಕೊಹ್ಲಿಯ ಈ ಸಿಗ್ನಲ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Advertisement