
ಪವರ್‌ಪ್ಲೇ ಸಾಮಾನ್ಯವಾಗಿ ಟಿ20 ಪಂದ್ಯದ ಅತ್ಯಂತ ನಿರ್ಣಾಯಕ ಹಂತವಾಗಿರುತ್ತದೆ. ಇದು ಬ್ಯಾಟಿಂಗ್ ಮತ್ತು ಬೌಲಿಂಗ್ ಮಾಡುವ ಎರಡೂ ತಂಡಗಳಿಗೆ ಗೆಲುವಿಗೆ ಅಡಿಪಾಯ ಹಾಕಲು ನೆರವಾಗುತ್ತದೆ. ಆರಂಭಿಕರು ಗರಿಷ್ಠ ಸ್ಕೋರಿಂಗ್ ಸಾಧಿಸಲು ಪ್ರಯತ್ನಿಸಿದರೆ, ಬೌಲರ್‌ಗಳು ಕಡಿಮೆ ರನ್‌ಗಳಿಗೆ ಎದುರಾಳಿ ತಂಡವನ್ನು ಕಟ್ಟಿಹಾಕುವ ಮೂಲಕ ಒತ್ತಡ ಹೇರಲು ಪ್ರಯತ್ನಿಸುತ್ತಾರೆ. ಈಗ ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 18ನೇ ಆವೃತ್ತಿ ನಡೆಯುತ್ತಿದ್ದು, ಐಪಿಎಲ್ ಇತಿಹಾಸದಲ್ಲಿ ಮೊದಲ ಆರು ಓವರ್‌ಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಬೌಲರ್‌ಗಳು ಯಾರೆಂದು ತಿಳಿದುಕೊಳ್ಳೋಣ.
1. ಭುವನೇಶ್ವರ್ ಕುಮಾರ್
ಭಾರತದ ಸ್ಟಾರ್ ವೇಗಿ ಭುವನೇಶ್ವರ್ ಕುಮಾರ್ ಪವರ್‌ಪ್ಲೇನಲ್ಲಿ 73 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಭುವಿ ಸದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದಲ್ಲಿ ಆಡುತ್ತಿದ್ದು, ಮತ್ತಷ್ಟು ವಿಕೆಟ್‌ಗಳನ್ನು ನಿರೀಕ್ಷಿಸಬಹುದು.
2. ಟ್ರೆಂಟ್ ಬೌಲ್ಟ್
ಮುಂಬೈ ಇಂಡಿಯನ್ಸ್ ತಂಡದ ಎಡಗೈ ವೇಗಿ ಟ್ರೆಂಟ್ ಬೌಲ್ಟ್ ಪವರ್‌ಪ್ಲೇನಲ್ಲಿ ಈವರೆಗೆ 63 ವಿಕೆಟ್‌ಗಳನ್ನು ಪಡೆದಿದ್ದಾರೆ. ಈ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
3. ದೀಪಕ್ ಚಾಹರ್
ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಮಾಜಿ ವೇಗಿ ದೀಪಕ್ ಚಾಹರ್ ಪವರ್‌ಪ್ಲೇನಲ್ಲಿ 60 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಸದ್ಯ ಮುಂಬೈ ಇಂಡಿಯನ್ಸ್ ತಂಡದ ಭಾಗವಾಗಿದ್ದಾರೆ.
4. ಪ್ರವೀಣ್ ಕುಮಾರ್
ಟೀಂ ಇಂಡಿಯಾದ ಮಾಜಿ ವೇಗಿ ಪ್ರವೀಣ್ ಕುಮಾರ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಪವರ್‌ಪ್ಲೇನಲ್ಲಿ 60 ವಿಕೆಟ್‌ಗಳನ್ನು ಪಡೆಯುವ ಮೂಲಕ ನಾಲ್ಕನೇ ಸ್ಥಾನದಲ್ಲಿದ್ದಾರೆ. ಸದ್ಯ ನಿವೃತ್ತಿ ಪಡೆದಿದ್ದಾರೆ.
5. ಉಮೇಶ್ ಯಾದವ್
ಐಪಿಎಲ್‌ನಲ್ಲಿ ಅನುಭವಿ ಆಟಗಾರ ಉಮೇಶ್ ಯಾದವ್, ಪವರ್‌ಪ್ಲೇನಲ್ಲಿ ಬರೋಬ್ಬರಿ 58 ವಿಕೆಟ್‌ಗಳನ್ನು ಪಡೆಯುವ ಮೂಲಕ ಐದನೇ ಸ್ಥಾನದಲ್ಲಿದ್ದಾರೆ.
Advertisement