IPL 2025: RCB ವಿರುದ್ಧ ಅಮೋಘ ಬ್ಯಾಟಿಂಗ್; KL Rahul - Tristan Stubbs ದಾಖಲೆ ಜೊತೆಯಾಟ!
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿ ಡೆಲ್ಲಿ ತಂಡಕ್ಕೆ ಜಯ ತಂದುಕೊಟ್ಟ ಕೆಎಲ್ ರಾಹುಲ್ ಮತ್ತು ಟ್ರಿಸ್ಟನ್ ಸ್ಟಬ್ಸ್ ಅಪರೂಪದ ದಾಖಲೆಗೆ ಪಾತ್ರರಾಗಿದ್ದಾರೆ.
ನಿನ್ನೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6 ವಿಕೆಟ್ ಗಳ ಅಂತರದ ಹೀನಾಯ ಸೋಲು ಕಂಡಿತು.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಫಿಲ್ ಸಾಲ್ಟ್ ಶ್(37) ಮತ್ತು ಟಿಮ್ ಡೇವಿಡ್ (37) ಅಮೋಘ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 163 ರನ್ ಕಲೆಹಾಕಿತು.
ಈ ಮೊತ್ತವನ್ನು ಬೆನ್ನು ಹತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಕನ್ನಡಿಗ ಕೆಎಲ್ ರಾಹುಲ್ (ಅಜೇಯ 93 ರನ್) ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕೇವಲ 4 ವಿಕೆಟ್ ಕಳೆದುಕೊಂಡು 17.5 ಓವರ್ ನಲ್ಲೇ 169 ರನ್ ಗಳಿಸಿ 6 ವಿಕೆಟ್ ಅಂತರದಲ್ಲಿ ಜಯಭೇರಿ ಭಾರಿಸಿತು.
KL Rahul - Tristan Stubbs ಅಮೋಘ ಜೊತೆಯಾಟ!
ಇನ್ನು ಈ ಪಂದ್ಯದಲ್ಲಿ ಗೆಲುವು ಆರ್ ಸಿಬಿಯದ್ದೇ ಎಂದು ಹೇಳಲಾಗುತ್ತಿತ್ತು. ಆದರೆ ಬಳಿಕ ಸ್ಫೋಟಕ ಬ್ಯಾಟಿಂಗ್ ಮಾಡಿದ ಕೆಎಲ್ ರಾಹುಲ್ ಕೇವಲ 53 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 7 ಬೌಂಡರಿಗಳ ನೆರವಿನಿಂದ ಅಜೇಯ 93 ರನ್ ಗಳಿಸಿದರು. ರಾಹುಲ್ ಗೆ ಉತ್ತಮ ಸಾಥ್ ನೀಡಿದ ಟ್ರಿಸ್ಟನ್ ಸ್ಟಬ್ಸ್ ಅಜೇಯ 38 ರನ್ ಗಳಿಸಿದರು.
ಒಂದು ಹಂತದಲ್ಲಿ ತಾವಾಡಿದ ಮೊದಲ 28 ಎಸೆತಗಳಲ್ಲಿ 29 ರನ್ ಗಳಿಸಿದ್ದ ಕೆಎಲ್ ರಾಹುಲ್ ಬಳಿಕ ಕೇವಲ 25 ಎಸೆತಗಳಲ್ಲಿ ಬರೊಬ್ಬರಿ 64 ರನ್ ಚಚ್ಚಿದರು. ಅಂತೆಯೇ ಮತ್ತೊಂದು ಬದಿಯಲ್ಲಿ ಸ್ಟಬ್ಸ್ ಕೂಡ 38 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು. ಈ ಜೋಡಿ ಅಜೇಯಯ 111 ರನ್ ಗಳ ಜೊತೆಯಾಟ ಆಡಿ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅಮೋಘ ಜಯತಂದಿತ್ತರು.
ಜೊತೆಯಾಟದಲ್ಲೂ ದಾಖಲೆ
ಇನ್ನು ಈ ಜೋಡಿ 5 ವಿಕೆಟ್ ನಲ್ಲಿ ಕಲೆಹಾಕಿದ 111 ರನ್ ಗಳ ಜೊತೆಯಾಟ ಐಪಿಎಲ್ ಇತಿಹಾಸದಲ್ಲೇ 5ನೇ ವಿಕೆಟ್ ನಲ್ಲಿ ಡೆಲ್ಲಿ ಪರ ದಾಖಲಾದ ಗರಿಷ್ಠ ಜೊತೆಯಾಟವಾಗಿದೆ. ಇದಕ್ಕೂ ಮೊದಲು ಇದೇ ಆರ್ ಸಿಬಿ ವಿರುದ್ಧ 2014ರಲ್ಲಿ ಶಾರ್ಜಾದಲ್ಲಿ ನಡೆದ ಪಂದ್ಯದಲ್ಲಿ ಡೆಲ್ಲಿಯ ಜೆಪಿ ಡುಮಿನಿ ಮತ್ತು ರಾಸ್ ಟೇಲರ್ ಅಜೇಯ 110 ರನ್ ಜೊತೆಯಾಟವಾಡಿದ್ದರು.
Highest partnerships for 5th wicket or lower for DC
111* - KL Rahul & Tristan Stubbs vs RCB, Bengaluru, 2025
110* - JP Duminy & Ross Taylor vs RCB, Sharjah, 2014
93 - Rishabh Pant & Tristan Stubbs vs KKR, Visakhapatnam, 2024
91* - Kedar Jadhav & Saurabh Tiwary vs SRH, Raipur, 2015
91 - Chris Morris & Kagiso Rabada vs MI, Mumbai WS, 2017
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ