IPL 2025: PBKS ವಿರುದ್ಧ SRH ಸ್ಫೋಟಕ ಬ್ಯಾಟಿಂಗ್, Abhishek Sharma ದಾಖಲೆ; Virat Kohli ಕೂಡ ಇಲ್ಲದ ಎಲೈಟ್ ಗ್ರೂಪ್ ಸೇರ್ಪಡೆ!

ನಿನ್ನೆ ಅಭಿಷೇಕ್ ಶರ್ಮಾ ಗಳಿಸಿದ 141 ರನ್ ಗಳು ಐಪಿಎಲ್ ಇತಿಹಾಸದ ಆಟಗಾರನ 3ನೇ ವೈಯುಕ್ತಿಕ ಗರಿಷ್ಟ ರನ್ ಗಳಿಕೆಯಾಗಿದೆ.
Abhishek Sharma
ಅಭಿಷೇಕ್ ಶರ್ಮಾ
Updated on

ಹೈದರಾಬಾದ್: ಐಪಿಎಲ್ ಟೂರ್ನಿಯ ನಿನ್ನೆಯ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಅಮೋಘ ಬ್ಯಾಟಿಂಗ್ ಮಾಡಿದ ಅಭಿಷೇಕ್ ಶರ್ಮಾ ಹಲವು ದಾಖಲೆಗಳ ಬರೆದಿದ್ದಾರೆ.

ನಿನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ 246 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 18.3 ಓವರ್ ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 247 ರನ್ ಗಳಿಸಿ ಗುರಿ ಮುಟ್ಟಿತು. ಈ ಪಂದ್ಯದಲ್ಲಿ ಅಸಾಧ್ಯವಾಗಿದ್ದ ಗುರಿಯನ್ನು ಹೈದರಾಬಾದ್ ಯಶಸ್ವಿಯಾಗಿ ಮುಟ್ಟಿತ್ತು.

ಹೈದಾರಾಬಾದ್ ಗೆಲುವಿನಲ್ಲಿ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದರು. ಟ್ರಾವಿಸ್ ಹೆಡ್ 37 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿ ನೆರವಿನಿಂದ 66 ರನ್ ಸಿಡಿಸಿದರೆ, ಮತ್ತೊಂದು ಬದಿಯಲ್ಲಿದ್ದ ಅಭಿಷೇಕ್ ಶರ್ಮಾ ಕೇವಲ 55 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 14 ಬೌಂಡರಿಗಳ ಸಹಿತ 141 ರನ್ ಚಚ್ಚಿದರು.

Abhishek Sharma
IPL 2025: ಮೈದಾನದಲ್ಲಿ PBKS ವಿರುದ್ಧ SRH ರನ್ ಮಳೆ; ಸೃಷ್ಟಿಯಾಗಿದ್ದು ಎಷ್ಟು ದಾಖಲೆ ಗೊತ್ತಾ?

ಬೌಂಡರಿ ಸಿಕ್ಸರ್ ಗಳಲ್ಲೇ ಶತಕ

ಇನ್ನು ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ 10 ಸಿಕ್ಸರ್ ಮತ್ತು 14 ಬೌಂಡರಿ ಭಾರಿಸಿದ್ದು, ಈ ಬೌಂಡರಿ ಸಿಕ್ಸರ್ ಗಳ ಮೊತ್ತವೇ 116 ರನ್ ಗಳಾಗಿದೆ. ಆ ಮೂಲಕ ಅಭಿಷೇಕ್ ಶರ್ಮಾ ತಾವು ಗಳಿಸಿದ ಒಟ್ಟು 141 ರನ್ ಗಳ ಪೈಕಿ 116 ರನ್ ಗಳನ್ನು ಬೌಂಡರಿ ಮತ್ತು ಸಿಕ್ಸರ್ ಗಳಿಂದಲೇ ಭಾರಿಸಿದ್ದಾರೆ.

3ನೇ ವೈಯುಕ್ತಿಕ ಗರಿಷ್ಠ ರನ್

ನಿನ್ನೆ ಅಭಿಷೇಕ್ ಶರ್ಮಾ ಗಳಿಸಿದ 141 ರನ್ ಗಳು ಐಪಿಎಲ್ ಇತಿಹಾಸದ ಆಟಗಾರನ 3ನೇ ವೈಯುಕ್ತಿಕ ಗರಿಷ್ಟ ರನ್ ಗಳಿಕೆಯಾಗಿದೆ. ಈ ಹಿಂದೆ 2013ರಲ್ಲಿ ಆರ್ ಸಿಬಿ ಪರ ಕ್ರಿಸ್ ಗೇಯ್ಲ್ ಅಜೇಯ 175ರನ್ ಸಿಡಿಸಿದ್ದರು. ಇದು ಐಪಿಎಲ್ ಇತಿಹಾಸದ ಬ್ಯಾಟರ್ ಓರ್ವನ ವೈಯುಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಅಂತೆಯೇ

ಮೊದಲ ಆವೃತ್ತಿಯಲ್ಲಿ ಕೆಕೆಆರ್ ತಂಡದ ಮೆಕ್ಕಲಮ್ ಇದೇ ಆರ್ ಸಿಬಿ ವಿರುದ್ಧ 158ರನ್ ಚಚ್ಚಿದ್ದರು. ಇದು 2ನೇ ಸ್ಥಾನದಲ್ಲಿದೆ.

Highest individual scores in the IPL

  • 175* - Chris Gayle (RCB) vs PWI, 2013

  • 158* - B McCullum (KKR) vs RCB, 2008

  • 141 - Abhishek Sharma (SRH) vs PBKS, 2025*

  • 140* - Quinton de Kock (LSG) vs KKR, 2022

  • 133* - AB de Villiers (RCB) vs MI, 2015

Abhishek Sharma
IPL 2025: ಕಷ್ಟದ ಸಮಯದಲ್ಲಿ ತಮ್ಮನ್ನು ಬೆಂಬಲಿಸಿದ್ದು ಮುಂಬೈ ಇಂಡಿಯನ್ಸ್ ತಂಡದ ಇವರೇ: ಅಭಿಷೇಕ್ ಶರ್ಮಾ

6ನೇ ವೇಗದ ಶತಕ

ಇನ್ನು ಅಭಿಷೇಕ್ ಶರ್ಮಾ 40 ಎಸೆತಗಳಲ್ಲಿ ಶತಕ ಸಿಡಿಸಿದ್ದು, ಇದು ಐಪಿಎಲ್ ಇತಿಹಾಸದ 6ನೇ ವೇಗದ ಶತಕವಾಗಿದೆ. ಈ ಹಿಂದೆ ಆರ್ ಸಿಬಿ ತಂಡದ ಕ್ರಿಸ್ ಗೇಯ್ಲ್ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೇವಲ 30 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದು ಐಪಿಎಲ್ ಇತಿಹಾಸದ ವೇಗದ ಶತಕವಾಗಿದೆ.

Fastest hundred in IPL (by balls faced)

  • 30 - Chris Gayle (RCB) vs PWI, Bengaluru, 2013

  • 37 - Yusuf Pathan (RR) vs MI, Mumbai BS, 2010

  • 38 - David Miller (KXIP) vs RCB, Mohali, 2013

  • 39 - Travis Head (SRH) vs RCB, Bengaluru, 2024

  • 39 - Priyansh Arya (PBKS) vs CSK, Mullapur, 2025

  • 40 - Abhishek Sharma (SRH) vs PBKS, Hyderabad, 2025*

6ನೇ ವೇಗದ ಅರ್ಧ ಶತಕ

ಅಂತೆಯೇ ಅಭಿಷೇಕ್ ಶರ್ಮಾ ಕೇವಲ 19 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದರು. ಇದು ಐಪಿಎಲ್ ಇತಿಹಾಸದ ಜಂಟಿ 3 ಮತ್ತು ಒಟ್ಟಾರೆ 6ನೇ ವೇಗದ ಅರ್ಧ ಶತಕವಾಗಿದೆ.

Fastest fifty for SRH in IPL (by balls)

  • 16 - Abhishek Sharma vs MI Hyderabad 2024

  • 16 - Travis Head vs DC Delhi 2024

  • 16 - Travis Head vs LSG Hyderabad 2024

  • 18 - Travis Head vs MI Hyderabad 2024

  • 19 - Abhishek Sharma vs LSG, Hyderabad, 2024

  • 19 - Abhishek Sharma vs PBKS, Hyderabad, 2025*

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com