IPL 2025: 'ಈಗ ತಾನೆ ಬಾಲ್ ಹಿಡಿದ್ನಲ್ಲಾ ಗುರು.. ಎಲ್ಲೋಯ್ತು...'; ಚೆಂಡಿಗಾಗಿ ತಡಕಾಡಿದ Ishan Kishan; ಬಿದ್ದು ಬಿದ್ದು ನಕ್ಕ ಪ್ರೇಕ್ಷಕರು! Video

ಪಂಜಾಬ್ ಕಿಂಗ್ಸ್ ಇನಿಂಗ್ಸ್ ವೇಳೆ ಆರಂಭಿಕ ಆಟಗಾರ ಪ್ರಭ್​ಸಿಮ್ರಾನ್ ಮೊಹಮ್ಮದ್ ಶಮಿ ಎಸೆದ ಎಸೆತವನ್ನು ಬಾರಿಸಿದ ಸ್ಟ್ರೈಟ್ ಹಿಟ್ ಅನ್ನು ಇಶಾನ್ ಕಿಶನ್ ಓಡಿ ಹೋಗಿ ತಡೆದಿದ್ದರು.
Ishan Kishan
ಚೆಂಡಿಗಾಗಿ ತಡಕಾಡಿದ ಇಶಾನ್ ಕಿಶನ್
Updated on

ಹೈದರಾಬಾದ್: ನಿನ್ನೆ ಹೈದರಾಬಾದ್ ನಲ್ಲಿ ನಡೆದ ಪಂಜಾಬ್ ಮತ್ತು ಹೈದರಾಬಾದ್ ನಡುವಿನ ಪಂದ್ಯ ಬಿಗ್ ಸ್ಕೋರ್ ನ ಹೊರತಾಗಿಯೂ ಕೆಲ ಹಾಸ್ಯಮಯ ಸನ್ನಿವೇಶಕ್ಕೂ ವೇದಿಕೆಯಾಗಿತ್ತು.

ನಿನ್ನೆ ಹೈದರಾಬಾದ್ ನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ನೀಡಿದ 246 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಸನ್ ರೈಸರ್ಸ್ ಹೈದರಾಬಾದ್ ತಂಡ 18.3 ಓವರ್ ನಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು 247 ರನ್ ಗಳಿಸಿ ಗುರಿ ಮುಟ್ಟಿತು. ಈ ಪಂದ್ಯದಲ್ಲಿ ಅಸಾಧ್ಯವಾಗಿದ್ದ ಗುರಿಯನ್ನು ಹೈದರಾಬಾದ್ ಯಶಸ್ವಿಯಾಗಿ ಮುಟ್ಟಿತ್ತು.

ಹೈದಾರಾಬಾದ್ ಗೆಲುವಿನಲ್ಲಿ ಆರಂಭಿಕರಾದ ಟ್ರಾವಿಸ್ ಹೆಡ್ ಮತ್ತು ಅಭಿಷೇಕ್ ಶರ್ಮಾ ಪ್ರಮುಖ ಪಾತ್ರ ವಹಿಸಿದ್ದರು. ಟ್ರಾವಿಸ್ ಹೆಡ್ 37 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 9 ಬೌಂಡರಿ ನೆರವಿನಿಂದ 66 ರನ್ ಸಿಡಿಸಿದರೆ, ಮತ್ತೊಂದು ಬದಿಯಲ್ಲಿದ್ದ ಅಭಿಷೇಕ್ ಶರ್ಮಾ ಕೇವಲ 55 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 14 ಬೌಂಡರಿಗಳ ಸಹಿತ 141 ರನ್ ಚಚ್ಚಿದರು.

Ishan Kishan
IPL 2025, PBKS vs SRH: 'ಮೊದಲು ನನ್ನನ್ನು ಕೇಳಿ': ಪಂಜಾಬ್ ಕಿಂಗ್ಸ್ ಸಹ ಆಟಗಾರನ ಮೇಲೆ ಶ್ರೇಯಸ್ ಅಯ್ಯರ್ ಆಕ್ರೋಶ

ಫೀಲ್ಡಿಂಗ್ ವೇಳೆ ಚೆಂಡಿಗಾಗಿ ತಡಕಾಡಿದ ಇಶಾನ್ ಕಿಶನ್

ಇನ್ನು ಪಂಜಾಬ್ ಕಿಂಗ್ಸ್ ಇನಿಂಗ್ಸ್ ವೇಳೆ ಆರಂಭಿಕ ಆಟಗಾರ ಪ್ರಭ್​ಸಿಮ್ರಾನ್ ಮೊಹಮ್ಮದ್ ಶಮಿ ಎಸೆದ ಎಸೆತವನ್ನು ಬಾರಿಸಿದ ಸ್ಟ್ರೈಟ್ ಹಿಟ್ ಅನ್ನು ಇಶಾನ್ ಕಿಶನ್ ಓಡಿ ಹೋಗಿ ತಡೆದಿದ್ದರು. ಆದರೆ ಚೆಂಡು ತಡೆದ ಬಳಿಕ ಅವರು ಬಾಲ್​ಗಾಗಿ ಹುಡುಕಾಡಿದ್ದು ವಿಶೇಷವಾಗಿತ್ತು. ಚೆಂಡು ಜಾಹೀರಾತು ಬರಹಗಳ ಮೇಲೆ ನಿಂತಿದ್ದರಿಂದ ಇಶಾನ್ ಕಿಶನ್​ಗೆ ವೈಟ್ ಬಾಲ್ ಗೋಚರಿಸಲಿಲ್ಲ. ಈ ವೇಳೆ ಚೆಂಡು ಎಲ್ಲಿಗೆ ಹೋಯಿತು ಎಂದು ಇಶಾನ್ ಕಿಶನ್ ತಡಕಾಡಿದರು. ಆದರೆ ಇದನ್ನು ಗಮನಿಸಿದ ಹೈದರಾಬಾದ್ ತಂಡದ ನಾಯಕ ಪ್ಯಾಟ್ ಕಮಿನ್ಸ್ ಓಡಿ ಬಂದು ಚೆಂಡು ತೆಗೆದು ಕೊಂಡು ಎಸೆದರು. ಆ ಮೂಲಕ ಹೆಚ್ಚುವರಿ ರನ್ ಗಳ ತಡೆದರು.

ಆದರೆ ಪಕ್ಕದಲ್ಲೇ ಇದ್ದ ಚೆಂಡನ್ನು ಗುರುತಿಸದ ಇಶಾನ್ ಕಿಶನ್ ಆ ಸಂದರ್ಭದಲ್ಲಿ ಎಲ್ಲರ ನಗುವಿನ ಆಹಾರವಾಗಿದ್ದರು. ಅತ್ತ ಇಶಾನ್ ಕಿಶನ್ ಚೆಂಡಿಗಾಗಿ ತಡಕಾಡುತ್ತಿದ್ದರೆ ಪ್ರೇಕ್ಷಕರು ಮಾತ್ರ ನಗುವಿನ ಅಲೆಯಲ್ಲಿ ತೇಲುತ್ತಿದ್ದರು. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com